ಭಾನಾಮತಿ ಮಾಡಿಸಿ ತಂಗಿಯ ಸಾವಿಗೆ ಕಾರಣವಾಗಿದ್ದಾಳೆಂದು ಮಹಿಳೆಯ ಹತ್ಯೆ

ಕಲಬುರಗಿ : ಕಲಬುರಗಿ ನಗರದಲ್ಲಿ ನವೆಂಬರ್ 15ರಂದು ಬರ್ಬರ ಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ಮೃತಳ ಪತಿಯ ಅಕ್ಕನ ಮಗನೇ ಒಂದೂವರೆ ವರ್ಷದ ಮುದ್ದಾದ ಕಂದಮ್ಮನ ಎದುರೇ ಮಹಿಳೆಯನ್ನು ಬರ್ಬರವಾಗಿ ಹತ್ಯೆಗೈದು ಕಾಲ್ಕಿತ್ತಿದ್ದ ಕೊಲೆಗೀಡಾದ ಶರ್ಮಿಳಾ ಪತಿ ಸಂಜಯ್ ಸಹೋದರಿಯ ಮಗ ಕೃಷ್ಣನನ್ನು ಕಲಬುರಗಿ ಗ್ರಾಮೀಣ ಠಾಣೆ ಪೊಲೀಸರು ಬಂಧಿಸಿದ್ದಾರೆ.

ad

ಭಾನಾಮತಿ ಮಾಡಿ ತಂಗಿಯನ್ನು ಸಾಯಿಸಿದ್ದಾಳೆಂದು ಕೃತ್ಯ

ನವೆಂಬರ್ 15ರಂದು ಕಲಬುರಗಿ ಹೊರವಲಯ ರಾಮನಗರ ಬಡಾವಣೆಯಲ್ಲಿ ಒಂದೂವರೆ ವರ್ಷದ ಮುದ್ದಾದ ಕಂದಮ್ಮನ ಎದುರೇ ಆರೋಪಿ ಕೃಷ್ಣಾ ಚಾಕುವಿನಿಂದ ಇರಿದು ಶರ್ಮಿಳಾಳನ್ನು ಬರ್ಬರವಾಗಿ ಹತ್ಯೆ ಮಾಡಿದ್ದ. ಆರೋಪಿ ಕೃಷ್ಣಾ ಮೃತ ಶರ್ಮಿಳಾಳ ಪತಿ ಸಂಜಯ್ ಅಕ್ಕನ ಮಗ. ಆರೋಪಿ ಕೃಷ್ಣಾಳ ಸಹೋದರಿ ಪೂಜಾ ಜೊತೆ ಸಂಜಯ್ ವಿವಾಹ ಮಾಡಬೇಕೆಂದು ಕುಟುಂಬಸ್ಥರು ನಿರ್ಧರಿಸಿದ್ದರಂತೆ. ಆದರೆ ಪೂಜಾಳನ್ನು ಮದುವೆಯಾಗಲು ನಿರಾಕರಿಸಿದ್ದ ಸಂಜಯ್ ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ಸರಸಂಬಾ ಗ್ರಾಮದ ಶರ್ಮಿಳಾನ್ನು ಮದುವೆಯಾಗಿದ್ದ. ಶರ್ಮಿಳಾನ್ನು ಸಂಜಯ್ ಮದುವೆಯಾದ ಬಳಿಕ ಪೂಜಾ ಮಾನಸಿಕವಾಗಿ ನೊಂದಿದ್ದಳಂತೆ.ಬಳಿಕ ಅನಾರೋಗ್ಯದಿಂದ ಕೆಲ ವರ್ಷಗಳ ಹಿಂದೆ ಸೊಲ್ಲಾಪುರದ ಆಸ್ಪತ್ರೆಯಲ್ಲಿ ಪೂಜಾ ಮೃತಪಟ್ಟಿದ್ದಳು. ಪೂಜಾ ಸಾವಿಗೂ ಅರ್ಧ ಗಂಟೆಯ ಮುನ್ನ ಪೂಜಾಳನ್ನು ನೋಡಲು ಆಸ್ಪತ್ರೆಗೆ ಶರ್ಮಿಳಾ ಬಂದಿದ್ದಳಂತೆ. ಈ ವೇಳೆ ಶರ್ಮಿಳಾ ಭಾನಾಮತಿ ಮಾಡಿಸಿದ್ದರಿಂದ ಮೂಗು ಮತ್ತು ಹಲ್ಲಿನಲ್ಲಿ ರಕ್ತ ಬಂದು ತನ್ನ ಸಹೋದರಿ ಪೂಜಾ ಸಾವನ್ನಪ್ಪಿದ್ದಳು. ಹೀಗಾಗಿ ನನ್ನ ಅಕ್ಕ ಪೂಜಾ ಸಾವಿಗೆ ಪ್ರತೀಕಾರವಾಗಿ ಶರ್ಮಿಳಾಳನ್ನು ಹತ್ಯೆಗೈದಿದ್ದಾಗಿ ಆರೋಪಿ ಕೃಷ್ಣಾ ಹೇಳ್ತಾನೆ.

ತನಿಖೆಯ ಹಾದಿ ತಪ್ಪಿಸಲು ಚಿನ್ನದ ಸರ, ಹಣ ಕದ್ದಿದ್ದ ಕೃಷ್ಣ

ಆರೋಪಿ ಕೃಷ್ಣಾ ನವೆಂಬರ್ 15ರಂದು ಶರ್ಮಿಳಾಗೆ ಕರೆ ಮಾಡಿ ಮನೆಯಲ್ಲಿ ಯಾರ್ಯಾರಿದ್ದಾರೆ, ಎಲ್ಲಿ ಹೋಗಿದ್ದಾರೆ ಅಂತೆಲ್ಲಾ ವಿಚಾರಿಸಿದ್ದ. ಬಳಿಕ ತನ್ನ ಜೊತೆ ಪರಿಚಯಸ್ಥ ಬಾಲಕನೊಬ್ಬನನ್ನು ರಾಮನಗರದಲ್ಲಿರುವ ಶರ್ಮಿಳಾಳ ಮನೆಗೆ ಕರೆದುಕೊಂಡು ಬಂದಿದ್ದ. ಆ ಬಾಲಕನನ್ನು ಮನೆಯ ಹೊರಗೆ ನಿಲ್ಲಿಸಿ ಮನೆಗೆ ನುಗ್ಗಿದ್ದ ಆರೋಪಿ ಬೆಡ್ ರೂಮ್‌ಗೆ ನುಗ್ಗಿ ಶರ್ಮಿಳಾಳ ಕತ್ತು, ಎದೆ ಭಾಗಕ್ಕೆ ಚಾಕುವಿನಿಂದ ಇರಿದು ಕೊಲೆ ಮಾಡಿದ್ದ. ಶರ್ಮಿಳಾ ಮೃತಪಟ್ಟಿದ್ದಾಳೋ ಇಲ್ಲವೋ ಎಂಬುದನ್ನು ಕನ್ಫರ್ಮ್ ಮಾಡಿಕೊಂಡು ಪ್ರಕರಣದ ತನಿಖೆಯ ದಾರಿ ತಪ್ಪಿಸೋ ಉದ್ದೇಶದಿಂದ ಶರ್ಮಿಳಾ ಕತ್ತಿನಲ್ಲಿದ್ದ ಚಿನ್ನದ ಸರ, ಮೊಬೈಲ್ ಹಾಗೂ ಮನೆಯಲ್ಲಿದ್ದ ಹಣವನ್ನು ದೋಚಿ ಪರಾರಿಯಾಗಿದ್ದ. ಈ ವೇಳೆ ಆರೋಪಿ ಕೃಷ್ಣಾನ ವಾಚ್ ಮನೆಯಲ್ಲಿಯೇ ಬಿದ್ದಿತ್ತು. ಪ್ರಕರಣದ ತನಿಖೆ ಕೈಗೊಂಡ ಪೊಲೀಸರು ಸ್ಥಳದಲ್ಲಿ ಸಿಕ್ಕ ವಾಚ್ ವಶಕ್ಕೆ ಪಡೆದು ಮೊಬೈಲ್ ಕಾಲ್ ರಿಕಾರ್ಡ್ ಚೆಕ್ ಮಾಡಿದ್ದಾರೆ. ಈ ವೇಳೆ ಶರ್ಮಿಳಾಗೆ ಕೊನೆಯ ಬಾರಿ ಕೃಷ್ಣಾನ ಮೊಬೈಲ್ ನಂಬರ್ ನಿಂದ ಕರೆ ಹೋಗಿದ್ದು ಪತ್ತೆಯಾಗಿದೆ. ತಕ್ಷಣವೇ ಆರೋಪಿಯ ಪತ್ತೆಗೆ ಬಲೆ ಬೀಸಿದ್ದ ಪೊಲೀಸರು ಇಂದು ಬೆಳಗ್ಗೆ ಕಲಬುರಗಿ ರೈಲ್ವೇ ನಿಲ್ದಾಣದ ಬಳಿ ಆರೋಪಿ ಕೃಷ್ಣಾನನ್ನು ಬಂಧಿಸಿ ಕೃಷ್ಣನ ಜನ್ಮಸ್ಥಳಕ್ಕೆ ಅಟ್ಟಿದ್ದಾರೆ.

 

ಅನಾಥವಾದ ಒಂದೂವರೆ ವರ್ಷದ ಮುದ್ದಾದ ಮಗು

ತನ್ನದಲ್ಲದ ತಪ್ಪಿಗೆ ಇಂದು ಶರ್ಮಿಳಾ ಬಾರದ ಲೋಕಕ್ಕೆ ಹೋಗಿದ್ದಾಳೆ. ಒಂದೂವರೆ ವರ್ಷದ ಮಗು ಇಂದು ಅನಾಥವಾಗಿದೆ. ಇನ್ನು ಶರ್ಮಿಳಾಳ ತಾಯಿ ಯಶೋಧಾ ತನ್ನ ಮಗಳ ಸಾವಿಗೆ ಕಾರಣವಾದ ಕೃಷ್ಣನನ್ನು ಕತ್ತರಿಸಿ ಸಾಯಿಸಿ ಅಂತಾ ಕಣ್ಣೀರಿಡುತ್ತಿದ್ದಾಳೆ. ತನ್ನ ಅಕ್ಕಳನ್ನು ಸಂಬಂಧಿ ಮದುವೆಯಾಗದಿರಲು ಶರ್ಮಿಳಾಳೇ ಕಾರಣ. ಭಾನಾಮತಿ ಮಾಡಿಸಿ ತನ್ನ ಸಹೋದರಿಯ ಸಾವಿಗೆ ಕಾರಣವಾಗಿದ್ದಾಳೆಂದು ಶಂಕಿಸಿ ಹತ್ಯೆಗೈದಿದ್ದು ನಿಜಕ್ಕೂ ದುರಂತವೇ ಸರಿ.