ವೇದಿಕೆಯಲ್ಲೇ ಮದುವೆಗೆ ಆಫರ್ ಕೊಟ್ರಾ ಸುರೇಶ್ ಗೌಡ್ರು..? ಏನಿದರ ಮರ್ಮ..?

ಲೋಕ ಚುನಾವಣೆಯ ಮೈತ್ರಿ ಅರ್ಭರ್ಥಿ ಘೋಷಣೆಗೆಂದು ಅಣಿಯಾಗಿದ್ದ ವೇದಿಕೆಯಲ್ಲಿ ನಿಖಿಲ್ ಕುಮಾರಸ್ವಾಮಿಯ ಭರ್ಜರಿ ರಾಜಕೀಯೀಕ ಪ್ರವೇಶದ ಜೊತೆಗೆ ಬಂಪರ್ ಎನ್ನುವಂತೆ ಮದುವೆಯ ಪ್ರಾಸ್ತಾವನೆಯೂ ಬಂದಿತ್ತು.. ಹೌದು ಮಂಡ್ಯದಲ್ಲಿ ನಡೆಯುತ್ತಿರುವ ಬೃಹತ್​ ಸಮಾವೇಶದಲ್ಲಿ ನಿಖಿಲ್​ ಕುಮಾರಸ್ವಾಮಿಯನ್ನು ಚುನಾವಣಾ ಅಭ್ಯರ್ಥಿ ಎಂದು ಘೋಷಣೆ ಮಾಡಿದ ನಂತರ ಮಾತನಾಡಿದ ನಾಗಮಂಗಲ ಶಾಸಕ ಸುರೇಶ್​ ಗೌಡ, ನಿಖಿಲ್​ಗೆ ವೇದಿಕೆಯಲ್ಲಿಯೇ ಮದುವೆ ಆಫರ್​ ನೀಡಿದ್ದಾರೆ.

ಮೊದಲು ವೇಳೆ ಕ್ಷೇತ್ರದ ಏಳು ಜನ ಜೆಡಿಎಸ್​ ನಾಯಕರು ನಿಖಿಲ್​ ಪರ ಪ್ರಚಾರ ನಡೆಸಿದರು. ನಂತರ ನಾಗಮಂಗಲ ಶಾಸಕ ಸುರೇಶ್​ ಗೌಡ ನಿಖಿಲ್​ ಪರ ಮಾತನಾಡುತ್ತ ನಿಖಿಲ್​ ಇಲ್ಲಿನ ಮಗ ಮುಂದೆ ಮಂಡ್ಯದ ಅಳಿಯ ಆದರೂ ಆಗಬಹುದು ಎನ್ನುವ ಮೂಲಕ ಮದುವೆ ಸಂಬಂಧವನ್ನು ಗೌಡರ ಸಮ್ಮುಖದಲ್ಲಿಯೇ ಮಾತನಾಡಿದ್ದಾರೆ.


ನಿಖಿಲ್​ ಕುಮಾರಸ್ವಾಮಿ ಬೇರೆ ಯಾರೋ ಅಲ್ಲ. ಇಲ್ಲಿನ ಮಗ. ಮುಂದೆ ನಮ್ಮ ಅಳಿಯ ಆದರೂ ಆಗಬಹುದು. ಈಗಾಲೇ ರೇವಣ್ಣ ಅವರ ಮಕ್ಕಳು ಮಂಡ್ಯದ ಅಳಿಯರಾಗಿದ್ದಾರೆ. ಇವರು ಕೂಡ ಮುಂದೆ ಇಲ್ಲಿನ ಅಳಿಯ ಆಗಬಹುದು ಎಂದು ಹೇಳಿದರು.
ಇವರನ್ನು ನಾವು ಆಂಧ್ರಪ್ರದೇಶದಿಂದ ಆಗಲಿ, ತಮಿಳುನಾಡಿನಿಂದ ಆಗಲಿ ಕರೆ ತಂದಿಲ್ಲ. ಇಲ್ಲಿನ ಮಗ ಇವರು ಎನ್ನುವ ಮೂಲಕ ಪರೋಕ್ಷವಾಗಿ ಸುಮಲತಾಗೆ ತಿರುಗೇಟು ನೀಡಿದರು. ಈಗಾಗಲೇ ನಿಶ್ಚಿತಾರ್ಥ ಮಾಡಿಕೊಂಡಿದ್ದ ನಿಖಿಲ್​ ಕುಮಾರಸ್ವಾಮಿ ಮದುವೆ ಕಾರಣಾಂತರಗಳಿಂದಾಗಿ ಮುರಿದುಬಿದ್ದಿತು.. ಈಗಾಗಲೇ ಮದುವೆಯಾಗುವಂತೆ ನಿಶ್ಚಯವಾಗಿದ್ದ ಹುಡುಗಿಗೆ ಕೈಕೊಟ್ಟವನು. ಜನರ ಕೈ ಹಿಡಿಯುತ್ತಾನಾ ಎಂಬುದಾಗಿ ಅಪಪ್ರಚಾರ ನಡೆಸಲಾಗಿತ್ತು. ಇದಕ್ಕೆ ಉತ್ತರವನ್ನು ಸುರೇಶ ಗೌಡ್ರು ವೇದಿಕೆಯಲ್ಲಿ ನೀಡಿದ್ರು.