ಇ-ಫಾರ್ಮಸಿ ವಿರೋಧಿಸಿ ಮೆಡಿಕಲ್ ಶಾಪ್ ಬಂದ್​- ರಾಜ್ಯದಲ್ಲಿ ಉತ್ತಮ ಸ್ಪಂದನೆ!

 

adದೇಶಾದ್ಯಂತ ಮೆಡಿಕಲ್​ ಶಾಪ್​ ವ್ಯಾಪಾರಿಗಳು ಮುಷ್ಕರ ಆರಂಭಿಸಿದ್ದಾರೆ. ಇ-ಫಾರ್ಮಸಿಗೆ ವಿರೋಧಿಸಿ ಮೆಡಿಕಲ್​ ಶಾಪ್ ವ್ಯಾಪಾರಿಗಳು ಬಂದ್​ ನಡೆಸ್ತಿದ್ದು, ಆಲ್ ಇಂಡಿಯಾ ಆರ್ಗನೈಸೇಶನ್ ಆಫ್ ಕೆಮಿಸ್ಟ್ ಆಂಡ್ ಡ್ರಗಿಸ್ಟ್ (AIOCD)ಮುಷ್ಕರಕ್ಕೆ ಕರೆ ನೀಡಿತ್ತು.
ನಿನ್ನೆ ಮಧ್ಯರಾತ್ರಿಯಿಂದ ಇಂದು ಮಧ್ಯರಾತ್ರಿಯವರೆಗೂ ಫಾರ್ಮಸಿಗಳು ಬಂದ್​ ಆಗಲಿವೆ. ಕರ್ನಾಟಕದಲ್ಲಿ ಒಟ್ಟು 24 ಸಾವಿರ ಮೆಡಿಕಲ್ ಶಾಪ್​​​ಗಳಿದ್ದು, ಬೆಂಗಳೂರಿನಲ್ಲಿ 6 ಸಾವಿರಕ್ಕೂ ಹೆಚ್ಚು ಮೆಡಿಕಲ್​ ಶಾಪ್​ಗಳಿವೆ.

ಕಾರವಾರ, ಗದಗ,ಹುಬ್ಬಳ್ಳಿ,ಧಾರವಾಡ,ಹಾಸನ,ಚಿಕ್ಕಮಗಳೂರು,ಬಿಜಾಪುರ,ಬಾಗಲಕೋಟೆ,ಆನೇಕಲ್,ಕೋಲಾರ ಸೇರಿದಂತೆ ರಾಜ್ಯದ ವಿವಿಧೆಡೆ ಹಲವು ಖಾಸಗಿ ಮೆಡಿಕಲ್​ಗಳು ಬಾಗಿಲು ಮುಚ್ಚಿದ್ದು, ಬಂದ್​ಗೆ ಬೆಂಬಲ ಸೂಚಿಸಿವೆ.
ಇನ್ನು ರಾಜ್ಯದ ಸರ್ಕಾರಿ ಸ್ವಾಮ್ಯದ ಮೆಡಿಕಲ್​ಗಳು ಕಾರ್ಯನಿರ್ವಹಿಸುತ್ತಿವೆ. ಅಲ್ಲದೇ ಆಸ್ಪತ್ರೆ ಹಾಗೂ ನರ್ಸಿಂಗ್ ಹೋಂಗಳಲ್ಲಿರೋ ಮೆಡಿಕಲ್ ಶಾಪ್​ಗಳು ಮಾತ್ರ ಓಪನ್ ಆಗಿದ್ದು, ರೋಗಿಗಳ ಸಹಾಯಕ್ಕೆ ಲಭ್ಯವಾಗಿದೆ. ಇ- ಫಾರ್ಮಸಿ ವಿರೋಧಿಸಿ ಈ ಮುಷ್ಕರ ನಡೆಯುತ್ತಿದೆ.