ನಾಪತ್ತೆಯಾಗಿದ್ದ ಯುವತಿ ಶವವಾಗಿ ಪತ್ತೆ- ಹಣಕ್ಕಾಗಿ ಹತ್ಯೆ ಶಂಕೆ!

 

ad


ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿಯಿಂದ ನಾಪತ್ತೆಯಾಗಿದ್ದ ಯುವತಿ ಶವವಾಗಿ ಪತ್ತೆಯಾಗಿದ್ದಾಳೆ. ಹರಳೂರು ನಾಗೇನಹಳ್ಳಿಯ ಭಾಗ್ಯಶ್ರೀ ಶವವಾಗಿ ಪತ್ತೆಯಾದ ಯುವತಿ. ಈಕೆ ಹಣವನ್ನು ಕೊಂಡೊಯ್ಯುವ ವೇಳೆ ಹತ್ಯೆಯಾಗಿರುವ ಶಂಕೆ ವ್ಯಕ್ತವಾಗಿದೆ.
ಕನ್ನಮಂಗಳ ಪಾಳ್ಯದ 22 ವರ್ಷದ ಭಾಗ್ಯಶ್ರೀ ಭಾನುವಾರ ಮನೆಗೆ ಬಾರದೇ ನಾಪತ್ತೆಯಾಗಿದ್ದಳು. ಎಲ್ಲೆಡೆ ಹುಡುಕಾಟ ನಡೆಸಿದ ಕುಟುಂಬಸ್ಥರು ಪೊಲೀಸರ ಮೊರೆ ಹೋಗಿದ್ದರು. ಹುಡುಕಾಟದ ಬಳಿಕ ಇದೀಗ ಚಿಕ್ಕಬಳ್ಳಾಪುರ ಜಿಲ್ಲೆ ಗೌರಿಬಿದನೂರು ಹೊರವಲಯದಲ್ಲಿ ಯುವತಿಯ ಮೃತದೇಹ ಪತ್ತೆಯಾಗಿದೆ.

ಕನ್ನಮಂಗಲಪಾಳ್ಯದ ಮಣಿ ಟ್ರಾನ್ಸಫರ್​​ ನಲ್ಲಿ ಕೆಲಸ ಮಾಡುತ್ತಿದ್ದ ಭಾಗ್ಯಶ್ರೀ, ಭಾನುವಾರ 5 ಲಕ್ಷ ರೂಪಾಯಿ ಹಣವನ್ನು ಕೊಂಡೊಯ್ಯುತ್ತಿದ್ದಳು ಎನ್ನಲಾಗಿದೆ. ಹೀಗಾಗಿ ಹಣದ ಆಸೆಗೆ ಆಕೆಯನ್ನು ಅಪಹರಿಸಿ ಹತ್ಯೆ ಮಾಡಿರಬಹುದೆಂಬ ಶಂಕೆ ವ್ಯಕ್ತವಾಗಿದೆ. ಏಪೋರ್ಟ್​ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ತನಿಖೆ ಕೈಗೊಂಡಿದ್ದಾರೆ.