ಶಾಸಕರ ಪತ್ನಿ ನಾಪತ್ತೆ ಪ್ರಕರಣಕ್ಕೆ ಟ್ವಿಸ್ಟ್- ೧೮ ವರ್ಷಗಳ ಬಳಿಕ ರೋಚಕ ತಿರುವು ಪಡೆದ ಪ್ರಕರಣ!

 

 

 

ಮಾಜಿ ಶಾಸಕರ ಪತ್ನಿಯನ್ನ 18 ವರ್ಷಗಳ ಕಾಲ ಗೃಹ ಬಂಧನದಲ್ಲಿಟ್ಟು ನಿರಂತರ ಅತ್ಯಾಚಾರ ನಡೆಸಿರುವ ಆರೋಪ ಕೇಳಿ ಬಂದಿದೆ. ಬೀದರ್​ನ ಹುಲಸೂರು ಮಾಜಿ ಶಾಸಕ ಎಲ್​.ಕೆ ಚೌವ್ಹಾಣ ಕಾರು ಚಾಲಕನಾಗಿದ್ದ ಸಂಜಯ ಚೌವ್ಹಾಣ ಮೇಲೆ ಈ ಆರೋಪ ಕೇಳಿಬಂದಿದ

 

 

ಮಾಜಿ ಶಾಸಕನ ಪತ್ನಿ ಮೇಲೆ ಕಣ್ಣು ಹಾಕಿದ್ದ ಸಂಜಯ್ ನಿದ್ದೆ ಮಾತ್ರ ನೀಡಿ ಚೌವ್ಹಾಣ ಪತ್ನಿಯನ್ನ ಅಪಹರಿಸಿ 18 ವರ್ಷಗಳ ಕಾಲ ನಿರಂತರ ಅತ್ಯಾಚಾರ ನಡೆಸಿದ್ದಾನೆ ಎಂದು ಮಾಜಿ ಶಾಸಕನ ಪತ್ನಿ ಆರೋಪಿಸಿದ್ದಾರೆ. ಇನ್ನು ಈ ವಿಚಾರ ತಿಳಿಯದ ಸಂಜು ಚೌವಾಣ ತನ್ನ ಪತ್ನಿ ಚಾಲಕನ ಜತೆ ಓಡಿ ಹೋಗಿದ್ದಾಳೆ ಅನ್ನೋ ಕೊರಗಿನಲ್ಲೇ ಜೀವ ಬಿಟ್ಟಿದ್ದಾರೆ ಎನ್ನಲಾಗಿದೆ.

ಸದ್ಯ ಅಪಹರಣ, ಅತ್ಯಾಚಾರ ದೂರು ದಾಖಲಿಸಿಕೊಂಡಿರುವ ಸ್ಥಳೀಯ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಅಂದ್ಹಾಗೆ 1994ರಲ್ಲಿ ಎಲ್‌.ಕೆ. ಚೌಹಾಣ ಹುಲಸೂರು ಕ್ಷೇತ್ರದ ಶಾಸಕರಾಗಿದ್ದರು. 2004ರಲ್ಲಿ ಕ್ಷೇತ್ರ ಮರು ವಿಂಗಡಣೆ ಬಳಿಕ ಹುಲಸೂರು ಕ್ಷೇತ್ರ ಬಸವಕಲ್ಯಾಣ ಕ್ಷೇತ್ರಕ್ಕೆ ವಿಲೀನಗೊಂಡಿತ್ತು.