ನಾಪತ್ತೆಯಾಗಿದ್ದ ರಾಧಿಕಾ ಕುಮಾರಸ್ವಾಮಿ ಕಾಳಿಯಾಗಿ ಪತ್ತೆ! ಇಷ್ಟಕ್ಕೂ ರಾಧಿಕಾ ರೌದ್ರಾವತಾರ ತಾಳಿದ್ದ್ಯಾಕೆ ಗೊತ್ತಾ?!

ಸ್ಯಾಂಡಲ್​ವುಡ್​​ ಸಿನಿರಸಿಕರಿಗೆ ತನ್ನ ಹೋಮ್ಲಿ ಲುಕ್​​ನಿಂದಲೇ ಕಿಕ್ಕೇರಿಸೋ ಬ್ಯೂಟಿ ರಾಧಿಕಾ ಕುಮಾರ ಸ್ವಾಮಿ. ಆದ್ರೆ ರಾಧಿಕಾ ಬಗ್ಗೆ ಇತ್ತೀಚೆಗೆ ಯಾವುದೇ ಸುದ್ದಿ ಆಗ್ತಿಲ್ಲ. ರಾಧಿಕಾ ಎಲ್ಲಿದ್ದಾರೆ. ಏನ್​ ಮಾಡ್ತಿದ್ದಾರೆ ಅನ್ನೋದು ಅವ್ರ ಫ್ಯಾನ್ಸ್​​​ಗೆ ಕುತೂಹಲ ಇದ್ದೇ ಇದೆ. ಇದೀಗ ಸ್ವೀಟಿ ರಾಧಿಕಾ ಕಾಳಿ ವತಾರ ಎತ್ತಿ ನಿಮ್ಮ ಮುಂದೆ ಬರೋಕೆ ರೆಡಿಯಾಗಿದ್ದಾರೆ. ಅವ್ರ ಕಾಳಿ ಅವತಾರದ ಎಕ್ಸ್​ಕ್ಲ್ಯೂಸೀವ್ ವಿಡಿಯೋ ಬಿಟಿವಿಗೆ ಸಿಕ್ಕಿದೆ.. ಈ ಬಗ್ಗೆ ರಿಪೋರ್ಟ್​ಇಲ್ಲಿದೆ ನೋಡಿ.

ad

ರಾಧಿಕಾ ಕುಮಾರಸ್ವಾಮಿ.. ಕನ್ನಡ ಚಿತ್ರರಂಗದ ದಿನಗಂತದಲ್ಲಿ ಉದಯಿಸಿದ ಸುಂದರಿ.. ಡಿ ಗ್ಲಾಮರ್​, ಗ್ಲಾಮರ್,​ ಮಾಡ್ರಾನ್​​ ಹೀಗೆ ಎಂತಾ ಪಾತ್ರಕ್ಕು ಒಗ್ಗಿಕೊಳ್ಳೊ ಚೆಲುವು ಹೊಂದಿರೋ ಬ್ಯೂಟಿ. ಆದ್ರೆ ಈ ಜ್ಯೂಲಿಯೆಟ್ ಮೇಲೆ ಈಗ ಕಾಳಿ ದೇವಿ ಅವತಾರ ತಾಳಿದ್ದಾಳೆ..
ಬೈರಾದೇವಿ.. ಸ್ಯಾಂಡಲ್​ವುಡ್​​ ಸ್ವೀಟಿ ರಾಧಿಕಾ ಅಭಿನಯಿಸ್ತಿತೋ ಸ್ಪೆಷಲ್ ಸಿನಿಮಾ. ಚಿತ್ರದಲ್ಲಿ ರಾಧಿಕಾ ಕಾಳಿ ದೇವಿಯ ರೋಲ್​ ಮಾಡ್ತಿರೋದ್ರಿಂದ ಸ್ಮಶಾನದಲ್ಲಿ ಕಾಳಿ ಹಾಡಿನ ಚಿತ್ರೀಕರಣ ಮಾಡಿದ್ದಾರೆ. ಈ ಕಾಳಿಯ ಹಾಡಿಗಾಗಿ ಸ್ವೀಟಿ ರಾಧಿಕಾ ಮೈ ತುಂಬ ನೀಲಿ ಬಣ್ಣ ಬಳಿದುಕೊಂಡು ಕಾಳಿ ಲುಕ್​​ನಲ್ಲಿ ನರ್ತಿಸಿದ್ರು.

ಶ್ರೀಜೈ ನಿರ್ದೇಶಿಸುತ್ತಿರುವ ಭೈರಾದೇವಿ ಸಿನಿಮಾವನ್ನು ರಾಧಿಕಾ ಕುಮಾರ ಸ್ವಾಮಿ ಹೋಮ್ ಬ್ಯಾನರ್ ಶಮಿಕಾ ಎಂಟರ್ ಪ್ರೈಸಸ್​​ನಲ್ಲಿ ನಿರ್ಮಾಣ ಆಗ್ತಿದೆ. ಈ ಸಿನಿಮಾದಲ್ಲಿ ರಾಧಿಕಾ ಕಾಳಿ ಮತ್ತು ಆಘೋರಿ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಭೈರಾದೇವಿಯ ಮತ್ತೊಂದು ಹೆಸರು ಕಾಳಿ, ಹೀಗಾಗಿ ರಾಧಿಕಾ ಲುಕ್​ ಭರ್ಜರಿಯಾಗಿ ಮೂಡಿ ಬಂದಿದೆ.

ರಾಧಿಕಾ ಈ ಪಾತ್ರಕ್ಕಾಗಿ ಸುಮಾರು 5 ಗಂಟೆ ಸಮಯ ಮೇಕಪ್ ಮಾಡಿಕೊಂಡಿದ್ದಾರೆ. 300 ಜನ ಜ್ಯೂನಿಯರ್​​ ಡಾನ್ಸರ್ಸ್​ ಮಧ್ಯೆ ರಾಧಿಕಾ ಕಾಳಿಯ ರೌದ್ರ ನರ್ಥನ ಕಣ್ಣಿಗೆ ಹಬ್ಬದಂತಿತ್ತು. ಮೋಹನ್​ ಕೊರಿಯೋಗ್ರಫಿಯಲ್ಲಿ ಈ ಹಾಡಿನ ಶೂಟಿಂಗ್ ನಡೆದಿದ್ದು, ಸ್ಮಶಾನದಲ್ಲಿರೋ ದೆವ್ವಗಳೆಲ್ಲಾ ಕಾಳಿಯನ್ನ ನೋಡಿ ಹೆದರಿಕೊಂಡು ಅಲ್ಲಿಂದ ಕಾಲ್ಕಿತ್ತು ಓಡೋ ಹಾಗೆ ರಾಧಿಕಾ ಕಾಳಿ ಅವತಾರ ಎತ್ತಿದ್ರು…
ಭೈರದೇವಿ ಶೂಟಿಂಗ್ ಆಲ್​ ಮೋಸ್ಟ್ ಕಂಪ್ಲೀಟ್ ಆಗಿದೆ. ಇದಲ್ಲದೇ ಇನ್ನೊಂದು ಸಾಂಗ್ ಶೂಟಿಂಗ್ ಮುಗಿದರೆ ಭಯರದೇವಿ ಚಿತ್ರೀಕರಣ ಕಂಪ್ಲೀಟ್ ಆಗುತ್ತೆ. ಭೈರಾದೇವಿ ಕನ್ನಡ, ತೆಲುಗು ಮತ್ತು ತಮಿಳು ಭಾಷೆಗಳಲ್ಲಿ ನಿರ್ಮಾಣವಾಗ್ತಿದೆ..