ಬೆಂಬಲಿಗರ ಜೊತೆ ಬಂದ್ರು ಕೆರೆ ನೀರು ಕುಡಿದ್ರು- ಕೆ.ಸಿ.ವ್ಯಾಲಿ ನೀರು ಕಲುಷಿತ ಅಂದೋರಿಗೆ ಎಮ್​ಎಲ್​ಎ ಉತ್ತರ!

ಕೆಸಿವ್ಯಾಲಿ ನೀರು ಕಲುಷಿತವಾಗಿದೆ. ಅದನ್ನು ಕುಡಿದವರು ಅನಾರೋಗ್ಯಕ್ಕೆ ಈಡಾಗುತ್ತಿದ್ದಾರೆ ಎಂಬ ವದಂತಿ ಹರಿದಾಡುತ್ತಿತ್ತು. ಈ ಹಿನ್ನೆಲೆಯಲ್ಲಿ ಈ ಎಲ್ಲ ಅನುಮಾನಗಳಿಗೆ ಬ್ರೇಕ್ ಹಾಕುವ ನಿಟ್ಟಿನಲ್ಲಿ ಎಮ್​​ಎಲ್​​ಎ ಶ್ರೀನಿವಾಸಗೌಡ ಸ್ವತಃ ತಾವೇ ನೀರು ಕುಡಿದು ಜನರ ಅನುಮಾನ ಬಗೆಹರಿಸಿದ್ದಾರೆ.

ad


ಕೆ.ಸಿ.ವ್ಯಾಲಿ ನೀರಿನ ಬಗ್ಗೆ ಅಪ್ರಚಾರ ಮಾಡಲಾಗಿದ್ದರಿಂದ ಕೋಲಾರ ಕ್ಷೇತ್ರದ ಶಾಸಕ ಕೆ.ಶ್ರೀನಿವಾಸಗೌಡ ಅವರು ಕೆಸಿ ವ್ಯಾಲಿ ನೀರು ಕುಡಿಯುವುದಾಗಿ ನೆನ್ನೆ ಹೇಳಿದ್ರು. ಅದರಂತೆ ಇಂದು ತಮ್ಮ ನೂರಾರು ಬೆಂಬಲಿಗರೊಂದಿಗೆ ಕೆಸಿ ವ್ಯಾಲಿ ಯೋಜನೆ ಮೂಲಕ ನೀರು ಹರಿದ ತಾಲೂಕಿನ ನರಸಾಪುರದ ಕೆರೆಗೆ ಆಗಮಿಸಿ ಕೆರೆಯ ನೀರಿನಲ್ಲಿ ಇಳಿದ ಶಾಸಕ ಶ್ರೀನಿವಾಸಗೌಡರು ಐದಾರು ಬಾರಿ ಕೈಯಲ್ಲಿ ಬೊಗಸೆ ನೀರು ಕುಡಿಯುವ ಮೂಲಕ ಯೋಜನೆ ವಿರೋಧಿಗಳಿಗೆ ಪ್ರತ್ಯುತ್ತರ ನೀಡಿದ್ರು.

ಇನ್ನೂ ಇದೇ ಸಂಧರ್ಭದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ಹಲವು ದಿನಗಳಿಂದ ಕೆಸಿ ವ್ಯಾಲಿ ಯೋಜನೆ ವಿರುದ್ಧ ಅಪಪ್ರಚಾರ ಮಾಡಲಾಗುತ್ತಿದ್ದು ನೀರಿನಲ್ಲಿ ಯಾವುದೇ ವಿಷಕಾರಿ ಅಂಶಗಳು ಇಲ್ಲ. ಮೂರು ಬಾರಿ ಶುದ್ದೀಕರಣವು ಬೇಕಾಗಿಲ್ಲ ಎರಡು ಬಾರಿ ಶುದ್ದಿಕರಣವೇ ಸಾಕಾಗಿದೆ. ಇನ್ನು ಜಿಲ್ಲೆಯ ಜನರು ಯಾವುದೇ ಭಯಪಡಬೇಕಾಗಿಲ್ಲ ಮೊದಲು ನಾನೇ ಈ ನೀರನ್ನ ಕುಡಿಯುತ್ತೇನೆ ಏನಾದ್ರು ಆದ್ರೆ ಮೊದಲು ನನಗೆ ಮೊದಲುಆಗ್ಲಿ ಎಂದ್ರು.

 

ತ್ವರಿತವಾಗಿ ಯೋಜನಾಧಿಕಾರಿಗಳು ಹೈಕೋರ್ಟ್​ಗೆ ನೀರಿನ ಶುದ್ದೀಕರಣ ಕುರಿತು ದಾಖಲೆಗಳು ನೀಡಲಿದ್ದಾರೆ. ಈ ಯೋಜನೆಯಿಂದ ರೈತರಿಗೆ ಬಹಳ ಅನುಕೂಲವಾಗಲಿದೆ ಯಾರು ವಿರೋಧ ವ್ಯಕ್ತಪಡಿಸಬೇಡಿ ಎಂದು ಮನವಿ ಮಾಡಿದ್ರು. ಇನ್ನು ಇದೇ ವೇಳೆ ಶಾಸಕರು ಕೆಸಿ ವ್ಯಾಲಿ ಯೋಜನೆಯ ಮೂಲಕ ಹರಿದು ಬಂದ ನೀರನ್ನು ಕುಡಿಯುವುದನ್ನು ನೋಡಲು ನೂರಾರು ಜನ್ರು ಸೇರಿದ್ರು.