ಚಂದ್ರಯಾನದ ಖರ್ಚಿಗಿಂತ ಮೋದಿ ವಿದೇಶಯಾನದ ವೆಚ್ಚವೇ ಹೆಚ್ಚು! ಮೋದಿ ವಿರುದ್ಧ ಮುಖ್ಯಮಂತ್ರಿ ಚಂದ್ರು ಲೇವಡಿ!!

ಈ ದೇಶದಲ್ಲಿ ವಿಜ್ಞಾನಿಗಳು ನಡೆಸಿದ ಚಂದ್ರಯಾನಕ್ಕಿಂತ ಮೋದಿ ವಿಮಾನಯಾನವೇ ಹೆಚ್ಚು ವೆಚ್ಚದಾಯಕವಾಗಿದೆ ಎಂದು ನಟ ಹಾಗೂ ಕಾಂಗ್ರೆಸ್​ ನಾಯಕ ಮುಖ್ಯಮಂತ್ರಿ ಚಂದ್ರು ಲೇವಡಿ ಮಾಡಿದ್ದಾರೆ. ಹಾವೇರಿಯಲ್ಲಿ ಕಾಂಗ್ರೆಸ್ ಪರ ಪ್ರಚಾರಕೈಗೊಂಡು ಮಾತನಾಡಿದ ಮುಖ್ಯಮಂತ್ರಿ ಚಂದ್ರು ಮೋದಿ ವಿರುದ್ಧ ವಾಗ್ದಾಳಿ ನಡೆಸಿದರು.

ad


ಈ ಹಿಂದೆ ಕಾಂಗ್ರೆಸ್ ಸರ್ಕಾರ ಅಂದಾಜು 450 ಕೋಟಿ ರೂಪಾಯಿ ವೆಚ್ಚದಲ್ಲಿ ವಿಜ್ಞಾನಿಗಳನ್ನು ಚಂದ್ರಯಾನಕ್ಕೆ ಕಳುಹಿಸಿದೆ. ಆದರೆ ಮೋದಿ 2 ಸಾವಿರ ಕೋಟಿಯನ್ನು ಬರಿ ವಿದೇಶ ಪ್ರಯಾಣಕ್ಕೆ ವೆಚ್ಚಮಾಡಿದ್ದಾರೆ. 5 ವರ್ಷದಲ್ಲಿ ಸಂಸತ್ತಿನಲ್ಲಿ ಕೆಲಸ ಮಾಡಿದ್ದು, ಹಾಜರಿದ್ದಿದ್ದಕ್ಕಿಂತ ಹೆಚ್ಚು ವಿದೇಶದಲ್ಲೇ ಇದ್ದರು ಎಂದು ಟೀಕಿಸಿದರು.


ಕಾಂಗ್ರೆಸ್ ಏನು ಸಾಧನೆ ಮಾಡಿಲ್ಲ ಎಂದು ಮೋದಿ ಹಾಗೂ ಬಿಜೆಪಿ ಟೀಕಿಸುತ್ತಿದೆ. ಕಾಂಗ್ರೆಸ್​ ಯಾವುದೇ ಅಭಿವೃದ್ಧಿ ಮಾಡದೇ ಇದ್ದರೇ ಮೋದಿ ದೇಶದ ಪ್ರಧಾನಿ ಆಗುತ್ತಿದ್ದರಾ ಎಂದು ಚಂದ್ರು ಪ್ರಶ್ನಿಸಿದ್ದಾರೆ. ಪ್ರತಿ ಚುನಾವಣೆಯಲ್ಲೂ ರಾಮನ ಹೆಸರಿನಲ್ಲಿ ಮತ ಕೇಳುವುದು ಬಿಜೆಪಿಯ ಹವ್ಯಾಸ. ಅಷ್ಟೊಂದು ಶೃದ್ಧೆ ಇದ್ದರೇ ಈ 5 ವರ್ಷದಲ್ಲಿ ಯಾಕೆ ರಾಮಮಂದಿರ ನಿರ್ಮಿಸಲಿಲ್ಲ ಎಂದು ಮುಖ್ಯಮಂತ್ರಿ ಚಂದ್ರು ಪ್ರಶ್ನಿಸಿದ್ದಾರೆ.


ಇನ್ನು ಕಾಂಗ್ರೆಸ್ ಪರ ಪ್ರಚಾರದಲ್ಲಿ ಮುಖ್ಯಮಂತ್ರಿ ಚಂದ್ರುಗೆ ಸಾಥ ನೀಡಿದ ಸಾಹಿತಿ ಪ್ರೊ. ಜಿ.ಎಸ್.ಸಿದ್ಧರಾಮಯ್ಯ ದೇಶದಲ್ಲಿ ಅಘೋಷಿತ ತುರ್ತು ಪರಿಸ್ಥಿತಿಯ ವಾತಾವರಣ ಇದೆ. ಕೇಂದ್ರ ಸಚಿವರು ಸಂವಿಧಾನ ಬದಲಾಯಿಸುವ ಮಾತನಾಡುತ್ತಾರೆ ಎಂದರು.