ಸಾವಿನ ಮನೆಗೆ ಸಾಂತ್ವನ ವ್ಯಕ್ತಪಡಿಸಲು ಬರುವ ವಾನರ! ಮಂಗನ ಮಾನವೀಯತೆ ಸೃಷ್ಟಿಸಿದೆ ಅಚ್ಚರಿ!!

ಮನುಷ್ಯ ಮರಣ ಹೊಂದಿದಾಗ ಬಂಧು-ಬಾಂಧವರು, ಮಿತ್ರರು ಬೇಗ ಬರೋದಿಲ್ಲ. ಆದ್ರೆ ಮಂಗವೊಂದು ಸಾವಿನ ಮನೆಗೆ ತೆರಳಿ ತನ್ನದೇ ಭಾಷೆಯಲ್ಲಿ ಶೃದ್ಧಾಂಜಲಿ ಸಲ್ಲಿಸಿ ಕುಟುಂಬಸ್ಥರಿಗೆ ಸಾಂತ್ವಾನ ಹೇಳಿರುವ ಘಟನೆ ಗದಗ ಜಿಲ್ಲೆ‌ಯ ನರಗುಂದ ಪಟ್ಟಣದಲ್ಲಿ ನಡೆದಿದೆ.

ad


ಪಟ್ಟಣದ ದೇವೆಂದ್ರಪ್ಪ ಕಮ್ಮಾರ್ ಎಂಬುವರು ಇತ್ತೀಚೆಗೆ ಮೃತಪಟ್ಟಿದ್ರು. ಕುಟುಂಬದವರು ಅತೀವ ಶೋಕದಲ್ಲಿದ್ರು. ಅಷ್ಟರಲ್ಲಿ ಕಪಿಯೊಂದು ಮೃತರ ಮನೆಗೆ ಧಾವಿಸಿ, ಶವದ ಬಳಿ ಸುಮ್ಮನೆ ಕೂತು ಶೃದ್ಧಾಂಜಲಿ ಸಲ್ಲಿಸಿದೆ‌.‌ ನಂತರ ಮನೆಯಲ್ಲಿ ಕುಟುಂಬಸ್ಥರ ಅಕ್ರಂದನಕ್ಕೆ ತನ್ನದೆ ಭಾಷೆಯಲ್ಲಿ ಸಾಂತ್ವಾನ ಹೇಳಿದೆ. ಈ ವೇಳೆ ನೂರಾರು ಸಂಖ್ಯೆಯಲ್ಲಿ ಜನರಿದ್ದರೂ ಯಾರೊಬ್ಬರಿಗೂ ತೊಂದರೆ ಮಾಡದೆ, ಕುಟುಂಬದವರಿಗೆ ಪ್ರೀತಿ ಕನಿಕರ ತೋರಿಸಿದೆ.


ಕಪಿರಾಯನ ಈ ವರ್ತನೆ ಸಾರ್ವಜನಿಕರನ್ನು ನಿಬ್ಬೆರಗಾಗುವಂತೆ ಮಾಡಿದೆ. ಕಳೆದ ಕೆಲ‌ ತಿಂಗಳ ಹಿಂದೆಯೂ ಸಹ ಪಟ್ಟಣದಲ್ಲಿ ಇದೇ ಬಗೆಯ ವರ್ತನೆ ತೋರಿದ್ದ ಕಪಿರಾಯ, ಆಗ ಮೃತಪಟ್ಟೋರ ಒಬ್ಬರ ಮನೆಗೆ ತೆರಳಿ ಮನೆಯ ಹಿರಿಯ ಮಗನ ತಲೆ ಸವರಿ ಸಮಾಧಾನ ಹೇಳಿತ್ತು. ಇತ್ತೀಚೆಗೆ ನರಗುಂದ ಪಟ್ಟಣದಲ್ಲಿ ಯಾರೇ ಮೃತಪಟ್ರೂ ಈ ಮಂಗ ಇದೇ ಬಗೆಯ ವರ್ತನೆ ತೋರೋದು ಸಾಮಾನ್ಯವಾಗಿದೆ. ಈ ವಿಡಿಯೋ ಈಗ ಫುಲ್ ವೈರಲ್ ಆಗಿದೆ.