ಕಂದನಿಗಾಗಿ ಹೆತ್ತಮ್ಮನ ರೋಧನೆ- ಇದು ಹಾಸನದಲ್ಲಿ ನಡೆದ ಮನಕಲಕುವ ಘಟನೆ!

ಮಮತೆ ತೋರಲು ಭಾಷೆ ಬೇಕಿಲ್ಲ.ಹಾಗೆಯೇ ಅಕ್ಕರೆ ತೋರಲು ಮನುಷ್ಯರೇ ಆಗಿರಬೇಕು ಎಂದೇನೂ ಇಲ್ಲ… ಎಲ್ಲವನ್ನು ಮೀರಿಸುವ ಭಾವುಕ ದೃಶ್ಯ ಇದು. ಇಂತಹುದೇ ದೃಶ್ಯವೊಂದು ಹಾಸನದಲ್ಲಿ ಸೆರೆಯಾಗಿದೆ.ಹಾಸನದ ಸಕಲೇಶಪುರತಾಲೂಕಿನ ಕೊತ್ತನಹಳ್ಳಿ ಗ್ರಾಮ.. ಭತ್ತದ ಗದ್ದೆಯ ಬಳಿ ಗರ್ಭಿಣಿ ಆನೆ ಮಂಗಳವಾರ ರಾತ್ರಿ ಕಂದಮ್ಮನಿಗೆ ಜನ್ಮ ನೀಡಿತ್ತು. ಭೂಮಿಗೆ ಬಂದ ಮರಿಯಾನೆಯ ಸಂಭ್ರಮಕ್ಕೆ ಪಾರವೇ ಇರಲಿಲ್ಲ. ಆದರೆ ಕಣ್ಣು ಬಿಟ್ಟ ಕೆಲವೇ ದಿನಗಳಲ್ಲಿ ಗದ್ದೆಯ ಕೆಸರಿನಲ್ಲಿ ಮರಿಯಾನೆ ಹೂತುಕೊಂಡಿತು.ಇದನ್ನು ಕಂಡ ಹೆತ್ತಮ್ಮ, ಕರುಳ ಕುಡಿಯನ್ನು ಕೆಸರಿಂದ ಮೇಲೆತ್ತಲು ಪಟ್ಟ ಪಾಡು, ತೋರಿದ ಕಕ್ಕುಲತೆ ಅಷ್ಟಿಷ್ಟಲ್ಲ.

ad

 ಲೋಕವೇ ಅರಿಯದ ಮರಿಯಾನೆ ಕೆಸರಿಂದ ಮೇಲೆ ಬರುವ ಹೊತ್ತಿಗೆ ಪ್ರಾಣ ಪಕ್ಷಿ ಹಾರಿ ಹೋಗಿತ್ತು. ಆದರೂ ಕಂದನನ್ನು ಬಿಟ್ಟು ಕದಲದ ಹೆತ್ತಮ್ಮನ ಮೂಕ ವೇದನೆ ಮಾತ್ರ ನೆರೆದಿದ್ದವರ ಕಣ್ಣಾಲಿಗಳನ್ನು ತೇವವಾಗಿಸಿತು.ಜೊತೆಯಲ್ಲಿದ್ದ ಆನೆಗಳು ಎಷ್ಟೇ ಸಂತೈಸಿದ್ರೂ, ಎದ್ದೇಳು ಕಂದಾ ಎದ್ದೇಳು ಎಂದು ಒಂದೇ ಸಮನೆ ಹಲುಬಿದ್ರೂ, ಕಣ್ಣು ಬಿಟ್ಟ ಕೆಲವೆ ಕ್ಷಣಗಳನ್ನು ಕಣ್ಮುಚ್ಚಿದ ಮರಿಯಾನೆ ಮತ್ತೆ ಕಣ್ಣು ತೆರೆಯಲೇ ಇಲ್ಲ.ಜೊತೆಗಿದ್ದ‌ ಆನೆಗಳು ಕಂದನ ಕಳೆದು ಕೊಂಡು ಕಣ್ಣೀರಿಡುತ್ತಿದ್ದ ಆನೆಗೆ ಮೈದಡವಿ ಹೋಗೋಣ ಎಂದ್ರೂ ಸಮಾಧಾನ ಮಾಡಿ ಸಂತೈಸಿದ್ರೂ ತಾಯಿಮಾತ್ರ ಕದಲಲಿಲ್ಲ. ಮಾತುಬಾರದ ಕಾಡಾನೆಗಳ ಅರಣ್ಯರೋದನ ನಿಜಕ್ಕೂ ಬೇಸರ ತರಿಸಿತು. ಮೃತಪಟ್ಟ ಕಂದನನ್ನ‌‌ ಮೇಲೇಳಿಸಲು ಪರದಾಡಿದ ತಾಯಿ ಆನೆಯ ದಾರುಣ ಸ್ಥಿತಿ ಮಮ್ಮಲ ಮರುಗುವಂತೆ ಮಾಡಿತು.

ಮನುಷ್ಯರಿಗೆ ಏನಾದ್ರೂ ಆದ್ರೆ ಮನೆಯವರಿಗೊ ಏನಾದ್ರೂ ಅನಾರೋಗ್ಯಕ್ಕೀಡಾದ್ರೆ ತಕ್ಷಣ ಆಸ್ಪತ್ರೆಗೆ ಎತ್ತಿಕೊಂಡು ಓಡುತ್ತೇವೆ ಆದ್ರೆ ಕಾಡು ಪ್ರಾಣಿಗಳಿಗೆ ಅಂತಹ ಅವಕಾಶ ಇಲ್ಲದ ಕಾರಣ ದಟ್ಟಕಾನನದ ಮಧ್ಯೆಯೇ ದುಃಖ ಉಮ್ಮಳಿಸಿ ಕರಗಿತು. ಸತ್ತಾಗ ದುಃಖ ಹೊರ ಹಾಕೋದು ಕೇವಲ‌ ಮನುಷ್ಯರಲ್ಲ,ತಮ್ಮವರನ್ನ‌ ಕಳೆದುಕೊಂಡಾಗಿನ ನೋವು ಎಂತಾದ್ದು ಎಂಬುದನ್ನು ಆನೆಗಳೂ ತೋರಿಸಿ ನಿಜಕ್ಕೂ ವಿಷಾಧನೀಯ. ಆನೆಗಳ ತಂಡ ಅಹಾರಕ್ಕಾಗಿ ಕಾಫಿತೋಟಕ್ಕೆ ಲಗ್ಗೆ ಇಟ್ಟಿದ್ದವು.

ಈವೇಳೆ ಒಂದು ಮರಿಯಾನೆ ಜನನವಾಗಿದ್ದು ಖುಷಿಯೇನೋ ಆಗಿದೆ. ಆದ್ರೆ ಆ ಖುಷಿ ಹೆಚ್ಚು ಸಮಯ ಉಳಿದಿಲ್ಲ. ಹುಟ್ಟಿದ‌‌ ಕೂಡಲೆ ಮೃತಪಟ್ಟ ತನ್ನ ಮರಿಯನ್ನ ಬಿಟ್ಟು ಹೊಗೋಕೆ ತಾಯಾನೆ ರೆಡಿ ಇರಲಿಲ್ಲ. ನೂರಿನ್ನೂರು ಮೀಟರ್ ವರೆಗೆ ತನ್ನ ಮರಿಯನ್ನ ನೂಕಿಕೊಂಡು ಹೆತ್ತಮ್ಮ ಎಧ್ದೇಳು ಕಂದಾ ಎಂದು ಸೊಂಡಿನಿಂದ ಮೃತದೇಹ ಮುಟ್ಟುತ್ತಾ ತನ್ನ ಕರುಳ ಬಳ್ಳಿಯನ್ನ ಮೇಲೇಳಿಸಲು ಇನ್ನಿಲ್ಲದ ಪ್ರಯತ್ನ ಮಾಡಿತ್ತು,ಆದ್ರೆ ಎದ್ದೇಳೋಕೆ ಆ ಕಂದ ಬದುಕಿರಲಿಲ್ಲ,ಆನೆ ಮರಿ ಮೃತಪಟ್ಟ ಸುದ್ದಿ ತಿಳಿದು ಸ್ಥಳಕ್ಕೆ ಬಂದ ಅರಣ್ಯ ಇಲಾಖೆ ಅಧಿಕಾರಿಗಳು,ಮರಿಯ ಮರಣೋತ್ತರ ಪರೀಕ್ಷೆ ನಡೆಸಿ ಕ್ರಮ ಕೈಗೊಳ್ಳೋಕೆ ದಿನವಿಡೀ ಕಾದರೂ ಆನೆ ಹಿಂಡುಮಾತ್ರ ಮರಿಬಿಟ್ಟು ಕದಲಲಿಲ್ಲ. ಅಧಿಕಾರಿಗಳು ಸಿಬ್ಬಂದಿ ಬಳಿಸಾಗುವ ಪ್ರಯತ್ನ ಮಾಡುವ ಧೈರ್ಯ ತೋರಲಿಲ್ಲ. ಮರಿ ಹುಟ್ಟಿದ ಕೂಡಲೇ ತಾಯಾನೆ ಅದಕ್ಕೆ ಹಾಲುಣಿಸಬೇಕು,ಇಲ್ಲವಾದ್ರೆ ಸಹಜವಾಗಿ ಹಾಲು ಕಟ್ಟಿಕೊಂಡು ನೋವು ಶುರುವಾಗುತ್ತೆ, ಹಾಗಾಗಿ ಮರಿಯನ್ನ ಎದ್ದೇಳಿಸಲು ತಾಯಾನೆ ಮಾಡಿದ ಪ್ರಯತ್ನ ತಾಯ್ತನದ ಆಳವನ್ನು ಮನದಟ್ಟು ಮಾಡಿತು.