ಕೈಯಲ್ಲಿ ಪೊರಕೆ ಹಿಡಿದ್ರು ಡ್ರೀಮ್​ ಗರ್ಲ್​! ಇಷ್ಟಕ್ಕೂ ಹೇಮಾಮಾಲಿನಿ ಸ್ವಚ್ಛತೆಗೆ ಮುಂದಾಗಿದ್ದೇಕೆ ಗೊತ್ತಾ?!

ಪ್ರಧಾನಿ ನರೇಂದ್ರ ಮೋದಿಯವರ ಬಹುನೀರಿಕ್ಷಿತ ಯೋಜನೆಯಲ್ಲಿ ಸ್ವಚ್ಛಭಾರತ ಯೋಜನೆ ಕೂಡ ಒಂದು. ರಾಷ್ಟ್ರದಾದ್ಯಂತ ಸ್ವಚ್ಛತೆಯ ಅಲೆಯನ್ನೇ ಹುಟ್ಟುಹಾಕಿದ ಈ ಅಭಿಯಾನಕ್ಕೆ ಬಿಜೆಪಿಗರು ಅಭೂತಪೂರ್ವ ಸ್ಪಂದನೆ ನೀಡಿದ್ದಾರೆ. ಇದೀಗ ಈ ಅಭಿಯಾನದ ಅಂಗವಾಗಿ ಸಂಸದರೇ ಸ್ವತಃ ಪೊರಕೆ ಹಿಡಿದು, ಸಂಸತ್ತಿನ ಆವರಣ ಸ್ವಚ್ಛಗೊಳಿಸಿ ಸುದ್ದಿಯಾಗಿದ್ದಾರೆ.

ad


ಹೌದು ಇಂದು ದೆಹಲಿ ಸಂಸತ್ತಿನ ಆವರಣದಲ್ಲಿ ಸ್ವಚ್ಛಭಾರತ ಅಭಿಯಾನ ಹಮ್ಮಿಕೊಳ್ಳಲಾಗಿತ್ತು. ಈ ಅಭಿಯಾನದಲ್ಲಿ ಮೋದಿ ಆದೇಶದ ಹಿನ್ನೆಲೆಯಲ್ಲಿ ಎಲ್ಲ ಬಿಜೆಪಿ ಸಂಸದರು ಉತ್ಸಾಹದಿಂದ ಸಂಸತ್ತಿನ ಆವರಣವನ್ನು ಸ್ವಚ್ಛಗೊಳಿಸಿ ಗಮನ ಸೆಳೆದರು.

ಅದರಲ್ಲೂ ಬಹುಭಾಷಾ ನಟಿ ಹಾಗೂ ಸಂಸದೆ ಹೇಮಾಮಾಲಿನಿ ಕೂಡ ಕೈಯಲ್ಲಿ ಪೊರಕೆ ಹಿಡಿದು ಆವರಣವನ್ನೇಲ್ಲ ಗುಡಿಸಿ ಕಸ ಎತ್ತಿ ಸ್ವಚ್ಛಗೊಳಿಸಿದರು. ಹೇಮಾ ಮಾಲಿನಿಯವರಿಗೆ ಮತ್ತೊರ್ವ ಬಿಜೆಪಿ ಸಂಸದ ಅನುರಾಗ ಠಾಕೂರ ಸೇರಿದಂತೆ ಹಲವರು ಸಾಥ್ ನೀಡಿದ್ದಾರೆ.