ಐಪಿಎಲ್ ಮುಂಬೈ ಇಂಡಿಯನ್ಸ್ ನಾಲ್ಕನೆ ಬಾರಿ ​ ಚಾಂಪಿಯನ್ಸ್​​! ರೋಚಕ ಪಂದ್ಯದಲ್ಲಿ ಗೆಲುವು ದಾಖಲಿಸಿದ ತಂಡ!!

ಕ್ರಿಕೆಟ್ ಪ್ರಿಯರಿಗೆ ೫೧ ದಿನಗಳ ಕಾಲ ರಸದೌತಣ ಒದಗಿಸಿದ ಐಪಿಎಲ್ ೧೨ ನೆ ಅವೃತ್ತಿ ನಿನ್ನೆ ಅದ್ದೂರಿಯಾಗಿ ಮುಕ್ತಾಯವಾಗಿದೆ. ಹೈದರಾಬಾದ್ ನಲ್ಲಿ ನಡೆದ ರೋಚಕ ಫೈನಲ್ ನಲ್ಲಿ ಒಂದು ರನ್ ನಿಂದ ಚೆನ್ನೈ ಸೂಪರ್ ಕಿಂಗ್ಸ್ ಗಂಡವನ್ನ ಮಣಿಸಿದ ಮುಂಬೈ ಇಂಡಿಯನ್ಸ್ ನಾಲ್ಕನೇ ಬಾರಿ ಚಾಂಪಿಯನ್ ಆಯ್ತು. ಕೊನೆಯ ಒವರ್ ನ ಕೊನೆಯ ಎಸೆತದಲ್ಲಿ ಎರಡು ರನ್ ಗಳನ್ನ ಗಳಿಸಬೇಕಾಗಿದ್ದ ಚೆನ್ನೈ ಸೂಪರ್ ಕಿಂಗ್ಸ್ ಅನುಭವಿ ಬೌಲರ್ ಲಸಿತ್ ಮಾಲಿಂಗಾ ಗೆ ವಿಕೆಟ್ ಒಪ್ಪಿಸುವ ಮೂಲಕ ವಿರೋಚಿತ ಸೋಲಪ್ಪಿಕೊಂಡಿತು.

ad

ಹೈದರಾಬಾದ್ ನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದ ಮುಂಬೈ ಇಂಡಿಯನ್ಸ್ ನಾಯಕ ರೋಹಿತ್ ಶರ್ಮಾ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ಬಲಾಢ್ಯ ಬ್ಯಾಟಿಂಗ್ ವಿಭಾಗ ಹೊಂದಿದ್ದ ಮುಂಬೈ ಇಂಡಿಯನ್ಸ್ ಬೃಹತ್ ಮೊತ್ತ ದಾಖಲಿಸುವ ಇರಾದೆಯಲ್ಲಿತ್ತು. ಆದರೆ ಚೆನ್ನೈ ನ ಶಿಸ್ತು ಬದ್ದ ಬೌಲಿಂಗ್ ಇದಕ್ಕೆ ಅವಕಾಶ ನೀಡಲಿಲ್ಲ. ದೀಪಕ್ ಚಾಹರ್ ಮೂರು ವಿಕೇಟ್ ಉರುಳಿಸಿ ಮುಂಬೈ ಬೃಹತ್ ಮೊತ್ತದ ಆಸೆಗೆ ತಣ್ಣೀರೆರಿಚಿದರು. ಆದರೆ ಅನುಭವಿ ಕಿರನ್ ಪೊಲಾರ್ಡ್ ಉಪಯುಕ್ತ ೪೧ರನ್ ಗಳ ಕಾಣಿಕೆ ನೀಡಿ ತಂಡ ೧೪೯ ರನ್ ಗಳ ಸ್ಪರ್ಧಾತ್ಮಕ ಮೊತ್ತ ಕಲೆ ಹಾಕಿತು.

ಈ ಮೊತ್ತವನ್ನ ಬೆನ್ನು ಹತ್ತಿದ ಚೆನ್ನೈ ಸೂಪರ್ ಕಿಂಗ್ ಉತ್ತಮ ಆರಂಭವನ್ನೆ ಪಡೆದಿತ್ತು. ಆರಂಭಿಕ ಫಾಪ್ ಡುಪ್ಲೆಸಿಸ್ ಆರಂಭದಲ್ಲಿ ಅಬ್ಬರಿಸಿದ್ರೆ ಶೇನ್ ವ್ಯಾಟ್ಸನ್ ಕೊನೆಯವರೆಗೂ ಹೊರಾಡಿ ೮೦ ರನ್ ಗಳಿಸಿ ರನೌಟ್ ಆದ್ರೂ ಆದರೆ ಬಿಗುವಿನ ಬೌಲಿಂಗ್ ನಡೆಸಿ ಎರಡು ವಿಕೆಟ್ ಪಡೆದ ಜಸ್ಪ್ರೀತ್ ಬೂಮ್ರಾ ಹಾಗೂ ಕೊನೆಯ ಎಸೆತದಲ್ಲಿ ವಿಕೆಟ್ ಕಬಳಿಸಿದ ಲಸಿತ್ ಮಾಲಿಂಗಾ ಚೆನ್ನೈ ಕೈಯಿಂದ ಪಂದ್ಯವನ್ನ ಕಸಿದುಕೊಂಡ್ರು.

ಟೂರ್ನಿಯಲ್ಲಿ ಗರಿಷ್ಠ ರನ್ ಗಳಿಸಿದ ಹೈದರಾಬಾದ್ ತಂಡದ ಡೇವಿಡ್ ವಾರ್ನರ್ ಆರೆಂಜ್ ಕ್ಯಾಪ್ ಪಡೆದ್ರೆ ಹೆಚ್ಚು ವಿಕೆಟ್ ಕಬಳಿಸಿದ ಚೆನ್ನೈ ತಂಡದ ಇಮ್ರಾನ್ ತಾಹೀರ್ ಪರ್ಪಲ್ ಕ್ಯಾಪ್ ಗೆ ಭಾಜನರಾದರು