ಫಲಿತಾಂಶಕ್ಕೂ ಮುನ್ನವೇ ನಿಖಿಲ್​​ ಕುಮಾರಸ್ವಾಮಿಗೆ ಸಿಕ್ತು ಗೆಲುವಿನ ಮುನ್ಸೂಚನೆ! ದೇವಸ್ಥಾನದಲ್ಲಿ ಸಿಕ್ಕ ಶುಭಸೂಚನೆ ಏನು ಗೊತ್ತಾ?!

ಫಲಿತಾಂಶಕ್ಕೆ ಎರಡು ದಿನ ಬಾಕಿ ಇರುವಂತೆಯೇ ಸಿಎಂ ಕುಮಾರಸ್ವಾಮಿ ಪುತ್ರ ಹಾಗೂ ಮಂಡ್ಯ ಲೋಕಸಭೆಯ ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿಯವರಿಗೆ ಗೆಲುವಿನ ಮುನ್ಸೂಚನೆ ದೊರೆತಿದೆ. ನಿಖಿಲ್ ಅಭಿಮಾನಿಗಳು ದೇವರಿಗೆ ಹರಕೆ ಕುರಿ ಅರ್ಪಿಸುವ ವೇಳೆ ಕುರಿ ಮೈಕೊಡವುವ ಮೂಲಕ ಗೆಲುವಿನ ಸಂಕೇತ ನೀಡಿದೆ.

ನಿಖಿಲ್ ಅಭಿಯಾನಿಯಾಗಿರುವ ಕ್ಯಾತನಹಳ್ಳಿ ಗ್ರಾಮದ ಗವಿಗೌಡ್ ಪ್ರವೀಣ ಎಂಬುವವರು, ಶ್ರೀರಂಗಪಟ್ಟಣ ತಾಲೂಕಿನ ಆರತಿ ಉಕ್ಕಡದ ಅಹಲ್ಯಾ ದೇವಿಗೆ ಹರಕೆ ಹೊತ್ತಿದ್ದರು. ಇಂದು ಹರಕೆ ತೀರಿಸುವ ವೇಳೆ ಹರಕೆ ಕುರಿಗೆ ದೇವರ ತೀರ್ಥ ಹಾಕಿದಾಗ ಮೇಕೆ ಮೈ ಒದರಿದ್ದು, ಮೈ ಒದರಿದ್ರೆ ಹರಕೆ ಈಡೇರುತ್ತೆ ಎಂಬ ನಂಬಿಕೆ ಹಿನ್ನೆಲೆಯಲ್ಲಿ ಅಭಿಮಾನಿಗಳು ಫುಲ್ ಖುಷಿಯಾಗಿದ್ದಾರೆ.

ಇನ್ನು ಹರಕೆಯ ವೇಳೆಯೇ ಗೆಲುವಿನ ಮುನ್ಸೂಚನೆ ನೀಡಿದ್ದರಿಂದ ಸಂಭ್ರಮಿಸಿದ ನಿಖಿಲ್ ಕುಮಾರಸ್ವಾಮಿ ಅಭಿಮಾನಿಗಳು, ದೇವಾಲಯದ ಸುತ್ತ ಉರುಳು ಸೇವೆ ಮಾಡಿ ಸಂಭ್ರಮಿಸಿದರು. 10 ಸಮೀಕ್ಷೆಗಳಲ್ಲಿ ಅಂದಾಜು 6 ಕ್ಕೂ ಹೆಚ್ಚು ಸಮೀಕ್ಷೆಗಳು ಮಂಡ್ಯದಲ್ಲಿ ನಿಖಿಲ್ ಕುಮಾರಸ್ವಾಮಿ ಗೆಲ್ಲಲಿವೆ ಎಂದಿದ್ದರಿಂದ ಗೆಲುವು ನಮ್ಮದೇ ಎಂದು ಅಭಿಮಾನಿಗಳು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ನಿಖಿಲ್ ಕುಮಾರಸ್ವಾಮಿಗೆ ಶುಭಸೂಚನೆ ನೀಡಿದ ಮೇಕೆ

ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿಗೆ ಗೆಲುವಿನ ಮುನ್ಸೂಚನೆ ನೀಡಿದ ಮೇಕೆ.

BtvNews ಅವರಿಂದ ಈ ದಿನದಂದು ಪೋಸ್ಟ್ ಮಾಡಲಾಗಿದೆ ಮಂಗಳವಾರ, ಮೇ 21, 2019