ವಧು ಅನ್ವೇಷಣೆಯಲ್ಲಿ ನಿಖಿಲ್ ಕುಮಾರಸ್ವಾಮಿ !! ಇಂದು ಸೆಟ್ಟಾಗುತ್ತಾ ಮ್ಯಾರೇಜ್ ??

 

ad

ಮುಖ್ಯಮಂತ್ರಿ ಕುಮಾರಸ್ವಾಮಿ ಮುದ್ದಿನ ಮಗ ನಿಖಿಲ್ ಕುಮಾರಸ್ವಾಮಿಗೆ ಇಂದು ಹುಡುಗಿ ನೋಡಲು ಮುಖ್ಯಮಂತ್ರಿ ಕುಟುಂಬ ಆಂದ್ರ ತೆರಳಿದೆ. ಎಲ್ಲವೂ ಓಕೆ ಆದರೆ ಶೀಘ್ರ ಮಾಂಗಲ್ಯಂ ತಂತುನಾನೇನಾ ಮಂತ್ರಮೊಳಗಲಿದೆ.ದೆಹಲಿಯಿಂದ ನೇರವಾಗಿ ಸಿಎಂ ಎಚ್ ಡಿ ಕುಮಾರಸ್ವಾಮಿ ಆಂದ್ರದ ಅಮರಾವತಿಗೆ ತೆರಳಿದ್ದರು. ಪ್ರಾರಂಭದಲ್ಲಿ ಅಮರಾವತಿ ಗೆ ಹೊರಟ್ಟಿದ್ದು ಯಾವುದೇ ಹರಕೆ ತೀರಿಸೋಕೆ ಎನ್ನಲಾಗಿತ್ತು. ಆನಂತರ ತೃತೀಯ ರಂಗದ ಬಗ್ಗೆ ಆಂದ್ರ ಸಿಎಂ ನಾಯ್ಡು ಜೊತೆ ಮಾತ‌ನಾಡೋಕೆ ತೆರಳಿದ್ದಾರೆ ಎನ್ನಲಾಯ್ತು.‌ಆದರೆ ಇವ್ಯಾವ ಕಾರಣಕ್ಕೂ ಎಚ್ ಡಿ ಕುಮಾರಸ್ವಾಮಿ ಅಮರಾವತಿಗೆ ಹೋಗಿಲ್ಲ. ಅವರು ಹೋಗಿದ್ದು ನಿಖಿಲ್ ಗೆ ಹುಡುಗಿ ನೋಡಲು !!ತನ್ನ ಮಗನಿಗೋಸ್ಕರ ಪತ್ನಿ ಸಮೇತ ಅಮರಾವತಿಗೆ ತೆರಳಿದ್ದು, ಆಂದ್ರದಲ್ಲಿರುವ ಕರ್ನಾಟಕ ಮೂಲದವರ ಜೊತೆ ಸಂಬಂಧ ಬೆಳೆಸುತ್ತಿದ್ದಾರೆ.

ಇಂದು ಹುಡುಗಿ ನೋಡುವ ಶಾಸ್ತ್ರ ಮುಗಿಸಲಿದ್ದು, ಮುಹೂರ್ತ ನೋಡಿ ಎರಡೂ ಕುಟುಂಬದವರು ಸೇರಿ ಮಾತುಕತೆ ನಡೆಸಲಿದ್ದಾರೆ. ಮುಂದಿನ ತಿಂಗಳು ದೇವೇಗೌಡರ ಕುಟುಂಬ ಸದಸ್ಯರೆಲ್ಲ ತೆರಳಿ ಮಾತುಕತೆ ನಡೆಸಲಿದ್ದಾರೆ.ಈ ಬಗ್ಗೆ ಬೆಂಗಳೂರಿನಲ್ಲಿ ಮಾತನಾಡಿದ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ, ನಿಖಿಲ್ ಗೆ ಹುಡುಗಿ ನೋಡಲು ಆಂದ್ರ ಹೋಗಿದ್ದಾರೆ. ಅದು ಕುಟುಂಬದ ವೈಯುಕ್ತಿಕ ಕಾರ್ಯಕ್ರಮ. ಎರಡೂ ಕುಟುಂಬಗಳಿಗೆ ಸಂಬಂಧ ಒಪ್ಪಿಗೆಯಾದರೆ ಮುಂದಿನ ಮಾತುಕತೆ ನಡೆಯುತ್ತದೆ ಎಂದರು.