ಮಂಡ್ಯ ಅಪಘಾತ ಸಂತ್ರಸ್ಥರ ಕುಟುಂಬ ಭೇಟಿ ಮಾಡಿದ ನಿಖಿಲಕುಮಾರಸ್ವಾಮಿ- ರಾಜಕೀಯ ಚರ್ಚೆಗೆ ಎಡೆಮಾಡಿಕೊಟ್ಟ ಯುವರಾಜನ ಭೇಟಿ!

 

ad


 

 

ಲೋಕಸಭಾ ಚುನಾವಣೆಗೆ ದಿನಗಣನೆ ನಡೆದಿರೋದರಿಂದ ಪ್ರತಿಯೊಂದು ನಡೆಯೂ ರಾಜಕೀಯ ಅರ್ಥ ಪಡೆದುಕೊಳ್ಳುತ್ತಿದೆ. ಮೊನ್ನೆ ಮಂಡ್ಯದಲ್ಲಿ ನಡೆದ ಭೀಕರ ಅಪಘಾತದಲ್ಲಿ ಸಾವನ್ನಪ್ಪಿದವರ ಮನೆಗಳಿಗೆ ಸಿಎಂ ಕುಮಾರಸ್ವಾಮಿ ಪುತ್ರ ನಿಖಿಲಕುಮಾರಸ್ವಾಮಿ ಭೇಟಿ ನೀಡಿದರು. ಅಲ್ಲದೇ ಮೃತರ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ನಿಖಿಲ ಕುಮಾರಸ್ವಾಮಿ ಈ ಭೇಟಿ ಹಲವು ಚರ್ಚೆ ಹುಟ್ಟುಹಾಕಿದೆ.
ರೈತರ ಆತ್ಮಹತ್ಯೆ ಹಾಗೂ ಅಪಘಾತ ಪ್ರಕರಣಗಳನ್ನು ನೆಪ ಮಾಡಿಕೊಂಡು ನಿಖಿಲ್ ಆಗಾಗ ಮಂಡ್ಯಕ್ಕೆ ಭೇಟಿ ಕೊಡುತ್ತಿದ್ದಾರೆ ಎನ್ನಲಾಗಿದೆ.. ಕಳೆದ ಆರು ತಿಂಗಳಿಂದ ಮಂಡ್ಯಕ್ಕೆ ನಿಖಿಲ್ ಓಡಾಟ ಹೆಚ್ಚಿರುವ ಹಿನ್ನೆಲೆಯಲ್ಲಿ ಮಂಡ್ಯ ಲೋಕಸಭಾ ಕ್ಷೇತ್ರದಿಂದ ಅವರನ್ನೇ ಕಣಕ್ಕಿಳಿಸಲು ಜೆಡಿಎಸ್ ನಾಯಕರು ಮಾಸ್ಟರ್ ಪ್ಲಾನ್ ಮಾಡಿದ್ದಾರೆಂಬ ಮಾತು ಕೇಳಿಬರುತ್ತಿದೆ.

ಕೆಲ ದಿನಗಳ ಹಿಂದೆ ಮಂಡ್ಯ ಕ್ಷೇತ್ರಕ್ಕೆ ಹೆಚ್ ಡಿ ದೇವೇಗೌಡ ಹಾಗೂ ಪ್ರಜ್ವಲ್ ರೇವಣ್ಣ ಹೆಸರು ಕೇಳಿಬಂದಿತ್ತು.. ಆದ್ರೆ ಸೆಲೆಬ್ರಿಟಿಗಳನ್ನು ಕಣಕ್ಕಿಳಿಸಿದ್ರೆ ಗೆಲುವು ಖಚಿತ ಎಂಬುದು ಜೆಡಿಎಸ್ ಲೆಕ್ಕಾಚಾರವಾಗಿದೆ. ಅದಕ್ಕೆ ಸಾಕ್ಷಿ ಎಂಬಂತೆ ಈಗಾಗಲೇ ಹಲವು ಭಾರಿ ಮಂಡ್ಯ ಸೇರಿದಂತೆ ಹಲವು ಸೆಲಿಬ್ರೆಟಿಗಳು ಮಂಡ್ಯದ ಅಂಗಳದಿಂದ ಲೋಕಸಭೆ ಮೆಟ್ಟಿಲೇರಿದ್ದಾರೆ. ಹೀಗಾಗಿ ನಿಖಿಲ ಕುಮಾರಸ್ವಾಮಿ ಅಲ್ಲಿನ ಜನರ ಸಂಕಷ್ಟಕ್ಕೆ ಸ್ಪಂದಿಸುತ್ತಿರುವುದರಲ್ಲಿ ಚುನಾವಣೆಯ ಪೂರ್ವ ತಯಾರಿಯೂ ಸೇರಿರಬಹುದೆಂಬ ಅನುಮಾನ ವ್ಯಕ್ತವಾಗಿದೆ.