ಹಣಕಾಸು ಇಲಾಖೆ ಸ್ವಚ್ಛತೆಗೆ ಮುಂದಾದ ನಿರ್ಮಲಾ ಸೀತಾರಾಮನ್​! ಭ್ರಷ್ಟಾಚಾರ ಆರೋಪ ಹೊತ್ತ 12 ಅಧಿಕಾರಿಗಳಿಗೆ ಕಡ್ಡಾಯನಿವೃತ್ತಿ?!

ಎರಡನೇ ಬಾರಿ ದೇಶದ ಚುಕ್ಕಾಣಿ ಹಿಡಿದಿರುವ ಪ್ರಧಾನಿ ನರೇಂದ್ರ ಮೋದಿ ಸಚಿವ ಸಂಪುಟದ ಅತ್ಯಂತ ಪ್ರಭಾವಿ ಸಚಿವೆ ನಿರ್ಮಲಾ ಸೀತಾರಾಮನ್, ತಮ್ಮ ಖಡಕ್​ ಕಾರ್ಯವೈಖರಿಯಿಂದಲೇ ಮನೆಮಾತಾದ ನಿರ್ಮಲಾ,ಹಣಕಾಸು ಇಲಾಖೆ ಹೊಣೆ ಹೊತ್ತುಕೊಳ್ಳುತ್ತಿದ್ದಂತೆಯೇ ​​​​ ಇಲಾಖೆಯನ್ನು ಕ್ಲೀನ್​ ಮಾಡೋವತ್ತ ಹೆಜ್ಜೆ ಇಟ್ಟಿದ್ದಾರೆ.


ಹೌದು ಹಣಕಾಸು ಇಲಾಖೆಯಲ್ಲಿ ಬೃಹತ್ ಭ್ರಷ್ಟಾಚಾರ ಹಾಗೂ ವಂಚನೆ ಪ್ರಕರಣಗಳಲ್ಲಿ ಭಾಗಿಯಾದ ಮತ್ತು ಆರೋಪ ಹೊತ್ತ ಅಧಿಕಾರಿಗಳನ್ನು ಕಡ್ಡಾಯ ನಿವೃತ್ತಿ ಮೇಲೆ ತೆರಳುವಂತೆ ನಿರ್ಮಲಾ ಸೀತಾರಾಮನ್ ಆದೇಶಿಸಿದ್ದಾರೆ.


ಆದಾಯ ತೆರಿಗೆ ಇಲಾಖೆಯ 12 ಉನ್ನತ ದರ್ಜೆಯ ಅಧಿಕಾರಿಗಳನ್ನು ಇಲಾಖೆ ಕಡ್ಡಾಯ ನಿವೃತ್ತಿ ಮೇಲೆ ಕಳಿಸಿದೆ. ಮೂಲಭೂತ ಹಕ್ಕಿನ 56-ಜೆ ನಿಯಮದ ಅಡಿಯಲ್ಲಿ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ ಎಂದು ಇಲಾಖೆ ಹೊರಡಿಸಿದ ಆದೇಶದಲ್ಲಿ ತಿಳಿಸಿದೆ. ಇದ್ರಲ್ಲಿ ಆದಾಯ ತೆರಿಗೆ ಇಲಾಖೆಯ ವಿವಿಧ ರಾಜ್ಯಗಳ ಆಯುಕ್ತರೂ ಸೇರಿದ್ದಾರೆ.


ಹಣಕಾಸು ಇಲಾಖೆಯಲ್ಲಿ ಆರಂಭವಾಗಿರೋ ಈ ಕಠಿಣ ಕ್ರಮ ಇತರೆ ಇಲಾಖೆಗಳಿಗೂ ವಿಸ್ತರಣೆ ಆಗೋ ಸಾಧ್ಯತೆ ಇದೆ. ನಿನ್ನೆ ಸಚಿವಾಲಯಗಳ ಕಾರ್ಯದರ್ಶಿಗಳ ಸಭೆ ನಡೆಸಿದ್ದ ಪ್ರಧಾನಿ ನರೇಂದ್ರ ಮೋದಿ ಅವರೂ ಪಾರದರ್ಶಕ ಆಡಳಿತದ ಎಚ್ಚರಿಕೆ ನೀಡಿದ್ದರು. ಜನರ ಜೀವನವನ್ನು ಸುಲಭಗೊಳಿಸುವ ಕಾರ್ಯಕ್ರಮಗಳತ್ತ ಗಮನಹರಿಸಿ, ಭ್ರಷ್ಟಾಚಾರದಂತಹ ಕೃತ್ಯಕ್ಕೆ ಕೈಹಾಕಬೇಡಿ ಎಂದು ವಾರ್ನಿಂಗ್​ ಮಾಡಿದ್ರು.