ಪಾನಿಪೂರಿ ಹಲ್ಲೆಕೋರನಿಗಿಲ್ಲ “ಬೇಲ್” ಪೂರಿ !! ದುನಿಯಾ ವಿಜಿಗೆ ಜೈಲೇ ಗತಿ !!

ಪಾನಿಪೂರಿ ಕಿಟ್ಟಿ ಮತ್ತು ಮಾರುತಿ ಗೌಡ ಮೇಲಿನ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿ ದುನಿಯಾ ವಿಜಿಗೆ ಜಾಮೀನು ನಿರಾಕರಣೆ ಮಾಡಲಾಗಿದೆ.8ನೇ ಎಸಿಎಂಎಂ ನ್ಯಾಯಾಲಯದಲ್ಲಿ ಸೋಮವಾರ ಜಾಮೀನು ಅರ್ಜಿ ವಿಚಾರಣೆ ನಡೆದಿದ್ದು, ಅದರ ಆದೇಶವನ್ನು ನ್ಯಾಯಾಧೀಶರು ಇಂದಿಗೆ ಕಾಯ್ದಿರಿಸಿದ್ದರು.

ad

ನಾಲ್ಕು ದಿನಗಳ ಹಿಂದೆ ಅಂದರೆ ಸೆ. 22ರ ರಾತ್ರಿ ದುನಿಯಾ ವಿಜಯ್​ ಮತ್ತು ಸ್ನೇಹಿತರು ವಸಂತಪುರದಲ್ಲಿ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದ ವೇಳೆ ಮಾರುತಿ ಗೌಡನನ್ನು ಅಪಹರಿಸಿ, ಕಾರಿನಲ್ಲೇ ಮಾರಣಾಂತಿಕ ಹಲ್ಲೆ ನಡೆಸಿದ್ದರು. ಅಂದು ರಾತ್ರಿಯೇ ಆರೋಪಿಗಳನ್ನಯ ನ್ಯಾಯಾಧೀಶರು 14 ದಿನಗಳ ನ್ಯಾಯಾಂಗ ಬಂಧನಕ್ಕೆ ನೀಡಿದ್ದರು. ಸೆ. 23ರಂದು 8ನೇ ಎಸಿಎಂಎಂ ನ್ಯಾಯಾಲಯಕ್ಕೆ ವಿಜಯ್​ ಸೇರಿದಂತೆ 4 ಆರೋಪಿಗಳ ಜಾಮೀನು ಅರ್ಜಿ ಸಲ್ಲಿಕೆಯಾಗಿತ್ತು. ವಾದ-ಪ್ರತಿವಾದದ ಬಳಿಕ ಕೋರ್ಟ್​ ಇಂದಿಗೆ ಜಾಮೀನು ಅರ್ಜಿ ಆದೇಶವನ್ನು ಕಾಯ್ದಿರಿಸಿತ್ತು.

ಪರಪ್ಪನ ಅಗ್ರಹಾರ ಸೇರಿರುವ ನಟ ವಿಜಯ್​ ಜೈಲಿನಲ್ಲಿ 3ನೇ ದಿನವನ್ನು ಕಳೆದಿದ್ದಾರೆ. ಸಾಮಾನ್ಯ ಕೈದಿಯಂತೆ ಕಾಲ ಕಳೆಯುತ್ತಿರುವ ವಿಜಯ್​ ಇಂದು ಜಾಮೀನು ಸಿಕ್ಕಿ ಬಿಡುಗಡೆ ನಿರೀಕ್ಷೆ ಹೊಂದಿದ್ದರು. ಆದರೆ ನ್ಯಾಯಾಲಯ ಜಾಮೀನು ನೀಡಲು ನಿರಾಕರಿಸಿದೆ.