“ದೇವೇಗೌಡರ ಅವಧಿಯಲ್ಲಿ ರಕ್ತಪಾತವಾಗಿರಲಿಲ್ಲ. ಈಗ್ಯಾಕೆ.?” – ಸಿ.ಎಂ ಹೆಚ್ ಡಿ ಕುಮಾರಸ್ವಾಮಿ

ದೇಶದಲ್ಲಿ ದೇವೇಗೌಡರು ಪ್ರಧಾನಿಯಾಗಿದ್ದಾಗ ಇಂತಹ ರಕ್ತಪಾತಗಳಾಗಿಲ್ಲ ಈಗ್ಯಾಕೆ ಆಗ್ತಿದೆ ಅನ್ನೋದರ ಬಗ್ಗೆ ಚಿಂತನೆ ನಡೆಸಬೇಕಿದೆ ಎಂದು ಸಿ.ಎಂ ಕುಮಾರಸ್ವಾಮಿ ಹೇಳಿದ್ದಾರೆ. ಹಾಸನದಲ್ಲಿ ಪುಲ್ವಾಮಾ ವಿಚಾರವಾಗಿ ಮಾತನಾಡಿದ ಸಿಎಂ, ಪ್ರಧಾನಿಯವರು ಕೇವಲ ವೇದಿಕೆಯಲ್ಲಿ ಆವೇಶಭರಿತವಾಗಿ, ಭಾವೋದ್ವೇಗದಿಂದ ಘೋಷಣೆ ಮಾಡುವುದರಿಂದ ಪ್ರಯೋಜನವಿಲ್ಲ ಎಂದರು. ದಂಡಂ ದಶಗುಣಂ ಮತ್ತು ಸೌಹಾರ್ಧ ಮಾತುಕತೆ ಎರಡೂ ಇರಬೇಕು ಮೋದಿ ವಿರುದ್ಧ ವ್ಯಂಗ್ಯವಾಡಿದರು.