ಅಂದು ಬರಗಾಲದ ಹಿನ್ನೆಲೆಯಲ್ಲಿ ಎತ್ತುಗಳ ಮಾರಾಟ, ಇಂದು ಉತ್ತಮ ಮಳೆಯಾಗಿದೆ.. ಆದರೆ ಎತ್ತುಗಳಿಲ್ಲ. ಹಾಗಾದ್ರೆ ರೈತ ಮಾಡಿದ್ದೇನು?

ಹುಬ್ಬಳ್ಳಿಯಲ್ಲಿ ಅನ್ನದಾತನ ಗೋಳು… ಎತ್ತುಗಳು ಮಾಡೋ ಕೆಲಸ ಮನಷ್ಯರಿಂದ… ಎಷ್ಟೇ ಕಷ್ಟವಾದ್ರು ಉಳಿಮೆ ಮಾಡ್ತಾಯಿರೋ ಅನ್ನದಾತ… ಬರಗಾಲದ ಹಿನ್ನಲೆ ಎತ್ತುಗಳ ಮಾರಾಟ… ಈವಾಗ ಎತ್ತುಗಳನ್ನು ಖರೀದಿ ಮಾಡುವ ಶಕ್ತಿಯಿಲ್ಲದ ಅನ್ನದಾತ…

ad

   

ಈ ಅನ್ನದಾತನ ಸಂಕಷ್ಟ ಹೇಳತೀರದು.  ಹೌದು ಎತ್ತುಗಳು ಮಾಡುವ ಕೆಲಸವನ್ನು ಈ ರೈತರು ಮಾಡ್ತಾ ಇರೋದನ್ನು ನೋಡಿದ್ರೆ ಎಂತ‌ ಕಟುಕ ಹೃದಯ ಸಹ ಚುರುಕ್ ಅನ್ನುತ್ತೆ. ಅಂದಹಾಗೇ ಹುಬ್ಬಳ್ಳಿ ತಾಲೂಕಿನ ಕುಸುಗಲ್ ಗ್ರಾಮದ ನಿವಾಸಿಯಾದ ಗುರುಸಿದ್ದಪ್ಪ ಸುಂಕದ ಎನ್ನುವ ರೈತ, ತನ್ನ ಸಹೋದರ ಹಾಗೂ ಇನ್ನೋರ್ವ ಕೂಲಿ ಕಾರ್ಮಿಕನನ್ನು ಬಳಸಿಕೊಂಡು ಬಿತ್ತನೆ ಕಾರ್ಯ ಮಾಡ್ತಾಯಿದ್ದಾನೆ.

 

ಕಳೆದ ಮೂರು ವರ್ಷಗಳಿಂದ ಭೀಕರ ಬರಗಾಲ ಆವರಿಸಿದ್ದರಿಂದ ಎತ್ತುಗಳು ಮಾರಾಟ ಮಾಡಿದ್ದಾನೆ. ಈವಾಗ ಉತ್ತಮ ಮಳೆಯಾಗಿದ್ದು, ಬಿತ್ತನೆ ಮಾಡಬೇಕು ಎಂದ್ರೆ ಎತ್ತುಗಳು ಇಲ್ಲ. ಹಾಗಾಗಿ ಮನುಷ್ಯರಿಂದ ಎತ್ತುಗಳ ಕೆಲಸವನ್ನು ಮಾಡಿಸಿಕೊಳ್ಳುತ್ತಿದ್ದಾನೆ. ತನ್ನ ಜಮೀನಿನಲ್ಲಿ ಮೆಣಸಿನ ಬೀಜಗಳ ಬಿತ್ತನೆ ಕಾರ್ಯ ಮಾಡ್ತಾ ಇದ್ದಾನೆ. ಇನ್ನೂ ಕೂಲಿ ಕಾರ್ಮಿಕರಿಗೆ ದಿನಕ್ಕೆ 300 ರಿಂದ‌ 350 ರೂಪಾಯಿ ಕೂಲಿ ನೀಡಿ ಅವರಿಂದ ಕೆಲಸ ಮಾಡಿಸಿಕೊಳ್ಳುತ್ತಿದ್ದಾನೆ. ಉತ್ತಮವಾಗಿ ಮಳೆ ಬಂದ್ರೆ ಕೃಷಿಯಲ್ಲಿ ಲಾಭವಾಗುತ್ತೇ. ಆದ್ರೇ ಈವಾಗ ಈ ರೈತನಿಗೆ ಎತ್ತುಗಳನ್ನು ಕೊಂಡುಕೊಳ್ಳುವ ಶಕ್ತಿಯಿಲ್ಲಾ ಹಾಗಾಗಿ ಮನುಷ್ಯರಿಂದ ಎತ್ತುಗಳನ್ನು ಮಾಡುವ ಕೆಲಸ ಮಾಡಿಸಿಕೊಳ್ಳುತ್ತಿದ್ದಾನೆ. ಈ ರೈತರ ಗೋಳು ಕೇಳಲು ಸರ್ಕಾರವಾಗಲಿ ಅಥವಾ ಸಂಘ ಸಂಸ್ಥೆಗಳು ಮುಂದೆ ಬಂದ್ರೆ ರೈತರ ಬದುಕು ಹಸನಾಗುತ್ತೆ…