ಒಂದು ವರ್ಷ ನೋ ಜಿಮ್​​- ಚಾಲೆಂಜಿಂಗ್ ಸ್ಟಾರ್‌ಗೆ ಡಾಕ್ಟರ್​ ಸೂಚನೆ- ನಿರ್ಮಾಪಕರ ಎದೆಯಲ್ಲಿ ಆತಂಕ!

 

ad


ರಸ್ತೆ ಅಪಘಾತದಲ್ಲಿ ಚಾಲೆಂಜಿಂಗ್​ ಸ್ಟಾರ್ ದರ್ಶನ ಆಸ್ಪತ್ರೆ ಸೇರಿರೋದರಿಂದ ಈಗಾಗಲೇ ಅವರ ಮೇಲೆ ಹಣ ಹೂಡಿಕೆ ಮಾಡಿರುವ ನಿರ್ಮಾಪಕರು ನಿದ್ದೆಗೆಟ್ಟಿದ್ದಾರೆ. ಹೀಗಿರುವಾಗಲೇ ಚಲನಚಿತ್ರ ಪ್ರಿಯರಿಗೆ, ದರ್ಶನ ಅಭಿಮಾನಿಗಳು ಹಾಗೂ ನಿರ್ಮಾಪಕರಿಗೆ ಇನ್ನೊಂದು ಶಾಕ್​ ಎದುರಾಗಿದೆ. ಹೌದು ಚಾಲೆಂಜಿಂಗ್​ ಸ್ಟಾರ್ ದರ್ಶನ ಇನ್ನೊಂದು ವರ್ಷಗಳ ಜಿಮ್​ ಮಾಡುವಂತಿಲ್ಲ ಎಂದು ವೈದ್ಯರು ಹೇಳಿದ್ದು, ದರ್ಶನ ಚಿತ್ರಗಳ ನಿರ್ಮಾಪಕರ ಎದೆಯಲ್ಲಿ ನಡುಕ ಆರಂಭವಾಗಿದೆ.

 

 

ಮೊನ್ನೆಯಷ್ಟೇ ದರ್ಶನ ಮೈಸೂರಿನಿಂದ ಬೆಂಗಳೂರಿಗೆ ಬರುತ್ತಿದ್ದ ವೇಳೆ ಕಾರು ಅಪಘಾತದಲ್ಲಿ ಗಾಯಗೊಂಡು ಆಸ್ಪತ್ರೆ ಸೇರಿದ್ದಾರೆ. ಅವರ ಬಲಗೈಗೆ ಗಾಯವಾಗಿರೋದರಿಂದ ಶಸ್ತ್ರಚಿಕಿತ್ಸೆ ನಡೆಸಿ ಪ್ಲೇಟ್​ ಅಳವಡಿಸಲಾಗಿದೆ. ಇನ್ನು ಈ ಪ್ಲೇಟ್​ನ್ನು ಎರಡು ವರ್ಷಗಳ ಬಳಿಕ ತೆಗೆಯಲಾಗುತ್ತದೆ. ಹೀಗಾಗಿ ಯಾವುದೇ ರೀತಿಯಲ್ಲೂ ಭಾರ ಎತ್ತಬಾರದು ಹಾಗೂ ಜಿಮ್​ ಮಾಡುವಂತಿಲ್ಲ ಎಂದು ಮೈಸೂರಿನ    ಕೋಲಂಬಿಯಾ ಏಷ್ಯಾ ಆಸ್ಪತ್ರೆ ವೈದ್ಯರು ಸಲಹೆ ನೀಡಿದ್ದಾರೆ.

 

ಇದರಿಂದ ಇನ್ನು ಎರಡು ವರ್ಷಗಳ ಕಾಲ ದರ್ಶನ ಯಾವುದೇ ದೈಹಿಕ ಕಸರತ್ತು ಮಾಡುವಂತಿಲ್ಲ. ಇದರಿಂದ ಅವರ ಫಿಟನೆಸ್​ ಮೇಲೆ ಪ್ರಭಾವಬೀರಲಿದ್ದು ದರ್ಶನ ಮೇಲೆ ಕೋಟ್ಯಾಂತರ ರೂಪಾಯಿ ಹಣ ಹೂಡಿಕೆ ಮಾಡಿದ ನಿರ್ಮಾಪಕರಿಗೆ ಆತಂಕ ಶುರುವಾಗಿದೆ. ಇನ್ನೊಂದೆಡೆ ಚಿತ್ರೀಕರಣದಲ್ಲಿ ಭಾಗಿಯಾದರೂ ಕೂಡ ಫೈಟ್​ ಸೀನಗಳನ್ನು ಮಾಡಲು ಸಾಧ್ಯವಾಗತ್ತೋ ಇಲ್ವೋ ಅನ್ನೋ ಆತಂಕಕೂಡ ಕಾಡತೊಡಗಿದೆ. ಹೀಗಾಗಿ ಆಸ್ಪತ್ರೆ ಬೆಡ್​ ಮೇಲೆ ದರ್ಶನ ಮಲಗಿದ್ದರೇ ಇತ್ತ ನಿರ್ಮಾಪಕರು ಮಾತ್ರ ಕಂಗಾಲಾಗಿದ್ದಾರೆ.