ನಮ್ಮ ಶಿಫಾರಸ್ಸಿಗೆ ಬೆಲೆ ಇಲ್ಲ- ಮತ್ತೆ ಸಿಟ್ಟಾದ ಕಾಂಗ್ರೆಸ್​ ಶಾಸಕರು- ಮನವೊಲಿಸಲು ಪೊಲೀಸ್ ವರ್ಗಾವಣೆಯನ್ನೇ ರದ್ದುಗೊಳಿಸಿದ ಸಿಎಂ ಕುಮಾರಣ್ಣ!

ಸಮ್ಮಿಶ್ರ ಸರ್ಕಾರದಲ್ಲಿ ಯಾವುದೇ ಅಸಮಧಾನವಿಲ್ಲ. ಎಲ್ಲ ಸರಿ ಹೋಯತು ಅಂದುಕೊಳ್ಳೋ ಹೊತ್ತಿಗೆ ಮತ್ತೊಂದು ಮುಸುಕಿನ ಗುದ್ದಾಟ ಆರಂಭವಾಗಿದೆ. ಹೌದು ಇನ್ಸಪೆಕ್ಟರ್​​ಗಳ ವರ್ಗಾವಣೆ ವಿಚಾರ ಕಾಂಗ್ರೆಸ್​ ಶಾಸಕರ ಅಸಮಧಾನಕ್ಕೆ ಕಾರಣವಾಗಿದ್ದು, ಕೈ ಪಾಳಯದ ಅಸಮಧಾನಕ್ಕೆ ಮದ್ದರೆಯಲು ಮುಂಧಾದ ಸಿಎಂ ಕುಮಾರಸ್ವಾಮಿ ಇನ್ಸಪೆಕ್ಟರ್​​ಗಳ ವರ್ಗಾವಣೆಯನ್ನೇ ತಡೆಹಿಡಿದಿದ್ದಾರೆ.

ad


ನಿನ್ನೆ ರಾಜ್ಯದ ವಿವಿಧ ಪೊಲೀಸ್ ಠಾಣೆಯಗಳ ಒಟ್ಟು 141 ಇನ್ಸಪೆಕ್ಟರ್​ಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಲಾಗಿತ್ತು. ಆದರೇ ಈ ಪಟ್ಟಿಗೆ ಕಾಂಗ್ರೆಸ್ ಶಾಸಕರ ತೀವ್ರ ವಿರೋಧ ವ್ಯಕ್ತವಾಗಿತ್ತು ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಈ ಅಸಮಧಾನ ಗಮನಕ್ಕ ಬರುತ್ತಿದ್ದಂತೆ ಸಿಎಂ ಕುಮಾರಸ್ವಾಮಿ ಯಾವುದೇ ಇನ್ಸಪೆಕ್ಟರ್​ಗಳುಠಾಣೆಯಿಂದ ತೆರವಾಗದಂತೆ ನೋಡಿಕೊಳ್ಳುವಂತೆ ಆದೇಶಿಸಿದ್ದಾರೆ.

ಕಾಂಗ್ರೆಸ್​ ಶಾಸಕರು ತಾವು ನೀಡಿದ ಶಿಫಾರಸ್ಸು ಪತ್ರಕ್ಕೆ ಸಿಎಂ ಮಾನ್ಯತೆ ಸಿಗದೇ ಇರೋದಿಕ್ಕೆ ಸಿಟ್ಟಾಗಿದ್ದರು ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಕುಮಾರಸ್ವಾಮಿ ಎಮ್​ಎಲ್​ಎಗಳ ಮನವೊಲಿಸುವ ನಿಟ್ಟಿನಲ್ಲಿ ಈ ಲಿಸ್ಟ್​ ಕೈಬಿಡುವಂತೆ ಸೂಚಿಸಿದ್ದಾರೆ. ಸಿಎಂ ಖಡಕ್ ಆರ್ಡರ್ ಸಿಗುತ್ತಿದ್ದಂತೆ ಇನ್ಸಪೆಕ್ಟರ್​ಗಳ ವರ್ಗಾವಣೆ ತಡೆ ನೀಡಿ ರಾಜ್ಯ ಪೊಲೀಸ್ ವರಿಷ್ಟಾಧಿಕಾರಿಗಳ ಕಚೇರಿ ಮೌಖಿಕ ಆದೇಶ ನೀಡಿದೆ. ಅಲ್ಲದೇ ವರ್ಗಾವಣೆಗೊಂಡಿರುವ ಯಾವುದೇ ಇನ್ಸ್ ಪೆಕ್ಟರ್ ಗಳು ರಿಲೀವ್ ಆಗದಂತೆ ಸೂಚನೆ ಸಿಕ್ಕಿದ್ದು, ರಾಜ್ಯ ಪೊಲೀಸ್ ಮಹಾನಿರ್ದೇಶಕರ ಕಚೇರಿಯಿಂದ ವೈರ್ ಲೇಸ್ ಸಂದೇಶ ರವಾನೆಯಾಗಿದೆ. ಒಟ್ಟಿನಲ್ಲಿ ಸಮ್ಮಿಶ್ರ ಸರ್ಕಾರದಲ್ಲಿ ಸಿಎಂ ಕುಮಾರಸ್ವಾಮಿ ರಾಜ್ಯದ ಅಭಿವೃದ್ಧಿಗೆ ದುಡಿಯೋದಕ್ಕಿಂತ ಸರ್ಕಾರ ಬ್ಯಾಲೆನ್ಸ್​ ಮಾಡೋದಿಕ್ಕೆ ಸರ್ಕಸ್​ ಮಾಡುವಂತಾಗಿರೋದು ಮಾತ್ರ ದುರಂತವೇ ಸರಿ.