ಉತ್ತರ ಕರ್ನಾಟಕದ ಅಮರನಾಥ ಯಾತ್ರಿಗಳ ಪರದಾಟ…

ಪ್ರತಿಕೂಲ ಹವಾಮಾನದಿಂದಾಗಿ ಉತ್ತರ ಕರ್ನಾಟಕದ 59 ಅಮರನಾಥ ಯಾತ್ರಿಗಳು ಸಂಕಷ್ಟದಲ್ಲಿ ಸಿಲುಕಿದ್ದಾರೆ. ಹುಬ್ಬಳ್ಳಿ -ಧಾರವಾಡ ಅವಳಿನಗರದಿಂದ ಜೂನ್ 26 ರಂದು ಖಾಸಗಿ ಟ್ರಾವಲ್ಸ್ ಮೂಲಕ ಅಮರನಾಥ ಯಾತ್ರೆಗೆ 115 ಯಾತ್ರಿಗಳ ತೆರಳಿದ್ದರು.

ad


    
ಅವರಲ್ಲಿ 59 ಯಾತ್ರಿಗಳು ಗುಫಾ ಪ್ರದೇಶದಲ್ಲಿ ಕಳೆದ 3 ದಿನಗಳಿಂದ ಸಿಲುಕಿಕೊಂಡಿದ್ದಾರೆ. ಪ್ರತಿಕೂಲ ಹವಾಮಾನದಿಂದಾಗಿ ಗುಫಾ ಪ್ರದೇಶದಲ್ಲಿ ಸಿಲುಕಿರುವ ಯಾತ್ರಿಗಳು ತೀವೃ ಸಂಕಷ್ಟ ಅನುಭವಿಸುತ್ತಿದ್ದಾರೆ. ಆಹಾರ ಹಾಗೂ ನೀರಿನ ಕೊರತೆಯಿಂದ ಕೆಲವರು ಅಸ್ವಸ್ಥರಾಗಿದ್ದಾರಂತೆ.

ಗುಫಾ ಪ್ರದೇಶಲ್ಲಿ ಸಿಲುಕಿರುವ ಯಾತ್ರಿಕರು ಸಹಾಯಕ್ಕಾಗಿ ರಾಜ್ಯ ಹಾಗೂ ಕೇಂದ್ರ ಸರಕಾರಕ್ಕೆ ಮನವಿ ಮಾಡಿದ್ರೂ, ಯಾರು ಕೂಡ ಸ್ಪಂದನೆ ಮಾಡುತ್ತಿಲ್ಲ ಎಂದು ಯಾತ್ರೆಗೆ ತೆರಳಿದ ರಾಘವೇಂದ್ರ ಶಿರಹಟ್ಟಿ ಆರೋಪಿಸಿದ್ದಾರೆ.

 

ಗುಫಾ ಪ್ರದೇಶದ ಸುತ್ತಮುತ್ತ ಕಳೆದ ಮೂರು ದಿನಗಳಿಂದ ಸುರಿಯುತ್ತಿರುವ ಭಾರಿಮಳೆ ಹಾಗೂ ಚಳಿಯಲ್ಲಿ ಸಿಲುಕಿರುವ ಯಾತ್ರಿಗಳ ಸಹ ಯಾತ್ರಿಗಳ ಸಂಪರ್ಕಕ್ಕೆ ಸಿಗುತ್ತಿಲ್ಲ. ಕೇಂದ್ರ ಸರ್ಕಾರ ರಕ್ಷಣಾ ಕಾರ್ಯವನ್ನು ತೀವೃಗೊಳಿಸುವ ಮೂಲಕ ಗುಫಾ ಪ್ರದೇಶದಲ್ಲಿ ಸಿಲುಕಿರುವ ಯಾತ್ರಿಗಳನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲು ಮನವಿ ಮಾಡಿಕೊಂಡಿದ್ದಾರೆ.