ನಮಗೆ ಸಾಯಲು ಮನಸ್ಸಿಲ್ಲ, ರಕ್ಷಣೆ ಕೊಡಿ ಎಂದ ಪ್ರೇಮಿಗಳು

ರಕ್ಷಣೆಗಾಗಿ ಸಾಮಾಜಿಕ ಜಾಲತಾಣದಲ್ಲಿ ಮೋರೆ. ನವಜೋಡಿಯ ಸೆಲ್ಫ್ ವಿಡಿಯೋ ವೈರಲ್

ad


ಹುಡುಗಿ ಮನೆಯವರ ವಿರೋಧದ ನಡುವೆ ಮನೆಯಿಂದ ಓಡಿಬಂದು ಮದುವೆಯಾಗಿದ್ದ ಯುವ ಪ್ರೇಮಿಗಳು ರಕ್ಷಣೆಗಾಗಿ ಮೊರೆಯಿಟ್ಟಿದ್ದಾರೆ. ನಮಗೆ ಹುಡುಗಿ ಮನೆಯವರಿಂದ ಬೆದರಿಕೆ ಬರುತ್ತಿದ್ದು, ಆತ್ಮಹತ್ಯೆ ಗೆ ಮುಂದಾಗಿದ್ದೆವು.

  

 

ಆದ್ರೆ ಸಾಯಲು ಮನಸ್ಸಿಲ್ಲ ನಮಗೆ ರಕ್ಷಣೆ ನೀಡಿ ಎಂದು ನವಜೋಡಿಗಳು ಸೆಲ್ಪಿ ವೀಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿ ಬಿಟ್ಟಿದ್ದಾರೆ. ಬಾಗಲಕೋಟೆ ಜಿಲ್ಲೆಯ ಜಮಖಂಡಿ ಯ ರಶ್ಮಿ ಹೂಗಾರ ಮತ್ತು ಚಿಕ್ಕೋಡಿ ತಾಲೂಕಿನ ಕಬ್ಬೂರ ಗ್ರಾಮದ ಮಂಜುನಾಥ ಗುರವ್ ಹಲವು ವರ್ಷದಿಂದ ಲವ್ ಮಾಡುತ್ತಿದ್ದರು.

 

 

ಹುಡುಗಿ ಮನೆಯವರು ಪ್ರೀತಿಗೆ ಅಡ್ಡಿಯಾಗಿದ್ದರಿಂದ ಹುಬ್ಬಳ್ಳಿಯ ಬೂದನಗುಡ್ಡದ ದೇವಾಲಯದಲ್ಲಿ ಮದುವೆಯಾಗಿದ್ದರು. ಹೀಗಾಗಿ ನಮಗೆ ರಕ್ಷಣೆ ಬೇಕು ಅಂತಾ ಸಾಮಾಜಿಕ ಜಾಲತಾಣದಲ್ಲಿ ಬೇಡಿಕೆಕೊಂಡಿದ್ದಾರೆ. ಈ ವಿಡಿಯೋ ಸದ್ಯ ವೈರಲ್ ಆಗಿದೆ..