ಖ್ಯಾತ ವಯೋಲಿನ ವಾದಕ ಬಾಲಭಾಸ್ಕರ್ ಇನ್ನಿಲ್ಲ- ಚಿಕಿತ್ಸೆ ಫಲಿಸದೇ ಆಸ್ಪತ್ರೆಯಲ್ಲಿ ನಿಧನ!

 

ad


ರಸ್ತೆ ಅಪಘಾತದಲ್ಲಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಲೆಯಾಳಿ ಸಂಗೀತ ನಿರ್ದೇಶಕ ಹಾಗೂ ಖ್ಯಾತ ವಯೋಲಿನ್ ವಾದಕ ಬಾಲಭಾಸ್ಕರ್ ನಿನ್ನೆ ಬೆಳಗಿನ ಜಾವ ನಿಧನರಾಗಿದ್ದಾರೆ. ಸೆಪ್ಟಂಬರ್ 25 ರಂದು ತಿರುವನಂತಪುರದಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಬಾಲಭಾಸ್ಕರ್​​ ಕುಟುಂಬ ಗಾಯಗೊಂಡಿತ್ತು.

 

 

ಬಾಲಭಾಸ್ಕರ್ ಪ್ರಯಾಣಿಸುತ್ತಿದ್ದ ಕಾರು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಪಕ್ಕದ ಮರಕ್ಕೆ ಡಿಕ್ಕಿಯಾಗಿತ್ತು. ಈ ಅಪಘಾತದಲ್ಲಿ ಅವರ 2 ವರ್ಷದ ಪುತ್ರಿ ತೇಜಸ್ವಿನಿ ಸ್ಥಳದಲ್ಲೇ ಸಾವನ್ನಪ್ಪಿದ್ದರು. ಇನ್ನು ಅವರ ಪತ್ನಿ ಲಕ್ಷ್ಮೀ, ಚಾಲಕ ಅರ್ಜುನ ಗೆ ಗಾಯವಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಬಾಲಭಾಸ್ಕರ್ ಅವರ ತಲೆಗೆ ಹೆಚ್ಚು ಪೆಟ್ಟಾಗಿದ್ದರಿಂದ ಅವರು, ಚಿಕಿತ್ಸೆ ಫಲಿಸದೇ ನಿನ್ನೆ ನಿಧನರಾಗಿದ್ದಾರೆ. ತಮ್ಮ 17 ನೇ ವಯಸ್ಸಿಗೆ ಚಿತ್ರವೊಂದಕ್ಕೆ ಸಂಗೀತ ನಿರ್ದೇಶನ ಮಾಡಿ ಹೆಸರುವಾಸಿಯಾಗಿದ್ದ ಬಾಲಭಾಸ್ಕರ್, 2000 ನೇ ಇಸ್ವಿಯಲ್ಲಿ ತಮ್ಮ ಬಹುಕಾಲದ ಗೆಳತಿ ಲಕ್ಷ್ಮೀಯನ್ನು ವರಿಸಿದ್ದರು. ಅವರಿಗೆ 2016 ರಲ್ಲಿ ತೇಜಸ್ವಿಜಿನಿ ಎಂಬ 2 ವರ್ಷದ ಹೆಣ್ಣುಮಗು ಜನಿಸಿತ್ತು.