ರಾಜ್ಯದ ರೋಗಿಗಳಿಗೆ ಕಾದಿದೆ ಶಾಕ್​! ಜೂನ್ 17 ರಂದು ಖಾಸಗಿ ವೈದ್ಯರ ಮುಷ್ಕರ!!

ನೀವು ಯಾವುದಾದ್ರೂ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದೀರಾ? ಸೋಮವಾರ ಆಸ್ಪತ್ರೆಗೆ ಹೋಗೋ ಪ್ಲ್ಯಾನ್​ ನಲ್ಲಿ ಹಾಗಿದ್ದರೇ ನಿಮ್ಮ ನಿರ್ಧಾರ ಬದಲಾಯಿಸಿಕೊಳ್ಳಿ. ಯಾಕೆಂದ್ರೆ ಸೋಮವಾರ ರಾಜ್ಯದಾದ್ಯಂತ ಆಸ್ಪತ್ರೆಗಳು ಸ್ತಬ್ಧವಾಗಲಿದ್ದು ವೈದ್ಯರು ಸ್ಟೆಥೋಸ್ಕೂಪ್​ ಕೆಳಗಿಟ್ಟು ಮುಷ್ಕರಕ್ಕೆ ಮುಂದಾಗಿದ್ದಾರೆ.

ad


ಕೋಲ್ಕತ್ತಾದಲ್ಲಿ ವೈದ್ಯರ ಮೇಲೆ ನಡೆದ ಹಲ್ಲೆಗೆ ದೇಶಾದ್ಯಂತ ವೈದ್ಯರು ಆಕ್ರೋಶ ವ್ಯಕ್ತಪಡಿಸಿದ್ದು, ಇದೇ ತಿಂಗಳ 17 ರಂದು ದೇಶವ್ಯಾಪಿ ಖಾಸಗಿ ಆಸ್ಪತ್ರೆ ವೈದ್ಯರು ಮುಷ್ಕರಕ್ಕೆ ನಿರ್ಧರಿಸಿದ್ದಾರೆ. ಈ ಮುಷ್ಕರಕ್ಕೆ ಕರ್ನಾಟಕದಲ್ಲೂ ಬೆಂಬಲ ವ್ಯಕ್ತವಾಗಿದ್ದು, ಐಎಂಎ ಮುಷ್ಕರಕ್ಕೆ ನಿರ್ಧರಿಸಿದೆ.


ಹೀಗಾಗಿ ಅಂದು ರಾಜ್ಯದ ಖಾಸಗಿ ಆಸ್ಪತ್ರೆಗಳ ಬಾಗಿಲು ಮುಚ್ಚಲಿದ್ದು, ಸೋಮವಾರ ಬೆಳಗ್ಗೆ 6 ರಿಂದ ಮಂಗಳವಾರ 6 ರವರೆಗೆ ಸೇವೆ ಸ್ಥಗಿತಗೊಳ್ಳಲಿದೆ. ಆದರೆ ಓಪಿಡಿ ಸೇವೆ ಸ್ಥಗಿತವಾಗಲಿದ್ದು, ತುರ್ತು ಸೇವೆಗೆ ವೈದ್ಯರು ಲಭ್ಯವಾಗಲಿದ್ದಾರೆ.


ಬಂಗಾಳದಲ್ಲಿ ವೈದ್ಯರ ಸ್ಟ್ರೈಕ್ ಮುಂದುವರೆದಿದ್ದು, ಸಿಎಂ ಮಮತಾ ಬ್ಯಾನರ್ಜಿ ಆದೇಶಕ್ಕೂ ವೈದ್ಯರು ಕ್ಯಾರೇ ಎಂದಿಲ್ಲ. ಅಲ್ಲದೇ ಅಂದಾಜು 500 ಕ್ಕೂ ಹೆಚ್ಚು ವೈದ್ಯರು ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ.