ಲೋಕಸಭೆ ಚುನಾವಣೆಯಲ್ಲಿ ಗೌಡ್ರ ಕುಟುಂಬದ ಇನ್ನೊಂದು ಕುಡಿ ಕಣಕ್ಕೆ- ಇಷ್ಟಕ್ಕೂ ಪ್ರಜ್ವಲ್ ರೇವಣ್ಣ ಎಲ್ಲಿಂದ ಸ್ಪರ್ಧಿಸ್ತಾರೆ ಗೊತ್ತಾ?!

 

ತಮ್ಮ ಬುದ್ಧಿಶಕ್ತಿಯಿಂದಲೇ ರಾಜ್ಯದಲ್ಲಿ ಜೆಡಿಎಸ್​ ಅಧಿಕಾರಕ್ಕೆ ಬರುವಂತೆ ಮಾಡಿದ ಮಾಜಿ ಪ್ರಧಾನಿ ದೇವೆಗೌಡರು, ಇದೀಗ ಲೋಕಸಭೆ ಚುನಾವಣೆಗೆ ರಣತಂತ್ರ ರೂಪಿಸಲು ಸಿದ್ಧವಾಗಿದ್ದಾರೆ. ಕುಟುಂಬ ರಾಜಕಾರಣದ ಆರೋಪದ ನಡುವೆಯೂ ಲೋಕಸಭೆ ಚುನಾವಣೆಗೆ ತಮ್ಮ ಕುಟುಂಬದ ಇನ್ನೊಂದು ಕುಡಿಯನ್ನು ಕಣಕ್ಕಿಳಿಸಲು ಸಜ್ಜಾಗಿರುವ ಗೌಡರು, ಇವತ್ತು ಅಧಿಕೃತವಾಗಿ ತಮ್ಮ ಮೊಮ್ಮಗ ಪ್ರಜ್ವಲ್ ರೇವಣ್ಣ ಚುನಾವಣೆಗೆ ಸ್ಪರ್ಧಿಸುತ್ತಾರೆ ಎಂಬ ಮಾಹಿತಿ ಬಿಟ್ಟುಕೊಟ್ಟಿದ್ದಾರೆ. ಇದು ಈಗ ಹಲವು ರಾಜಕೀಯ ಲೆಕ್ಕಾಚಾರಗಳಿಗೆ ಕಾರಣವಾಗಿದೆ.
ಶ್ರಾವಣ ಸೋಮವಾರದ ಹಿನ್ನೆಲೆಯಲ್ಲಿ ಕುಲದೇವರಾದ ಹೊಳೆನರಸೀಪುರ ತಾಲೂಕಿನ ಹರದಹನಳ್ಳಿಯ ಈಶ್ವರ್ ದೇವಾಲಯದಲ್ಲಿ ಪೂಜೆ ಸಲ್ಲಿಸಿದ ದೇವೆಗೌಡರು ಮಾಧ್ಯಮದ ಜೊತೆ ಮಾತನಾಡಿ ಈ ಮಾಹಿತಿ ನೀಡಿದ್ದಾರೆ. 2019 ರ ಚುನಾವಣೆಯಲ್ಲಿ ಪ್ರಜ್ವಲ್ ರೇವಣ್ಣ ಸ್ಪರ್ಧೆ ಖಚಿತ ಎಂದಿರುವ ದೇವೆಗೌಡರು ಯಾವ ಕ್ಷೇತ್ರದಿಂದ ಕಣಕ್ಕಿಳಿತಾರೇ ಎಂಬುದನ್ನು ನಿರ್ಧರಿಸಿಲ್ಲ ಎಂದಿದ್ದಾರೆ.

ಇನ್ನು ಅಜ್ಜನ ಮಾತಿನಿಂದ ಪ್ರಜ್ವಲ್ ರೇವಣ್ಣ ಖುಷಿಯಾಗಿದ್ದರೇ ರೇವಣ್ಣ ದಂಪತಿಗಳು ಕೂಡ ಸಂಭ್ರಮದಲ್ಲಿದ್ದಾರ. ಮೂಲಗಳ ಮಾಹಿತಿ ಪ್ರಕಾರ ದೇವೆಗೌಡರು ತಮ್ಮ ತವರಾದ ಹಾಸನವನ್ನು ಪ್ರಜ್ವಲ್ ರೇವಣ್ಣಗೆ ಬಿಟ್ಟುಕೊಡುವ ಸಾಧ್ಯತೆ ಇದ್ದು, ಸ್ವತಃ ದೇವೆಗೌಡರು ಜೆಡಿಎಸ್​​ನ ಗಟ್ಟಿನೆಲವಾಗಿರುವ ಮಂಡ್ಯದಿಂದ ಕಣಕ್ಕಿಳಿತಾರೇ ಎನ್ನಲಾಗುತ್ತಿದೆ.
ಒಟ್ಟಿನಲ್ಲಿ ವಿಧಾನಸಭಾ ಚುನಾವಣೆ ವೇಳೆ, ಅವಕಾಶ ವಂಚಿತರಾಗಿ ಮುನಿಸಿಕೊಂಡಿದ್ದ ಪ್ರಜ್ವಲ್ ರೇವಣ್ಣ ಹಾಗೂ ಅವರ ಬೆಂಬಲಿಗರಿಗೆ ಗೌಡರ ಈ ಹೇಳಿಕೆ ಸಮಾಧನಾ ತಂದಿರೋದಂತು ಸುಳ್ಳಲ್ಲ. ಇನ್ನು ಲೋಕಸಭೆ ಚುನಾವಣೆಯಲ್ಲಿ ಪ್ರಜ್ವಲ್​ ಯಾವ ಕ್ಷೇತ್ರದಲ್ಲಿ ಕಣಕ್ಕಿಳಿತಾರೇ, ಕಾಂಗ್ರೆಸ್​​ ಸಪೋರ್ಟ್ ಮಾಡುತ್ತಾ? ಮುಂದಿನ ಸಾಧ್ಯತೆಗಳು ಏನು ಎಂಬುದು ಇದೀಗ ಚರ್ಚೆಗೆ ಗ್ರಾಸವಾಗಿದೆ.