ಪ್ರಧಾನಿ ನರೇಂದ್ರ ಮೋದಿಗೆ ಶುಭಕೋರಿದ ಪಾಕ್​ ಪ್ರಧಾನಿ! ಇಮ್ರಾನ್​ ಖಾನ್​ಗೆ ಮೋದಿ ಏನಂದ್ರು ಗೊತ್ತಾ?!

ಲೋಕಸಭೆ ಚುನಾವಣೆಯಲ್ಲಿ ಮತ್ತೊಮ್ಮೆ ಮೋದಿ ಸ್ಲೋಗನ್​​ ಜೊತೆ ಕಣಕ್ಕಿಳಿದಿದ್ದ ಬಿಜೆಪಿಗರಿಗೆ ದೇಶದ ಜನರು ಅಭೂತಪೂರ್ವ ಬೆಂಬಲ ನೀಡಿದ್ದು, ಪ್ರಧಾನಿ ಮೋದಿ ಮತ್ತೊಮ್ಮೆ ಅಧಿಕಾರದ ಗದ್ದುಗೆ ಏರಲಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಪಾಕಿಸ್ತಾನದ ಪ್ರಧಾನಿ ಇಮ್ರಾನ್​ ಖಾನ್​ ಶುಭಕೋರಿದ್ದಾರೆ.


ಇಮ್ರಾನ್​ ಖಾನ್​ ಟ್ವೀಟ್ ಮೂಲಕ ಮತ್ತು ನೇರವಾಗಿ ಕರೆ ಮಾಡಿ ಮಾತನಾಡುವ ಮೂಲಕ ನರೇಂದ್ರ ಮೋದಿಯವರಿಗೆ ಶುಭಕೋರಿದ್ದಾರೆ ಎನ್ನಲಾಗಿದೆ. ಭಾರತದಲ್ಲಿ ನಡೆದ ಲೋಕಸಭೆಯಲ್ಲಿ ಬಿಜೆಪಿ ಗೆಲುವು ಸಾಧಿಸಿರುವುದಕ್ಕೆ ಮೋದಿಯವರನ್ನು ಅಭಿನಂದಿಸಿದ ಇ್ರಮಾನ್ ಖಾನ್, ಎರಡೂ ರಾಷ್ಟ್ರಗಳು ಜನರ ಏಳಿಗೆಗಾಗಿ ಒಟ್ಟಿಗೆ ಕೆಲಸ ಮಾಡುವ ಆಶಯವನ್ನು ವ್ಯಕ್ತಪಡಿಸಿದ್ದಾರೆ.

ಅಲ್ಲದೇ ಮೋದಿಯವರೊಂದಿಗೆ ಮಾತನಾಡಿದ ಇಮ್ರಾನ್ ಖಾನ್ ಅವರಿಗೆ, ಭಾರತ ಉಪಖಂಡದಲ್ಲಿ ಶಾಂತಿ ನೆಲೆಸಬೇಕಿದ್ದರೆ, ಪಾಕಿಸ್ತಾನ ಭಯೋತ್ಪಾದಕರನ್ನು ಮಟ್ಟ ಹಾಕಬೇಕು. ಭಯೋತ್ಪಾದನೆಯ ಪಿಡುಗನ್ನು ಕೊನೆಗಾಣಿಸಬೇಕು. ಬರಿ ಮಾತಿನಿಂದ ಮಾತ್ರವಲ್ಲ ಕೆಲಸದಿಂದಲೂ ಪಾಕ್​ ಈ ಉದ್ದೇಶವನ್ನು ಈಡೇರಿಸಬೇಕೆಂದು ಪ್ರಧಾನಿ ಮೋದಿ ನೆನಪಿಸಿದ್ದಾರೆ ಎನ್ನಲಾಗಿದೆ.