ಈ ಪ್ರೇಮಿಗಳಿಗೆ ಹೆತ್ತವರೇ ವಿಲನ್​​- ಪೊಲೀಸರ ಮೊರೆ ಹೋದ ಶಾಸಕರ ಆಪ್ತನ ಮಗಳು!

 

ad


ಪ್ರೀತಿಸಿ ಮದುವೆಯಾದ ಪ್ರೇಮಿಗಳು ಶಾಸಕರು ಹಾಗೂ ಹೆತ್ತವರ ಕೋಪದಿಂದ ಜೀವಭಯದಲ್ಲೇ ಬದುಕುವ ಸ್ಥಿತಿ ಎದುರಾಗಿದ್ದು, ಇದೀಗ ಆರಕ್ಷಕರ ಮೊರೆ ಹೋಗಿದ್ದಾರೆ. ಯೋಗಿತಾ ಹಾಗೂ ವಿನಾಯಕ್ ದಂಪತಿಯೇ ಹೀಗೆ ತೊಂದರೆಗೊಳಗಾದ ಜೋಡಿ.
ಯೋಗಿತಾ ಹಾಗೂ ವಿನಾಯಕ್ 6 ವರ್ಷಗಳಿಂದ ಪ್ರೀತಿಸುತ್ತಿದ್ದರು ಎನ್ನಲಾಗಿದೆ. ಆದರೇ ಯೋಗಿತಾ ಮನೆಯಲ್ಲಿ ಒಪ್ಪಿರಲಿಲ್ಲ. ಹೀಗಾಗಿ ಇಬ್ಬರೂ ಧಾರವಾಡ ಸಬ್​ ರಿಜಿಸ್ಟಾರ್ ಕಚೇರಿಯಲ್ಲಿ ಮದುವೆಯಾಗಿದ್ದಾರೆ. ಆದರೇ ಯೋಗಿತಾ ತಂದೆ ಕಮಲಾಕಾಂತ್ ನಾಯಕ್​ ಕಾಂಗ್ರೆಸ್​ ಎಮ್​ಎಲ್​​ಎ ಶಿವರಾಂ ಹೆಬ್ಬಾರ್​ ಆಪ್ತ ಸಹಾಯಕರಾಗಿ ಕೆಲಸ ಮಾಡುತ್ತಿದ್ದಾರೆ. ಹೀಗಾಗಿ ಶಾಸಕರ ಪ್ರಭಾವ ಬಳಸಿ ಯೋಗಿತಾ ಮತ್ತು ವಿನಾಯಕ್​ ಗೆ ಕಾಟ ಕೊಡುತ್ತಿದ್ದಾರೆ ಎನ್ನಲಾಗಿದೆ.

sವಿನಾಕಾರಣ ವಿನಾಯಕ್ ಮೇಲೆ ಅಪಹರಣದ ಪ್ರಕರಣ ದಾಖಲಿಸಿ, ವಿನಾಯಕ ಕುಟುಂಬದವರಿಗೂ ಕಿರುಕುಳ ನೀಡುತ್ತಿದ್ದಾರೆ. ಹೀಗಾಗಿ ಈ ಜೋಡಿ ಕಳೆದ ಕೆಲ ದಿನಗಳಿಂದ ಕಂಡ ಕಂಡಲ್ಲಿ ಅಲೆಯುತ್ತಿದ್ದು, ಇದೀಗ ಅಂಚೆ ಮೂಲಕ ಉತ್ತರ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಯೋಗಿತಾ ಹಾಗೂ ವಿನಾಯಕ್ ರಕ್ಷಣೆ ಕೋರಿದ್ದು, ನಮಗೆ ಹಾಗೂ ನಮ್ಮ ಕುಟುಂಬಕ್ಕೆ ಏನೇ ತೊಂದರೆಯಾದರೂ ಯೋಗಿತಾ ಕುಟುಂಬದವರೇ ಕಾರಣ ಎಂದು ಆರೋಪಿಸಿದ್ದಾರೆ. ಶಾಸಕರ ಪ್ರಭಾವದಿಂದಲೇ ನಮ್ಮ ಬದುಕು ಆತಂಕದಲ್ಲಿದೆ ಅಂತಿರೋ ಈ ಜೋಡಿಗೆ ಪೊಲೀಸರೇ ನೆರವು ನೀಡಬೇಕಿದೆ.