ಎಮ್ಎಲ್ಎ ಎಲೆಕ್ಷನ್ನಲ್ಲಿ ನಿಮಗೆ ಸಪೋಟ್೯ ಮಾಡಿದ್ದೇನೆ..ನೀವು ಹೇಳಿದ್ದ ಹಾಗೇ ಕೇಳಿದ್ದೇನೆ..ಅದಕ್ಕಾಗಿ ನೀವು ನನಗೆ ಹದಿನೈದು ಲಕ್ಷ ರೂಪಾಯಿ ಕೊಡಿ.. ಇಂತಹದೊಂದು ಕಿರುಕುಳ ಕೈ ಶಾಸಕನಿಗೆ ಕಾಡಲಾರಂಭಿಸಿದೆ…ಆ ಶಾಸಕ ಬೇರ್ಯಾರು ಅಲ್ಲ..ಕಲಬುರಗಿ ಜಿಲ್ಲೆ ಜೇವರ್ಗಿ ಕಾಂಗ್ರೆಸ್ ಶಾಸಕ ಡಾ.ಅಜಯ್ಸಿಂಗ್..ಹೌದು ಕಳೆದ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಶಾಸಕ ಅಜಯ್ಸಿಂಗ್, ಆಂದೋಲ ಗ್ರಾಮದ ಶಿವಶರಣರೆಡ್ಡಿ ಎಂಬಾತನಿಗೆ ಭೇಟಿಯಾಗಿ ನೀನು ಚುನಾವಣೆಯಲ್ಲಿ ನನಗೆ ಬೆಂಬಲಿಸು, ನಿನಗೆ ದುಡ್ಡು ಕೊಡ್ತಿನಿ ಅಂತಾ ಹೇಳಿದ್ರಂತೆ.


ಅದರಂತೆ ಆ ವ್ಯಕ್ತಿ ಚುನಾವಣೆಯಲ್ಲಿ ತನ್ನ ತನು ಮನ ಧನವನೆಲ್ಲ ಧಾರೆ ಎರೆದು ಅಜಯ್ಸಿಂಗ್ ಗೆಲುವಿಗಾಗಿ ಶ್ರಮಿಸಿದ್ದ.. ಇದೀಗ ಚುನಾವಣೆಯಲ್ಲಿ ಅಜಯ್ಸಿಂಗ್ ಗೆಲುವು ಸಾಧಿಸಿ ವಿಧಾನಸಭೆ ಪ್ರವೇಶಿಸಿದ್ದು ಆಯಿತು.. ಆದರೆ ಚುನಾವಣೆ ಸಂದರ್ಭದಲ್ಲಿ ಬೆಂಬಲಿಸಿದ್ದ ಫಲವಾಗಿ, ನನಗೆ ಹದಿನೈದು ಲಕ್ಷ ರೂಪಾಯಿ ಕೊಡಿ ಅಂತ ಶಾಸಕರಿಗೆ, ಶಿವಶರಣರೆಡ್ಡಿ ದಿನಿನಿತ್ಯ ಫೋನ್ ಮಾಡಿ ದುಂಬಾಲು ಬಿದ್ದಿರುವುದರ ಜೊತೆಗೆ, ಮೆಸೆಜ್ ಮೇಲೆ ಮೇಸೆಜ್ ಮಾಡ್ತಾ ಕಿರುಕುಳ ಕೊಡಲು ಶುರು ಹಚ್ಕೊಂಡಿದ್ದಾನೆ.
ಸರ್ ನಿಮಗೊಸ್ಕರ ನಾನು ಚುನಾವಣೆಯಲ್ಲಿ ನನ್ನ ಹಣ ಖರ್ಚು ಮಾಡಿದ್ದೇನೆ.. ನೀವು ಹದಿನೈದು ಲಕ್ಷ ರೂ ಹಣ ಕೊಡಲೇಬೇಕು ಅಂತಾ ನಿತ್ಯ ಕಾಡಲಾಂಭಿಸಿದ್ದಾನೆ.. ಆತನ ಕಿರುಕುಳಕ್ಕೆ ಬೇಸತ್ತ ಶಾಸಕ ಡಾ ಅಜಯ್ಸಿಂಗ್, ಜೇವರ್ಗಿ ಸರ್ಕಲ್ ಇನ್ಸೆಪೆಕ್ಟರ್ಗೆ ಮೌಖಿಕ ದೂರನ್ನ ನೀಡಿದ್ದಾರೆ.. ಅದೆನೆ ಇರಲಿ ಇಬ್ಬರ ನಡುವಿನ ಹಣದ ಸಮಸ್ಯೆಯನ್ನ ಅದು ಹೇಗೆ ಬಗೆಹರಿಯುತ್ತೊ ಕಾದು ನೋಡಬೇಕು.. ಸದ್ಯ ಶಾಸಕ ಡಾ ಅಜಯ್ಸಿಂಗ್ ಹಾಗೂ ಶಿವಶರಣರೆಡ್ಡಿ ಮಧ್ಯಗಿನ ಆಡಿಯೋ ಸಂಭಾಷಣೆ ಹಾಗೂ ಮೆಸೆಜ್ ಚಾಟ್ ಬಿ ಟಿವಿ ಗೆ ಲಭ್ಯವಾಗಿದೆ..