ಸುಪ್ರೀಂನಲ್ಲಿ ಅತೃಪ್ತ ಶಾಸಕರ ಅರ್ಜಿವಿಚಾರಣೆ! ರೆಬೆಲ್​ಗಳಿಗೆ ರಿಲೀಫ್​! ಸರ್ಕಾರಕ್ಕೆ ಆಕ್ಸಿಜನ್​! ಮಂಗಳವಾರಕ್ಕೆ ವಿಚಾರಣೆ ಮುಂದೂಡಿಕೆ!!

ಮಹತ್ವದ ಬೆಳವಣಿಗೆಯಲ್ಲಿ ಅತೃಪ್ತ ಶಾಸಕರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್​​​ ಮಂಗಳವಾರದವರೆಗೂ ಯಥಾಸ್ಥಿತಿ ಕಾಪಾಡುವಂತೆ ಆದೇಶಿಸಿ ವಿಚಾರಣೆಯನ್ನು ಮಂಗಳವಾರಕ್ಕೆ ಮುಂದೂಡಿದ್ದು,ಇದರಿಂದ ಅತೃಪ್ತರು ಅನರ್ಹತೆಯ ಭೀತಿಯಿಂದ ಹಾಗೂ ಸರ್ಕಾರ ಪತನದ ಭೀತಿಯಿಂದ ಬಚಾವಾಗಿದೆ.

ad


ಶುಕ್ರವಾರ ಅತೃಪ್ತ ಶಾಸಕರು ಹಾಗೂ ಕರ್ನಾಟಕ ವಿಧಾನಸಭೆ ಸ್ಪೀಕರ್ ಸಲ್ಲಿಸಿದ್ದ ವಿಚಾರಣೆ ಕೈಗೊಂಡ ಸುಪ್ರೀಂ ಕೋರ್ಟ್​​ನ ಮುಖ್ಯನ್ಯಾಯಮೂರ್ತಿ ರಂಜನ್ ಗೊಗೊಯ್​ , ವಿಚಾರಣೆಯನ್ನು 16 ಕ್ಕೆ ಮುಂದೂಡಿದ್ದು, ಯಥಾಸ್ಥಿತಿ ಕಾಪಾಡುವಂತೆ ಆದೇಶ ನೀಡಿದ್ದಾರೆ.

ಮಂಗಳವಾರದವರೆಗೆ ಶಾಸಕರ ರಾಜೀನಾಮೆ ವಿಚಾರದಲ್ಲಿ ಸ್ಪೀಕರ್ ಯಾವುದೇ ತೀರ್ಮಾನ ಕೈಗೊಳ್ಳುವಂತಿಲ್ಲ. ಮಂಗಳವಾರದವರೆಗೂ ಶಾಸಕರು ಶಾಸಕರೇ ಎಂದು ನ್ಯಾಯಾಲಯ ಆದೇಶಿಸಿದೆ. ಅಲ್ಲದೇ ಅನರ್ಹತೆ ವಿಚಾರದಲ್ಲೂ ಯಾವುದೇ ತೀರ್ಮಾನಕೈಗೊಳ್ಳದಿರಲು ಸುಪ್ರೀಂ ಸೂಚಿಸಿದೆ.

ಇದರಿಂದ ಅತಂತ್ರ ಸ್ಥಿತಿಯಲ್ಲಿದ್ದ ಸರ್ಕಾರ ಹಾಗೂ ಅನರ್ಹತೆಯ ಭೀತಿಯಲ್ಲಿದ್ದ ಶಾಸಕರಿಗೆ ತಾತ್ಕಾಲಿಕ ರಿಲೀಫ್ ಸಿಕ್ಕಂತಾಗಿದ್ದು, ಮಂಗಳವಾರದಂದು ವಿಚಾರಣೆ ಮುಂದುವರೆಯಲಿದ್ದು, ಅಂದು ತೀರ್ಮಾನ ಹೊರಬೀಳುವ ಸಾಧ್ಯತೆ ಇದೆ.

ಮಂಗಳವಾರದವರೆಗೆ ಸರ್ಕಾರ ಸೇಫ್​..ಸೇಫ್​​​..ಸೇಫ್

ಮಂಗಳವಾರದವರೆಗೆ ಸರ್ಕಾರ ಸೇಫ್​..ಸೇಫ್​​​..ಸೇಫ್

BtvNews ಅವರಿಂದ ಈ ದಿನದಂದು ಪೋಸ್ಟ್ ಮಾಡಲಾಗಿದೆ ಶುಕ್ರವಾರ, ಜುಲೈ 12, 2019