ಪೊಲೀಸನಿಂದಲೇ ಹೆಂಡತಿ ಕೊಲೆಗೆ ರೌಡಿಗಳಿಗೆ ಸುಫಾರಿ- ನನ್ನನ್ನು ರಕ್ಷಿಸಿ ಅಂತ ಆರಕ್ಷಕರ ಮೊರೆ ಹೋದ ಪತ್ನಿ!

 

ಪೊಲೀಸರಾದವರು ಕಳ್ಳರು, ರೌಡಿಗಳನ್ನು ಮಟ್ಟಹಾಕಬೇಕು. ಆದ್ರೆ ಅದೇ ಪೊಲೀಸ್ ಹುದ್ದೆಯಲ್ಲಿದ್ದುಕೊಂಡು ರೌಡಿಗಳಿಗೆ ತನ್ನ ಹೆಂಡ್ತಿ ಕೊಲ್ಲಲು ಸುಫಾರಿ ಕೊಟ್ಟರೆ ಹೇಗೆ? ಇಂತಹುದೇ ವಿಲಕ್ಷಣ ಘಟನೆಯೊಂದು ಶಿವಮೊಗ್ಗ ಜಿಲ್ಲೆಯ ಭದ್ರಾವತಿಯಲ್ಲಿ ನಡೆದಿದೆ. ಇದೀಗ ನನ್ನನ್ನು ರಕ್ಷಿಸಿ ಅಂತ ಆರಕ್ಷಕನ ಹೆಂಡತಿಯೇ ಪೊಲೀಸರ ಮೊರೆ ಹೋಗಿದ್ದಾರೆ.
ಶಿವಮೊಗ್ಗ ಜಿಲ್ಲೆ ಭದ್ರಾವತಿ ನ್ಯೂಟೌನ್​ ಪೊಲೀಸ್ ಠಾಣೆಯ ಹೆಡ್​ಕಾನ್ಸಟೇಬಲ್​ ರವೀಂದ್ರ ಗಿರಿ ಎಂಬಾತನ ವಿರುದ್ಧ ಇಂತಹದೊಂದು ಆರೋಪ ಕೇಳಿಬಂದಿದೆ. ರವೀಂದ್ರ ಗಿರಿ ಪತ್ನಿಯೇ ರವೀಂದ್ರ ಗಿರಿ ತನ್ನ ಹತ್ಯೆಗೆ ಸುಫಾರಿ ನೀಡಿದ್ದಾರೆ ಎಂದು ಆರೋಪಿಸಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.

ಭದ್ರಾವತಿಯಲ್ಲಿ ವಾಸವಾಗಿದ್ದ ರವಿಂದ್ರ ಅನೈತಿಕ ಸಂಬಂಧದ ಶಂಕೆ ಮೇಲೆ ಪತ್ನಿ ಹತ್ಯೆಗೆ ಸುಪಾರಿ ಕೊಟ್ಟಿದ್ದಾನೆ. ಮೂವರು ರೌಡಿಗಳಿಗೆ ಸುಪಾರಿ ಕೊಟ್ಟಿರುವ ವಿಷ್ಯ ಸ್ವತಃ ಪೊಲೀಸ್ ಕಾನ್ಸ್​​ಟೇಬಲ್ ಹೆಂಡ್ತಿಯೇ ದೂರು ಕೊಟ್ಟಾಗ ಬಯಲಿಗೆ ಬಂದಿದೆ. ಇದೀಗ ನ್ಯೂಟೌನ್​ ಪೊಲೀಸರು ತಮ್ಮದೇ ಠಾಣೆಯ ಹೆಡ್​ ಕಾನ್ಸಟೇಬಲ್​ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.