ಬೆತ್ತಲೆ ಮಾಡಿ ವ್ಯಕ್ತಿಯ ಮೇಲೆ ಹಲ್ಲೆ- ವೈರಲ್​ ಆಗಿರೋ ಈ ವಿಡಿಯೋದ ಅಸಲಿಯತ್ತೇನು ಗೊತ್ತಾ? !

ಸೋಷಿಯಲ್​ ಮೀಡಿಯಾದಲ್ಲಿ ಹರಿದಾಡುತ್ತಿರುವ ವ್ಯಕ್ತಿಯೊರ್ವನ ನಗ್ನ ವಿಡಿಯೋ ಪೊಲೀಸ್ ಇಲಾಖೆಯ ಮೇಲೆ ಅನುಮಾನ ಹುಟ್ಟಿಸಿದೆ. ಹೌದು ಬಹುತೇಕ ಸೋಷಿಯಲ್​ ಮೀಡಿಯಾದಲ್ಲಿ ದಿಲೀಪ್ ಎಂಬ ವ್ಯಕ್ತಿಯೊರ್ವನನ್ನು ನಗ್ನಗೊಳಿಸಿ ಹಲ್ಲೆ ಮಾಡುತ್ತಿರುವ ದೃಶ್ಯ ವೈರಲ್ ಆಗಿದ್ದು, ಜನರು ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆದರೇ ಇದೀಗ ಈ ವಿಡಿಯೋದ ಸತ್ಯಾಸತ್ಯತೆಯ ಮೇಲೂ ಅನುಮಾನ ಮೂಡಿದೆ.

ದಿಲೀಪ್ ಎನ್ನುವ ವ್ಯಕ್ತಿಯೊರ್ವನನ್ನು ಕಟ್ಟಿ ಹಾಕಿ ನಗ್ನಗೊಳಿಸಿ ಹಲ್ಲೆ ಮಾಡುತ್ತಿರುವ ವಿಡಿಯೋವೊಂದು ಪೊಲೀಸರ ದೌರ್ಜನ್ಯದ ಹೆಸರಿನಲ್ಲಿ ವೈರಲ್ ಆಗಿದೆ. ದಿಲೀಪ್ ಸಹೋದರ ಸ್ಕೋಪಿ ಎಂಬುವವನು ಇತ್ತೀಚಿಗೆ ಹತ್ಯೆಯಾಗಿದ್ದ. ದಿಲೀಪ ಅಣ್ಣ ಸಾವಿನ ಪ್ರತಿಕಾರಕ್ಕೆ ಸಿದ್ಧವಾಗಿದ್ದಾಗ ಮಾಹಿತಿ ಪಡೆದ ಪೊಲೀಸರು ದಾಳಿ ಮಾಡಿ ದಿಲೀಪನನ್ನು ಪೊಲೀಸ್ ಠಾಣೆಯಲ್ಲಿ ಕೂಡಿ ಹಾಕಿ ಹಲ್ಲೆ ಮಾಡಿದ್ದಾರೆ. ಥರ್ಡ್ ಡಿಗ್ರಿ ಟ್ರಿಟ್ಮೆಂಟ್​ ಮಾಡಿದ್ದಾರೆ ಎಂದು ಹೇಳಲಾಗಿದೆ.

 

ಆದರೇ ಈ ವಿಡಿಯೋ ನಿಜಕ್ಕೂ ಪೊಲೀಸ್ ಠಾಣೆಯಲ್ಲೇ ನಡೆದ ಘಟನೆಯದ್ದಾ ಎಂಬ ಅನುಮಾನ ಮೂಡಿಸಿದೆ. ಈ ವಿಡಿಯೋದಲ್ಲಿ ಎಲ್ಲಿಯೂ ಪೊಲೀಸ್ ಸಮವಸ್ತ್ರ ಕಾಣಿಸುತ್ತಿಲ್ಲ. ಹೀಗಾಗಿ ದಿಲೀಪ ವಿರೋಧಿಗಳೇ ಆತನನ್ನು ಕಿಡ್ನಾಪ್ ಮಾಡಿ ಹೀಗೆ ಕೂಡಿ ಹಾಕಿ ಹಿಂಸೆ ಮಾಡಿ ಪೊಲೀಸರ ಮೇಲೆ ಆರೋಪ ಬರುವಂತೆ ಮಾಡಿರಬಹುದೆಂಬ ಶಂಕೆ ಕೂಡ ವ್ಯಕ್ತವಾಗಿದೆ.
ಆದರೇ ಈ ದೌರ್ಜನ್ಯದ ವಿಡಿಯೋ ಇದೀಗ ಸಖತ್ ವೈರಲ್​ ಆಗಿದ್ದು, ತಮ್ಮ ಮಗನ ಮೇಲಾದ ದೌರ್ಜನ್ಯಕ್ಕೆ ನ್ಯಾಯಕೋರಿ ದಿಲೀಪ ಪೋಷಕರು ಮಾನವ ಹಕ್ಕು ಆಯೋಗದ ಮೊರೆ ಹೋಗಲು ನಿರ್ಧರಿಸಿದ್ದಾರೆ.