ನಾನು ಕಂಪ್ಲೆಂಟ್​ ಕೊಟ್ರೆ ಪೊಲೀಸರು ತಗೊಳ್ಳೋಲ್ಲ- ಕಮೀಷನರ ಕಚೇರಿಯಲ್ಲಿ ಹುಚ್ಚವೆಂಕಟ್ ಅಳಲು!

ನಿನ್ನೆಯಷ್ಟೇ ಬೇಕರಿಯೊಂದರ ಬಳಿ ಟೀ ಕುಡಿಯಲು ಬಂದು ಹಲ್ಲೆಗೆ ಯತ್ನಿಸಿ ಸುದ್ದಿಯಾಗಿದ್ದ ಹುಚ್ಚಾ ವೆಂಕಟ್ ಇವತ್ತು ಪೊಲೀಸರ ಮೇಲೆಯೇ ತಿರುಗಿ ಬಿದ್ದಿದ್ದಾನೆ. ಯಾವ ಪೊಲೀಸ್ ಸ್ಟೇಶನ್​ನಲ್ಲೂ ನನ್ನ ಕಂಪ್ಲೆಂಟ್​ ತಗೊಳ್ಳಲ್ಲ ಎಂದು ಆರೋಪಿಸಿದ ಹುಚ್ಚಾವೆಂಕಟ ನೇರವಾಗಿ ಕಮೀಷನರ ಕಚೇರಿಗೆ ಬಂದು ಮತ್ತೊಂದು ಹೈಡ್ರಾಮಾ ಮಾಡಿದ್ರು.

 ನಿನ್ನೆ ಬ್ಯಾಡರಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಬಾರ್​ವೊಂದರಲ್ಲಿ ಕಂಠಪೂರ್ತಿ ಕುಡಿದ ಹುಚ್ಚಾ ವೆಂಕಟ್ ಅಲ್ಲೇ ಪಕ್ಕದಲ್ಲಿದ್ದ ಬೇಕರಿ ಹುಡುಗರ ಜೊತೆ ಕಿರಿಕ್​ ಮಾಡಿಕೊಂಡು ಹಲ್ಲೆಗೆ ಮುಂಧಾಗಿದ್ದರು. ತಕ್ಷಣ ಸ್ಥಳಕ್ಕೆ ಬಂದ ಹೊಯ್ಸಳ ಹುಚ್ಚ ವೆಂಕಟ್ ಹಾಗೂ ಆತನಿಂದ ಹಲ್ಲೆಗೊಳಗಾದ ಯುವಕನನ್ನು ಪೊಲೀಸ್ ಠಾಣೆಗೆ ಕರೆದೊಯ್ದಿದ್ದರು. ಆದರೇ ಹುಚ್ಚ ವೆಂಕಟ್ ಬಳಿ ಹೊಡೆತ ತಿಂದ ಹುಡುಗ ಕಂಪ್ಲೆಂಟ್ ಕೊಡೋಕೆ ಒಪ್ಪಿರಲಿಲ್ಲ. ಹೀಗಾಗಿ ಪೊಲೀಸರು ಹುಚ್ಚ ವೆಂಕಟಗೆ ಎಚ್ಚರಿಕೆ ಕಳುಹಿಸಿದ್ದಾರೆ.

 

ಆದರೇ ಪೊಲೀಸ್ ಠಾಣೆಯಿಂದ ಹೊರಬಂದ ಹುಚ್ಚ ವೆಂಕಟ್ ಉಲ್ಟಾ ಹೊಡೆದಿದ್ದಾನೆ. ಹೌದು ನನ್ನ ಮೇಲೆ ಹಲ್ಲೆಯಾಗಿದೆ. ಆದರೇ ಯಾವ ಪೊಲೀಸರು ಕಂಪ್ಲೆಂಟ್ ತಗೋತಿಲ್ಲ ಎಂದು ಆರೋಪಿಸಿ ಕಮೀಷನರ ಕಚೇರಿಗೆ ಬಂದಿದ್ದಾನೆ. ಆದರೇ ಅಲ್ಲೂ ಕೂಡ ದೂರು ನೀಡದೇ ಸುಮ್ಮನೆ ರಂಪಾಟ ಮಾಡಿ ವಾಪಸ್ಸಾಗಿದ್ದಾನೆ. ಒಟ್ಟಿನಲ್ಲಿ ದಿನ-ದಿನಕ್ಕೂ ಹುಚ್ಚವೆಂಕಟ್ ಅವಾಂತರಗಳು ಹೆಚ್ಚುತ್ತಿರೋದಂತು ಸತ್ಯ.