ದೇವೆಗೌಡರ ಇನ್ನೊರ್ವ ಪುತ್ರನ ರಾಜಕೀಯ ಪ್ರವೇಶ- ಕರ್ನಾಟಕ ರಾಜಕೀಯಕ್ಕೆ ಎಚ್.ಡಿ.ಬಾಲಕೃಷ್ಣ?!

 

ad

ಕರ್ನಾಟಕ ರಾಜ್ಯದ ರಾಜಕಾರಣದಲ್ಲಿ ಮಾಜಿ ಪ್ರಧಾನಿ ದೇವೆಗೌಡರ್ ಕುಟುಂಬಕ್ಕೆ ಸಿಂಹಪಾಲಿದೆ. ಜೆಡಿಎಸ್​ನಲ್ಲಿ ಬಹುತೇಕ ದೇವೆಗೌಡರ ಕುಟುಂಬಸ್ಥರೆ ತುಂಬಿದ್ದಾರೆ. ಹೀಗಾಗಿಯೇ ಸದಾಕಾಲ ದೇವೆಗೌಡರ್ ಕುಟುಂಬದ ಮೇಲೆ ಕುಟುಂಬ ರಾಜಕಾರಣದ ಆರೋಪವೂ ಇದೆ. ಇದೀಗ ಈ ಸಾಲಿಗೆ ಹೊಸಸೇರ್ಪಡೆಯಾಗಿದೆ.
ಹೌದು ದೊಡ್ಡಗೌಡರ ಮತ್ತೊಂದು ಕುಡಿ ಕರ್ನಾಟಕ ರಾಜಕಾರಣಕ್ಕೆ ಎಂಟ್ರಿ ಕೊಡುವ ಮುನ್ಸೂಚನೆ ದೊರೆತಿದೆ. 2019ರ ಲೋಕಸಭಾ ಚುನಾವಣೆಗೆ ಜೆಡಿಎಸ್ ಭರ್ಜರಿ ಪ್ಲಾನ್​​​​​​ ಮಾಡಿದ್ದು, HDD ಕುಟುಂಬದಿಂದ ಮತ್ತೊಬ್ಬ ಅಭ್ಯರ್ಥಿ ಲೋಕಸಭೆಗೆ ಎಂಟ್ರಿ ಕೊಡುವ ಸಾಧ್ಯತೆ ಇದೆ.

ತುಮಕೂರು ಲೋಕಸಭಾ ಕ್ಷೇತ್ರದಿಂದ ದೇವೆಗೌಡರ ಮೊದಲ ಪುತ್ರ ಹೆಚ್​.ಡಿ.ಬಾಲಕೃಷ್ಣ ಕಣಕ್ಕಿಳಿಯಲಿದ್ದಾರೆ. ಈಗಾಗಲೇ ಚುನಾವಣೆಗೆ ವೇದಿಕೆ ರೂಪಿಸಿಕೊಳ್ತಿರುವ ಹೆಚ್​.ಡಿ.ಬಾಲಕೃಷ್ಣ, ತುಮಕೂರು ಕ್ಷೇತ್ರದಾದ್ಯಂತ ಭರ್ಜರಿ ರೌಂಡ್ಸ್​ ಹಾಕ್ತಿದ್ದಾರೆ. ಶಾಸಕ ಗೌರಿಶಂಕರ್ ಸಾರಥ್ಯದಲ್ಲಿ ಜಿಲ್ಲೆಯ ಜನತೆಗೆ ಬಾಲಕೃಷ್ಣರನ್ನು ಪರಿಚಯ ಮಾಡಿಸಲಾಗ್ತಿದೆ. ಒಟ್ಟಿನಲ್ಲಿ ಇನ್ನಷ್ಟು ವರ್ಷಗಳ ಕಾಲ ರಾಜ್ಯದಲ್ಲಿ ದೇವೆಗೌಡರ ಕುಟುಂಬ ರಾಜಕಾರಣದಲ್ಲಿ ಮುಂದುವರಿಯುವ ಲಕ್ಷಣವಿದೆ.