ಪೊಲಿಟಿಕಲ್​ ಹೈಡ್ರಾಮಾ ಮುಂಬೈಗೆ ಶಿಫ್ಟ್​! ಅತೃಪ್ತರು ಒಳಗೆ, ಡಿಕೆಶಿ ಹೊರಗೆ! ಮರಾಠರ ಕೋಟೆಗೆ ಲಗ್ಗೆ ಇಟ್ಟ ಟ್ರಬಲ್ ಶೂಟರ್​​!!

ನಿನ್ನೆಯವರೆಗೆ ಬೆಂಗಳೂರಿನಲ್ಲಿ ನಡೆಯುತ್ತಿದ್ದ ರಾಜ್ಯ ರಾಜಕಾರಣದ ಹೈಡ್ರಾಮಾ ತಡರಾತ್ರಿ ವೇಳೆಗೆ ಮುಂಬೈಗೆ ಶಿಫ್ಟ್​ ಆಗಿದೆ. ಹೌದು ಅತೃಪ್ತರ ಮನವೊಲಿಸಲು ಸಚಿವ ಡಿ.ಕೆ.ಶಿವಕುಮಾರ್ ಮುಂಬೈಗೆ ತೆರಳಲು ಸಜ್ಜಾಗಿದ್ದರು. ಇದನ್ನು ಅರಿತ ಮುಂಬೈನ ಅತೃಪ್ತರು ಡಿಕೆಶಿ ಹೊಟೇಲ್ ಪ್ರವೇಶ ತಡೆಯುವುದಕ್ಕೆ ಹೈಡ್ರಾಮಾ ಆರಂಭಿಸಿದರು.

ad


ತಡರಾತ್ರಿಯೇ ಮುಂಬೈ ಕಮೀಷನರ್ ಮೊರೆ ಹೋದ ಅತೃಪ್ತ ಶಾಸಕರು ಕರ್ನಾಟಕದ ಟ್ರಬಲ್ ಶೂಟರ್ ಡಿಕೆಶಿಯವರನ್ನು ಹೊಟೇಲ್​ ಒಳಗೆ ಪ್ರವೇಶಿಸದಂತೆ ತಡೆಯಲು ಮನವಿ ಮಾಡಿದ್ದಾರೆ. ತಕ್ಷಣ ಅತೃಪ್ತರ ಸಹಾಯಕ್ಕೆ ಧಾವಿಸಿದ ಮುಂಬೈ ಕಮಿಷನರ್ ಸಂಜಯ್ ಬಾರ್ವೆ ಹೊಟೇಲ್​ಗೆ 500 ಕ್ಕೂ ಹೆಚ್ಚು ಪೊಲೀಸರನ್ನು ನೇಮಿಸಿ ಭದ್ರತೆ ಏರ್ಪಡಿಸಿದ್ದಾರೆ.


ಈ ಮಧ್ಯೆ ಬೆಳಗ್ಗೆ ನಿಗದಿಯಂತೆ ಡಿಕೆಶಿವಕುಮಾರ್ ರಿನೈಸೆನ್ಸ್​ ಹೊಟೇಲ್​ಗೆ ಆಗಮಿಸಿದರು. ಆದರೆ ಮುಂಬೈ ಪೊಲೀಸರು ಡಿ.ಕೆ.ಶಿವಕುಮಾರ್ ಅವರನ್ನು ಹೊಟೇಲ್​ ಒಳಕ್ಕೆ ಪ್ರವೇಶಿಸದಂತೆ ತಡೆದಿದ್ದು, ಡಿ.ಕೆ.ಶಿವಕುಮಾರ್, ಜಿ.ಟಿ.ದೇವೆಗೌಡ, ಶಿವಲಿಂಗೇಗೌಡ, ಸಿ.ಎನ್​.ಬಾಲಕೃಷ್ಣ್ ಪೊಲೀಸರೊಂದಿಗೆ ಮಾತುಕತೆ ನಡೆಸಿ ನಾವು ಕೂಡ ಹೊಟೇಲ್​ ಒಳಕ್ಕೆ ರೂಂ ಬುಕ್​ ಮಾಡಿದ್ದು, ತೆರಳಲು ಅವಕಾಶ ನೀಡುವಂತೆ ಕೋರಿದ್ದಾರೆ.


ಆದರೆ ಇದಕ್ಕೆ ಮುಂಬೈ ಪೊಲೀಸರು ಒಪ್ಪಿಲ್ಲ. ಹೀಗಾಗಿ ಇನ್ನೂ ಕೂಡ ಹೊಟೇಲ್​ ಮುಂಭಾಗದಲ್ಲೇ ಡಿಕೆಶಿ ಕಾಯುತ್ತಿದ್ದು, ಪೊಲೀಸರನ್ನು ಕನ್ವಿನ್ಸ್ ಮಾಡಿ ಒಳಪ್ರವೇಶಿಸುವ ಪ್ರಯತ್ನ ಮಾಡುತ್ತಿದ್ದಾರೆ. ಇನ್ನು ಮಾಧ್ಯಮದ ಜೊತೆ ಮಾತನಾಡಿದ ಡಿ.ಕೆ.ಶಿ ಇಲ್ಲಿರುವ ಅತೃಪ್ತರು ನನ್ನ ಸಹೋದರರಿದ್ದಂತೆ. ನಾನು ಅವರನ್ನು ಭೇಟಿಗೆ ಬಂದಿದ್ದೇನೆ. ಯಾರನ್ನು ಬೆದರಿಸುವ ಪ್ರಶ್ನೆಯೇ ಇಲ್ಲ. ಒಳಗಿರುವ ಶಾಸಕರೇ ನನ್ನನ್ನು ಒಳಗೆ ಕರೆಸಿಕೊಳ್ಳುತ್ತಾರೆ ಎಂಬ ವಿಶ್ವಾಸವಿದೆ ಎಂದಿದ್ದಾರೆ.

 

ಅಲ್ಲದೇ ಇದರಲ್ಲಿ ಮಹಾರಾಷ್ಟ್ರ ಕಾಂಗ್ರೆಸ್​​ ಸಹಾಯ ಕೇಳುವಂತೆ ಪ್ರಶ್ನೆಯೇ ಇಲ್ಲ ಎಂದಿದ್ದಾರೆ. ಆದರೆ ಕಳೆದ ಅರ್ಧ ಗಂಟೆಯಿಂದಲೂ ಡಿಕೆಶಿ ಹಾಗೂ ಪೊಲೀಸರ ನಡುವೆ ಮಾತುಕತೆ ನಡೆಯುತ್ತಲೇ ಇದ್ದು, ಇನ್ನು ಕೂಡ ಒಮ್ಮತ ಮೂಡಿಲ್ಲ. ಒಟ್ಟಿನಲ್ಲಿ ರಾಜ್ಯ ರಾಜಕಾರಣದ ಹೈಡ್ರಾಮಾ ಮಾಯಾನಗರಿ ಮುಂಬೈನಲ್ಲಿ ಮುಂದುವರೆದಿದ್ದು, ಯಾವ ಅಂತ್ಯ ಕಾಣಲಿದೆ ಕಾದುನೋಡಬೇಕಿದೆ.