ಕೊಡಗಿನ ಸಂತ್ರಸ್ಥರ ಕಣ್ಣೊರೆಸಲು ಮುಂದಾದ ಖೈದಿಗಳು- ಬಳ್ಳಾರಿ ಜೈಲಿನಲ್ಲೊಂದು ವಿನೂತನ ಪ್ರಯತ್ನ!

ಪ್ರವಾಹಕ್ಕೆ ತುತ್ತಾಗಿರುವ ಕೊಡುಗು ಜಿಲ್ಲೆಯ ಸಂತ್ರಸ್ಥರಿಗೆ ರಾಜ್ಯದ ಎಲ್ಲೆಡೆಯಿಂದ ನೆರವಿನ ಮಹಾಪೂರವೇ ಹರಿದು ಬರುತ್ತಿದೆ. ಜನರು ಮಾನವೀಯತೆಯಿಂದ ನೊಂದವರಿಗೆ ನೆರವಾಗುತ್ತಿದ್ದಾರೆ. ಇದೀಗ ಈ ಸಾಲಿಗೆ ಈಗ ವಿವಿಧ ಪ್ರಕರಣದಲ್ಲಿ ಶಿಕ್ಷೆಗೊಳದ ಖೈದಿಗಳು ಕೂಡ ಸೇರಿದ್ದಾರೆ.

ಯೆಸ್ ಬಳ್ಳಾರಿ ಕೇಂದ್ರ ಕಾರಾಗೃಹದ ಖೈದಿಗಳು ಹೀಗೆ ಮಾನವೀಯತೆ ಮೆರೆದಿದ್ದು, ವಿನೂತನ ಪ್ರಯತ್ನವೊಂದಕ್ಕೆ ಮುನ್ನುಡಿ ಬರೆದಿದ್ದಾರೆ. ರಾಜ್ಯದ ಪ್ರತಿ ಕಾರಾಗೃಹಗಳಲ್ಲೂ ಪ್ರತಿ ಶುಕ್ರವಾರ ಮಾಂಸಾಹಾರವನ್ನ ನೀಡಲಾಗುತ್ತದೆ. ಆದರೇ ಬಳ್ಳಾರಿ ಜೈಲಿನ ಖೈದಿಗಳು ನಾಲ್ಕು ವಾರಗಳ ಕಾಲ ಈ ಮಾಂಸಾಹಾರವನ್ನು ತ್ಯಜಿಸಲು ನಿರ್ಧರಿಸಿದ್ದು, ಆ ಮಾಂಸದ ಹಣವನ್ನು ಕೊಡಗಿನ ಪ್ರವಾಹ ಸಂತ್ರಸ್ಥರಿಗೆ ನೀಡಿ ಎಂದು ಜೈಲಾಧಿಕಾರಿಗಳಿಗೆ ಮನವಿ ಮಾಡಿಕೊಂಡಿದ್ದಾರೆ.

ಇನ್ನು ಖೈದಿಗಳ ಈ ವಿಭಿನ್ನ ಯೋಜನೆ ಹಾಗೂ ಪ್ರಯತ್ನಕ್ಕೆ ರಾಜ್ಯ ಸರ್ಕಾರದ ಅನುಮೋದನೆ ಸಿಕ್ಕರೆ ಕೆಲ ದಿನಗಳಲ್ಲೆ ಖೈದಿಗಳ ನೆರವಿನ ಹಸ್ತ ಪ್ರವಾಹ ಪೀಡಿತರ ಕಣ್ಣೀರು ಒರೆಸಲಿದೆ. ಅಲ್ಲದೆ ನೆರವು ನೀಡುವುದರ ಕುರಿತು ಖೈದಿಯೊಬ್ಬರು ಮಾತಾಡಿರುವ ಏಕ್ಸಕ್ಲೂಸಿವ್ ಆಡಿಯೋ ಬಿಟವಿ ಬಳಿಯಿದ್ದು ಖೈದಿಗಳ ನೆರವಿನ ಮಾತು ನೀವು ಕೇಳಿ.