ಬೆಂಗಳೂರಿನಲ್ಲಿ ನಡೀತಾ ಖಾಸಗಿ ಶಾಲೆ ಮಾಲೀಕನ ಕಿಡ್ನಾಪ್..?ಕಿಡ್ನಾಪ್ ಆಗಿದ್ಯಾರು..? ಹೇಗೆ ನಡೀತು ಅಪಹರಣ..?

ಬೆಂಗಳೂರಿನಲ್ಲಿ ನಡೀತಾ ಖಾಸಗಿ ಶಾಲೆ ಮಾಲೀಕನ ಕಿಡ್ನಾಪ್..?
ಕಿಡ್ನಾಪ್ ಆಗಿದ್ಯಾರು..? ಹೇಗೆ ನಡೀತು ಅಪಹರಣ..?
ಬಿಟಿವಿ ಬಳಿಯಿದೆ ಕಿಡ್ನಾಪ್​ನ ಎಕ್ಸ್​ಕ್ಲೂಸಿವ್ ವಿಡಿಯೋ

ಬೆಂಗಳೂರಿನ ಖಾಸಗಿ ಶಾಲೆಯ ಮಾಲೀಕ ವೀರಭದ್ರಯ್ಯ ರವರ ಅಪಹರಣ ಪ್ರಕರಣ ವಿಜಯನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿತ್ತು. ವಿಜಯನಗರದಲ್ಲಿ ಕಿರಣ್ ಪಬ್ಲಿಕ್ ಶಾಲೆ ನಡೆಸುತ್ತಿರುವ ಭದ್ರಯ್ಯ (65) ಫೆಬ್ರವರಿ 19ರಂದು ಕಾಣೆಯಾಗಿದ್ದಾಗಿ ಭದ್ರಯ್ಯ ಮಗ ಕಿರಣ್ ಕುಮಾರ್ ದೂರು ನೀಡಿದ್ದರು.

ಮಿಸ್ಸಿಂಗ್ ಪ್ರಕರಣ ದಾಖಲು ಮಾಡಿಕೊಂಡ ಪೊಲೀಸರು ಕಾರ್ಯಾಚರಣೆ ಆರಂಭಿಸಿದ್ದಾರೆ. ವಿಜಯನಗರದ ನ್ಯೂ ಪಬ್ಲಿಕ್ ರಸ್ತೆಯಿಂದ ಜಾವ ವಾಯುವಿಹಾರಕ್ಕೆ ಹೋದಾಗ ಭದ್ರಯನನ್ನ ಕಿಡ್ನಾಪ್ ಮಾಡಿದ್ದರು. ಬ್ಲೂ ಕಲರ್ ಓಮಿನಿ ಕಾರ್ ನಲ್ಲಿ ಭದ್ರಯ್ಯನ ಅಪಹರಣ ನಡೆದಿದ್ದು ಸಿಸಿಟಿವಿಯಲ್ಲಿ ಕಿಡ್ನಾಪರ್ಸ್ ರ ಮುಖಚಹರೆ ಪತ್ತೆಯಾಗಿದೆ.