ಸ್ಯಾಂಡಲ್​​ವುಡ್​​​​​​​​ಗೆ ಬರ್ತಿದ್ದಾಳೆ ಕಣ್ಸನ್ನೆಯ ಚೆಲುವೆ! ಡಾ.ರಾಜ್​ ಕುಟುಂಬದ ಕುಡಿಯೊಂದಿಗೆ ಪ್ರಿಯಾ ವಾರಿಯರ್​ ಮೊದಲ ಚಿತ್ರ!!

ಕಣ್ಸನ್ನೆಯ ಮೂಲಕ ವಿಶ್ವವನ್ನೇ ತನ್ನತ್ತ ಸೆಳೆದಿದ್ದ ಬೆಡಗಿ ಪ್ರಿಯಾ ವಾರಿಯರ್​. ರಾತ್ರಿ ಬೆಳಗಾಗೋದ್ರಲ್ಲಿ ಲಕ್ಷಾಂತರ ಪಡ್ಡೆ ಹೈಕಳ ಮನದರಸಿಯಾಗಿ ಬದಲಾಗಿದ್ದ ಪ್ರಿಯಾ ಚಂದನವನಕ್ಕೆ ಬರಲಿದ್ದಾರೆ ಎಂಬ ಸುದ್ದಿ ಹಲವಾರು ಬಾರಿ ಕೇಳಿಬಂದಿತ್ತು. ಆದರೇ ಈ ಬಾರಿ ಮಾತ್ರ ಸುದ್ಧಿ ಕನ್ಪರ್ಮ್​. ಹೌದು ಪ್ರಿಯಾ ವಾರಿಯರ್ ಸ್ಯಾಂಡಲವುಡ್​​​​ ಲಗ್ಗೆ ಇಡಲಿದ್ದಾರೆ.


ಡಾ.ರಾಜಕುಮಾರ್ ಫ್ಯಾಮಿಲಿಯಿಂದ ಅದೃಷ್ಟ ಪರೀಕ್ಷೆಗೆ ಮುಂದಾಗಿರುವ ನಟ ಸೂರಜ್​ಗೆ ಕುಮಾರ್​ಗೆ ಪ್ರಿಯಾ ವಾರಿಯರ್​ ಸಾಥ್ ನೀಡಲಿದ್ದಾರೆ. ಸೂರಜ್ ಕುಮಾರ್, ಡಾ.ರಾಜಕುಮಾರ್​ ಪತ್ನಿ ಪಾರ್ವತಮ್ಮನವರ ಸಹೋದರ ಶ್ರೀನಿವಾಸ್ ಅವರ ಮಗ.


ಸೂರಜ್ ಕುಮಾರ್ ಮೊದಲ ಬಾರಿಗೆ ನಾಯಕನಾಗಿ ಕಾಣಿಸಿಕೊಳ್ಳುತ್ತಿರುವ ಈ ಸಿನಿಮಾದಲ್ಲಿ ಪ್ರಿಯಾ ಕಾಣಿಸಿಕೊಳ್ಳಲಿದ್ದಾರೆ. ಕೆಲ ದಿನಗಳ ಹಿಂದೆಯಷ್ಟೇ ಪ್ರಿಯಾ ವಾರಿಯರ್​ ಕನ್ನಡಕ್ಕೆ ಬಂದು ಮಾಜಿ ಸಚಿವ ಕುಮಾರಬಂಗಾರಪ್ಪ ಪುತ್ರ ಅರ್ಜುನ್​ಗೆ ಜೊತೆಯಾಗ್ತಾರೆ ಎನ್ನಲಾಗಿತ್ತು.


ಆದರೆ ಈಗ ಎಲ್ಲ ಊಹಾಪೋಹಗಳು ಕೊನೆಯಾಗಿದ್ದು, ಪ್ರಿಯಾ ಕನ್ನಡದ ಚಿತ್ರರಂಗದಲ್ಲಿ ಛಾಪು ಮೂಡಿಸುವುದು ಬಹುತೇಕ ಖಚಿತವಾಗಿದೆ. ಚಿತ್ರರಂಗಕ್ಕೆ ಬರಲು ಸಾಕಷ್ಟು ಸಿದ್ಧತೆ ಮಾಡಿಕೊಂಡಿರುವ ಸೂರಜ್ ಕುಮಾರ್, ಫೈಟಿಂಗ್ ಮತ್ತು ಡ್ಯಾನ್ಸ್ ಕಲೆಗಳನ್ನು ಕರಗತಮಾಡಿಕೊಂಡಿದ್ದಾರೆ.


ಇನ್ನು ಕನ್ನಡದಲ್ಲಿ ಮೋಡಿ ಮಾಡಲಿರುವ ಪ್ರಿಯಾ ವಾರಿಯರ್ ಮೊದಲ ಚಿತ್ರಕ್ಕೆ ರಘು ಕೋವಿ ನಿರ್ದೇಶನವಿದ್ದು, ಅಉರ್ನ್ ಜನ್ಯಾ ಸಂಗೀತವಿದೆ. ಸತ್ಯ ಹೆಗಡೆ ಕ್ಯಾಮರಾ ವರ್ಕ್ ಇರಲಿದೆ. ಅಗಸ್ಟ್​ನಿಂದ ಸಿನಿಮಾ ಶೂಟಿಂಗ್ ಆರಂಭವಾಗಲಿದೆ.