ಪ್ರಿಯಾಂಕಾ ಮತ್ತು ದೀಪಿಕಾರ “ಮೆಟ್ ಗಾಲಾ” ಡ್ರೆಸ್​​ ಬೆಲೆ ಎಷ್ಟು ಗೊತ್ತಾ?! ಬೆಲೆ ಕೇಳಿದ್ರೆ ನೀವು ಹೌಹಾರೋದು ಗ್ಯಾರಂಟಿ!!

ಅಮೆರಿಕದಲ್ಲಿ ನಡೆದ ‘ಮೆಟ್ ಗಾಲಾ’ ಸಂಭ್ರಮದಲ್ಲಿ ಭಾರತದ ಟಾಪ್ ಸೆಲೆಬ್ರಿಟಿಗಳಾದ ಪ್ರಿಯಾಂಕಾ ಚೋಪ್ರಾ ಮತ್ತು ದೀಪಿಕಾ ಪಡುಕೋಣೆ ವಿಭಿನ್ನ ಲುಕ್‌ನಲ್ಲಿ ಗಮನಸೆಳೆದಿದ್ದು ಗೊತ್ತೇ ಇದೆ. ಬಾಲಿವುಡ್​ನ ಇಬ್ಬರು ಚೆಲುವೆಯರು ಅಲ್ಲಿ ಇಂಡಿಯಾದ ಐಕಾನ್‌ಗಳಾಗಿ ಮೆರೆದಿದ್ರು.

ad

ಹೌದು.. ಪ್ರಿಯಾಂಕಾ ಚೋಪ್ರಾ ಧರಿಸಿದ್ದ ಧಿರಿಸು ಇದೀಗ ಸೋಷಿಯಲ್ ಮೀಡಿಯಾದಲ್ಲಿ ಫುಲ್ ವೈರಲ್ ಆಗಿರುವುದು ಮಾತ್ರ ಅಲ್ಲ, ಸಖತ್ ಟ್ರೋಲ್​​ಗೆ ಗುರಿಯಾಗಿತ್ತು. ನಟಿ ಪ್ರಿಯಾಂಕಾರ ವಿಭಿನ್ನ ಹೇರ್ ಸ್ಟೈಲ್, ವೇಷ-ಭೂಷಣ ನೋಡಿ ಜನರು ಸೋಷಿಯಲ್ ಮೀಡಿಯಾಗಳಲ್ಲಿ ಸಿಕ್ಕಾಪಟ್ಟೆ ತಮಾಷೆ ಮಾಡಿದ್ರು. ಪ್ರಿಯಾಂಕಾ ಲುಕ್ ಜಗತ್ತಿನಾದ್ಯಂತ ವೈರಲ್ ಆಗಿತ್ತು.

ಪ್ರಿಯಾಂಕಾ ಚೋಪ್ರಾ ಧರಿಸಿದ್ದ ಗೌನ್ ಬೆಲೆ ಕೇಳಿದರೆ ಅದೆಷ್ಟೋ ಜನರು ಹೌಹಾರುವುದು ಗ್ಯಾರಂಟಿ! ಗೌನ್ ಬೆಲೆ ಬರೋಬ್ಬರಿ 45 ಲಕ್ಷ ಎನ್ನಲಾಗಿದೆ. ಈ ಗೌನ್​ನ ಕ್ರಿಯೇಟ್​ ಮಾಡೋಕೆ ಹಿಡಿದಿದ್ದು ಬರೊಬ್ಬರಿ 1500 ಗಂಟೆ. ಇನ್ನು ಪಿಗ್ಗಿ ಧರಿಸಿದ್ದ ಕಿವಿಯೋಲೆಯ ಬೆಲೆ ಬರೋಬ್ಬರಿ 10 ಲಕ್ಷ.

ಇನ್ನು ಬಾಲಿವುಡ್ ಬ್ಯೂಟಿ ದೀಪಿಕಾ ಪಡುಕೋಣೆ ಕೂಡ, ಮೆಟ್‍ಗಾಲಾ ರೆಡ್ ಕಾರ್ಪೆಟ್ ಮೇಲೆ ಹೆಜ್ಜೆ ಹಾಕಿ ಮಿಂಚಿದ್ದಾರೆ. ಬಾರ್ಬಿ ಡಾಲ್‍ನಂತೆ ಪಿಂಕ್ ಗೌನ್, ಹೇರ್​ಸ್ಟೈಲ್​ ಮೇಕಪ್ ಮಾಡಿಕೊಂಡು, ಬಾರ್ಬಿಯನ್ನೂ ಮೀರಿಸುವಂತೆ ಸುಂದರವಾಗಿ ಎಲ್ಲರ ಕಣ್ಣುಕುಕ್ಕಿದ್ರು ದೀಪಿಕಾ ಈ ಡ್ರೆಸ್ಟಿಂಗ್​ನಲ್ಲಿ ರೆಡಿಯಾಗೋಕೆ ಕೆಲವು ಗಂಟೆಗಳು ತೆಗೆದುಕೊಂಡಿದ್ರು.

ಇವರಿಬ್ಬರಷ್ಟೇ ಅಲ್ಲ.. ಜಗತ್ತಿ ನ ಹಲವಾರು ಮಂದಿ ಸೆಲೆಬ್ರೆಟಿಗಳು ಚಿತ್ರವಿಚಿತ್ರ ಡ್ರೆಸ್​ ಧರಿಸಿ ಮೆಟ್ ಗಾಲಾಕ್ಕೆ ಆಗಮಿಸಿದ್ದರು. ಗಾಯಕಿ ಕೇಟಿ ಪೆರ್ರಿ, ಛಾವಣಿಗೆ ತೂಗುಹಾಕುವ ಲ್ಯಾಂಪ್ ಸೆಟ್‍ಅನ್ನೇ ಕಾಸ್ಟ್ಯೂಮ್ ಮಾಡಿಕೊಂಡು ಮೆಟ್‍ಗಾಲಾ ರೆಡ್ ಕಾರ್ಪೆಟ್‍ಗೆ ಆಗಮಿಸಿದ್ದು ವಿಶೇಷ.ಹಾಗೇ ಜೋಕರ್ ಖ್ಯಾತಿಯ ಹಾಲಿವುಡ್ ಸ್ಟಾರ್ ಜಾರೆಡ್ ಲೆಟೋ ತಮ್ಮದೇ ತಲೆಯಂತಿರುವ ಮಾಡೆಲ್ ಪೀಸ್ ಒಂದನ್ನು ಹಿಡಿದು ಬಂದಿದ್ದು ಗಮನ ಸೆಳೆಯುವಂತಿದ್ದರು. ಹೀಗೆ ಈ ಬಾರಿಯ ಮೆಟ್‍ಗಾಲಾ ಸಹ ತುಂಬ ವಿಶೇಷತೆಗಳಿಂದ ಕೂಡಿತ್ತು.

ವಿಶ್ವದ ಪ್ರತಿಷ್ಠಿತ ಫ್ಯಾಷನ್ ಈವೆಂಟ್‍ಗಳ ಪೈಕಿ ಮೆಟ್‍ಗಾಲಾ ಪ್ರಮುಖವಾದುದು. ಪ್ರತಿವರ್ಷ ಹಾಲಿವುಡ್ ಸ್ಟಾರ್ಸ್, ಪಾಪ್ ಸೂಪರ್​ ಸ್ಟಾರ್​ಗಳು ಹಾಗೂ ಸೆಲೆಬ್ರಿಟಿಗಳು ಮೆಟ್‍ಗಾಲಾದಲ್ಲಿ ತರಹೇವಾರಿ ವಿನ್ಯಾಸಿತ ದಿರಿಸುಗಳನ್ನು ಧರಿಸಿ ಮಿಂಚುತ್ತಾರೆ.ನ್ಯೂಯಾರ್ಕ್‍ನಲ್ಲಿನ ಮೆಟ್ರೋಪಾಲಿಟನ್ ಮ್ಯೂಸಿಯಂ ಆಫ್ ಆರ್ಟ್ಸ್, ಕಾಸ್ಟ್ಯೂಮ್ ಇನ್‍ಸ್ಟಿಟ್ಯೂಟ್ ಪ್ರತಿ ವರ್ಷ ನಿರ್ವಹಿಸುವ ಕಾರ್ಯಕ್ರಮವೇ ‘ಮೆಟ್ ಗಾಲಾ’. ಈ ಕಾರ್ಯಕ್ರಮಕ್ಕೆ ತಾರೆಗಳು ಭಿನ್ನವಾದ ಬಟ್ಟೆಗಳನ್ನು ತೊಟ್ಟು ಹಾಜರಾಗುತ್ತಾರೆ. ಪ್ರತಿ ವರ್ಷ ಹೊಸ ಥೀಮ್ ಇಟ್ಟುಕೊಂಡು ಕಾರ್ಯಕ್ರಮ ನಿರ್ವಹಿಸಲಾಗುತ್ತದೆ.

ಈ ಸಲದ ಥೀಮ್‌ಗೆ ‘ಕ್ಯಾಂಪ್: ನೋಟ್ಸ್ ಆಫ್ ಫ್ಯಾಷನ್’ ಎಂದು ಹೆಸರಿಡಾಲಾಗಿದೆ. ಅಂದರೆ ಸಾಧ್ಯವಾದಷ್ಟು ಭಿನ್ನ ರೀತಿಯ ಪೋಷಾಕಿನಲ್ಲಿ ಫ್ಯಾಷನ್ ಹೊರಹೊಮ್ಮುವಂತೆ ಪಿಂಕ್ ಕಾರ್ಪೆಟ್‌ ಮೇಲೆ ಎಲ್ಲರ ಕಣ್ಣು ಕುಕ್ಕುವಂತಿರಬೇಕು!

ಕೆಲವು ತಿಂಗಳ ಕಾಲ ಈ ಕಾರ್ಯಕ್ರಮ ನಡೆಯುತ್ತದೆ. ಈ ಕಾರ್ಯಕ್ರಮದ ಮೂಲಕ ಬರುವ ನಿಧಿಯನ್ನು ಚಾರಿಟಿಗೆ ಬಳಸಿಕೊಳ್ಳಲಾಗುತ್ತದೆ. ಅತ್ಯಧಿಕ ನಿಧಿ ಸಂಗ್ರಹಿಸುವ ಕಾರ್ಯಕ್ರಮ ಇದು ಎಂಬುದು ವಿಶೇಷ. 2013ರಲ್ಲಿ ನಡೆದ ಕಾರ್ಯಕ್ರಮದಲ್ಲಿ 9 ಮಿಲಿಯನ್ ಡಾಲರ್, 2014ರಲ್ಲಿ 12 ಮಿಲಿಯನ್ ಡಾಲರ್ ನಿಧಿ ಸಂಗ್ರಹವಾಗಿತ್ತು. ಒಟ್ಟಿನಲ್ಲಿ ಫ್ಯಾಷನ್​ ಪ್ರಿಯರಿಗೆ ಈ ಕಾರ್ಯಕ್ರಮ ಅಚ್ಚುಮೆಚ್ಚು