ಕೊನೆಗೂ ಯಶ್​ ಗುಡ್ಡದಂತ ಗಡ್ಡಕ್ಕೆ ಸಿಕ್ತು ಮುಕ್ತಿ- ರಾಮಾಚಾರಿ ನ್ಯೂ ಲುಕ್​​ಗೆ ಮನಸೋತ ರಾಧಿಕಾ !

 

ad

ಕನ್ನಡಿಗರ ಅಚ್ಚುಮೆಚ್ಚಿನ ರಾಕಿಂಗ್​ ಸ್ಟಾರ್​ ಕೊನೆಗೂ ತಮ್ಮ ಮುದ್ದಿನ ಮಡದಿ ರಾಧಿಕಾ ಪಂಡಿತ್​ ಬಯಕೆ ಈಡೇರಿಸಿದ್ದಾರೆ. ಹೌದು ಇನ್ನೇನು ಕೆಲ ತಿಂಗಳಲ್ಲಿ ಜ್ಯೂನಿಯರ್ ಯಶ್ ಅಥವಾ ಜ್ಯೂನಿಯರ್ ರಾಧಿಕಾ ಪಂಡಿತ್​​ ಬರೋ ವಿಚಾರ ನಿಮಗೆಲ್ಲ ಗೊತ್ತೆ. ತಾಯ್ತನ ಸಂಭ್ರಮದಲ್ಲಿರೋ ರಾಧಿಕಾ ಅವರ ಒಂದು ಆಸೆಯನ್ನ ಯಶ್​ ಈಡೇರಿಸಿದ್ದಾರೆ.ಅದೇನು ಅಂದ್ರಾ ಅದೇ ತಮ್ಮ ಗುಡ್ಡದಂತಹ ಗಡ್ಡ.

ಹೌದು ಯಶ್​ ಅವರ ಬಹುನೀರಿಕ್ಷಿತ ಚಿತ್ರ ಕೆಜಿಎಫ್​ಗಾಗಿ ಯಶ್​​ ಕಳೆದ ಎರಡು ವರ್ಷಗಳಿಂದ ದೊಡ್ಡದಾದ ಗಡ್ಡ ಬಿಟ್ಕೊಂಡು ಓಡಾಡುತ್ತಿದ್ದರು. ಇದು ಅವರ ಹೊಸ ಚಿತ್ರದ ಲುಕ್​ ಆಗಿದ್ದರೂ ಚಾಕೋಲೇಟ್​ ಹಿರೋ ಯಶ್​​ ಇಮೇಜ್​​ಗೆ ಅಡ್ಡಿಯಾಗಿತ್ತು. ಹೀಗಾಗಿ ಅಭಿಮಾನಿಗಳು ಯಶ್​ ಗಡ್ಡಕ್ಕೆ ಮುಕ್ತಿ ಯಾವಾಗ? ಅಂತ ಕೇಳ್ತಾನೆ ಇದ್ದರು. ಆದರೇ ಯಶ್ ಮೌನ ಮುರಿದಿರಲಿಲ್ಲ.

 

ಕೇವಲ ಯಶ್ ಅಭಿಮಾನಿಗಳು ಮಾತ್ರವಲ್ಲ ಯಶ್ ಪತ್ನಿ ರಾಧಿಕಾ ಪಂಡಿತ್ ಕೂಡ ಇದೇ ಪ್ರಶ್ನೆಯನ್ನ ಸಾಕಷ್ಟು ಭಾರಿ ಕೇಳಿದ್ದರು. ಇಷ್ಟೇ ಅಲ್ಲ ಇತ್ತೀಚಿಗೆ ಯಶ್ ಖಾಸಗಿ ವಾಹಿನಿಯ ರಿಯಾಲಿಟಿ ಶೋವೊಂದರಲ್ಲಿ ಕೂಡ ಭಾಗಿಯಾಗಿದ್ದರು. ಆ ವೇಳೆ ಕೂಡ ಪೋನ್ ನಲ್ಲಿ ಮಾತನಾಡಿದ್ದ ರಾಧಿಕಾ ಯಶ್​ ಗಡ್ಡ ತೆಗೆಯೋದು ಯಾವಾಗ ಅಂತ ಪ್ರಶ್ನೆ ಮಾಡಿ ಯಶ್​ರನ್ನು ರೇಗಿಸಿದ್ದರು.

 

ಇದೀಗ ಎರಡು ವರ್ಷದ ಬಳಿಕ ಯಶ್​​ ತಮ್ಮ ಗಡ್ಡವನ್ನು ಟ್ರಿಮ್​ ಮಾಡಿಸಿಕೊಂಡಿದ್ದು, ತಮ್ಮ ಹಳೆ ಲುಕ್​ಗೆ ಮರಳಿದ್ದಾರೆ. ಕೆಜಿಎಫ್​ ಚಿತ್ರೀಕರಣ ಸಂಪೂರ್ಣ ಮುಕ್ತಾಯಗೊಂಡು ಬಿಡುಗಡೆಗೆ ಸಿದ್ಧವಾಗುತ್ತಿರುವ ಹಿನ್ನೆಲೆಯಲ್ಲಿ ಯಶ್​ ತಮ್ಮ ಮೊದಲಿನ ಲುಕ್​ಗೆ ಮರಳಿದ್ದಾರೆ. ಆ ಮೂಲಕ ಯಶ್​ ಗಡ್ಡ ತೆಗೆಯೋದು ಯಾವಾಗ ಅನ್ನೋ ಫ್ಯಾನ್ಸ್​ ಪ್ರಶ್ನೆಗೆ ಉತ್ತರ ನೀಡಿದ್ದಾರೆ.

 

ಇನ್ನು ಯಶ್​ ಕಿರಾತಕ್ ಪಾರ್ಟ್​ -2 ಸಿನಿಮಾಗೂ ರೆಡಿಯಾಗುತ್ತಿದ್ದು ಆ ಹಿನ್ನೆಲೆಯಲ್ಲಿ ಕೂಡ ಲುಕ್​ ಬದಲಾಯಿಸಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಇನ್ನು ರಾಮಾಚಾರಿ ಯಶ್​ ಗಡ್ಡ ತೆಗೆಸಿಕೊಂಡು ಲುಕ್​ ಬದಲಾಯಿಸಿಕೊಳ್ಳೋ ಈ ಕ್ಷಣಕ್ಕೆ ರಾಧಿಕಾ ಪಂಡಿತ್​ ಕೂಡ ಸಾಕ್ಷಿಯಾಗಿದ್ದು, ಯಶ್​ ಎದುರಲ್ಲೇ ಕೂತು ಯಶ್​ರನ್ನು ರೇಗಿಸಿ ಸಂಭ್ರಮಿಸುತ್ತಿದ್ದ ವಿಡಿಯೋ ಇದೀಗ ಸಖತ್ ವೈರಲ್​ ಆಗಿದ್ದು, ಫ್ಯಾನ್ಸ್​ ಈ ಕ್ಷಣಗಳನ್ನು ಎಂಜಾಯ್ ಮಾಡ್ತಿದ್ದಾರೆ.