ಸುಪ್ರೀಂಕೋರ್ಟ್​ನ ನೂತನ ಮುಖ್ಯನ್ಯಾಯಮೂರ್ತಿಗಳಾಗಿ ರಂಜನ್​ ಗೋಗೋಯ್​ ಅಧಿಕಾರ ಸ್ವೀಕಾರ!

 

ad


ಸುಪ್ರೀಂಕೋರ್ಟ್​ನ ನೂತನ ಮುಖ್ಯನ್ಯಾಯಮೂರ್ತಿಯಾಗಿ ರಂಜನ್​​ ಗೊಗೋಯ್​​​ ಪ್ರಮಾಣವಚನ ಸ್ವೀಕರಿಸಿದ್ರು. ಸುಪ್ರೀಂಕೋರ್ಟ್​ನ 46ನೇ ಮುಖ್ಯನ್ಯಾಯಮೂರ್ತಿಯಾಗಿರುವ ಗೊಗೋಯ್​ ಅವ್ರಿಗೆ ರಾಷ್ಟ್ರಪತಿ ರಾಮನಾಥ್​​ ಕೋವಿಂದ್​ ಗೌಪ್ಯತೆ ಪ್ರಮಾಣವಚನ ಬೋಧಿಸಿದ್ರು.

 

 

ರಾಷ್ಟ್ರಪತಿ ಭವನದಲ್ಲಿ ನಡೆದ ಸಮಾರಂಭದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ,ಎಲ್​.ಕೆ.ಅಡ್ವಾಣಿ, ಅರುಣ್​ ಜೇಟ್ಲಿ, ರಾಜನಾಥ್​ ಸಿಂಗ್​​, ಸುಷ್ಮಾ ಸ್ವರಾಜ್​​​​ ಸೇರಿದಂತೆ ಹಲವು ಪ್ರಮುಖರು ಭಾಗಿಯಾಗಿದ್ದರು. ಇಂದು ಪ್ರತಿಜ್ಞಾ ವಿಧಿ ಸ್ವೀಕರಿಸಿದ ರಂಜನ್​​​ ಗೊಗೋಯ್​​​​​ ಅವಧಿ 2019ರ ನವೆಂಬರ್​ಗೆ ಅಂತ್ಯವಾಗಲಿದೆ. ಈಶಾನ್ಯ ರಾಜ್ಯಗಳಿಂದ ಈ ಸ್ಥಾನ ಏರುತ್ತಿರುವ ಮೊದಲ ನ್ಯಾಯಮೂರ್ತಿ ಎನ್ನುವ ಹೆಗ್ಗಳಿಕೆಗೆ ಗೊಗೋಯ್ ಪಾತ್ರರಾಗಿದ್ದಾರೆ.

 

ಇನ್ನು ಅಸ್ಸಾಂ ಮಾಜಿ ಸಿಎಂ ಕೇಶವ್ ಚಂದ್ರ ಗೊಗೋಯ್​ ಅವ್ರ ಪುತ್ರರಾಗಿರುವ ರಂಜನ್​​ ಗಗೋಯ್​ ಅವ್ರು ಅತ್ಯಂತ ಸರಳ ವ್ಯಕ್ತಿತ್ವದಿಂದಲೇ ಹೆಸರಾದವರು. ಮಾಜಿ ಸಿಎಂ ಮಗ ಹಾಗೂ ನ್ಯಾಯಮೂರ್ತಿಯಾಗಿದ್ರೂ ರಂಜನ್​ ಗೊಗೋಯ್​ ಅವ್ರಿಗೆ ಸ್ವಂತ ಮನೆಯಿಲ್ಲ. ಅವ್ರ ಬಳಿ ಸ್ವಂತ ಆಭರಣವೂ ಇಲ್ಲವಂತೆ. ಬ್ಯಾಂಕ್​​ ಬ್ಯಾಲೆನ್ಸ್​, ಎಲ್​​​ಐಸಿ ಪಾಲಿಸಿಯೂ ಇಲ್ಲ. ಮಡದಿ ಬಳಿ 30 ಲಕ್ಷದ ಸಂಪತ್ತಿದೆ