ಮಿಮ್ರಿಕಿ ನೋಡಿ ನೀವು ನಗಬೇಕಾದರೆ ಈ ಸ್ಟೋರಿ ನೋಡಿ..

ವಿವಿಧ ಪ್ರಾಣಿಗಳು, ಪಕ್ಷಿಗಳು, ವಾಹನಗಳು, ನಟರ ಧ್ವನಿಯನ್ನ ಮಿಮ್ರಿಕಿ ಮಾಡುತ್ತಿರುವ ಯುವಕ.. ಮತ್ತೊಂದೆಡೆ ಸಾಧನೆಗೆ ಬಂದ ಪುರಸ್ಕಾರಗಳು.. ಅಷ್ಟಕ್ಕೂ ಈ ಅಪ್ಪಟ ಗ್ರಾಮೀಣ ಪ್ರತಿಭೆಯ ಹೆಸರು ರವಿಕುಮಾರ್.. ಮೂಲತಃ ಕಲಬುರಗಿ ಜಿಲ್ಲೆ ಅಫಜಲಪುರ ತಾಲೂಕಿನ ಆನೂರ್ ಗ್ರಾಮದ ನಿವಾಸಿ.. ಸಧ್ಯ ಈ ಯುವಕ ಕರ್ನಾಟಕದ್ಯಾಂತ ತನ್ನ ಮಿಮ್ರಿಕಿ ನಟನೆ ಮೂಲಕ ಸಖತ್ ಫೆಮಸ್ ಆಗಿದ್ದಾನೆ.. ಖ್ಯಾತ ನಟರಾದ ನಟಸಾರ್ವಭೌಮ ಡಾ ರಾಜಕುಮಾರ್, ರಿಯಲ್​ಸ್ಟಾರ್ ಉಪೇಂದ್ರ ಸೇರಿದಂತೆ ಹತ್ತು ಹಲವು ನಟರ ಡೈಲಾಗ್​ನ್ನ ಅವರದ್ದೆ ಧ್ವನಿಯಲ್ಲಿ ಅವರದ್ದೆ ಶೈಲಿಯಲ್ಲಿ ಮಿಮ್ರಿಕಿ ಮಾಡುತ್ತಿದ್ದರೇ ನೆರದಿರುವ ಪ್ರೇಕ್ಷಕರು ಬಿದ್ದು ಬಿದ್ದು ನಗ್ತಾರೆ..ಇದರ ಬೆಕ್ಕು, ನಾಯಿ, ನವಿಲು, ಕೋಳಿ ಸೇರಿದಂತೆ ಆಟೋ, ಟಾಟಾಸುಮೋ, ರೈಲು ಹಾಗೂ ಹಲವು ವಾಹನಗಳ ಶಬ್ದವನ್ನ ತನ್ನ ಕಂಠಸಿರಿ ಮೂಲಕ ಹಾಸ್ಯದ ಹೊನಲನ್ನ ಹರಿಸುತ್ತಾನೆ.. ಅಲ್ಲದೇ ಖ್ಯಾತ ಹಾಸ್ಯ ಕಲಾವಿದರಾದ ಪ್ರಾಣೇಶ್, ಬಸವರಾಜ್ ಮಹಾಮನಿ ಸೇರಿದಂತೆ ಹಾಸ್ಯ ಲೋಕದ ದಿಗ್ಗಜರ ಜೊತೆ ವೇದಿಕೆ ಹಂಚಿಕೊಂಡಿರುವ ಈ ಮಿಮ್ರಿಕಿ ಕಲಾವಿದನಿಗೆ ಸಂಘಸಂಸ್ಥೆಗಳ ಪ್ರೋತ್ಸಾಹ ಬೇಕಾಗಿದೆ.. ಅಲ್ಲದೇ ಓದಿನ ಜೊತೆಗೆ ಮಿಮ್ರಿಕಿ ಕಲೆಯನ್ನ ಮುಂದುವರೆಸಿಕೊಂಡು ಹೋಗುತ್ತೇನೆ ಅಂತಾನೇ ರವಿಕುಮಾರ್.

ad

 

 

 

 

 

 

 

ಇನ್ನು ರವಿಕುಮಾರ್, ಸಧ್ಯ ಪದವಿ ಮುಗಿಸಿ ವಿಜಯಪುರ ನಗರದಲ್ಲಿ ಕೆಎಎಸ್ ತರಬೇತಿ ಪಡೆಯುತ್ತಿದ್ದಾನೆ.. ಕಡುಬಡತನದಲ್ಲಿ ಹುಟ್ಟಿ ಬೆಳೆದು ಉತ್ತಮ ವಿದ್ಯಾಭ್ಯಾಸ ಮಾಡುತ್ತ, ಚಿಕ್ಕವನಿಂದಲೇ ಹಾಸ್ಯ ಕಲಾವಿದರ ಕಲೆಗಳನ್ನ ನೋಡುತ್ತ ತಾನು ಮಿಮ್ರಿಕಿ ಮಾಡಬೇಕು, ಸಮಾಜದಲ್ಲಿ ತನ್ನನ್ನ ಸಹ ಗುರುತಿಸಬೇಕು ಅಂತಾ ಪಣತೊಟ್ಟು ಈ ಮಟ್ಟಕ್ಕೆ ಬೆಳೆದಿದ್ದಾನೆ.. ವಾಹನಗಳು, ಖ್ಯಾತ ನಟರ, ಪ್ರಾಣಿಪಕ್ಷಿಗಳು ಹಿಗೇ 85 ಕ್ಕೂ ಅಧಿಕ ಧ್ವನಿಗಳನ್ನ ಮಿಮ್ರಿಕಿಯನ್ನ ನಿರ್ಗಳವಾಗಿ ಮಾಡುವ ರವಿಕುಮಾರ್, ಇತ್ತೀಚಿಗಷ್ಟೆ ಕಲಬುರಗಿಯ ಗುಲ್ಬರ್ಗಾ ವಿಶ್ವವಿದ್ಯಾಲಯದ ಯುವ ಜನತ್ಸೋತವ ಕಾರ್ಯಕ್ರಮದಲ್ಲಿ ಮ್ರಿಮಿಕಿ ನಟನೆ ಮಾಡಿದ್ದಾಗಿ ಎರಡು ಚಿನ್ನದ ಪದಕ ಹಾಗೂ ತುಮಕೂರು ವಿಶ್ವವಿದ್ಯಾಲಯದಲ್ಲಿ ಬೆಳ್ಳಿ ಪದಕ ನೀಡಿ ಗೌರವಿಸಲಾಗಿತ್ತಲ್ಲದೇ, ರಾಜ್ಯದ ವಿವಿಧೆಡೆ ಕಾರ್ಯಕ್ರಮಗಳನ್ನ ನೀಡಿರುವ ಈ ಯುವಕನಿಗೆ ಅನೇಕ ಸಂಘಸಂಸ್ಥೆಗಳು ಪ್ರಶಸ್ತಿ ನೀಡಿ ಸನ್ಮಾನಿಸಿವೆ.. ಹೀಗಾಗಿ ಉತ್ತರ ಕರ್ನಾಟಕದ ಈ ಗ್ರಾಮೀಣ ಕಲಾವಿದನ ಬಗ್ಗೆ ಸ್ನೇಹಿತರು ಹೆಮ್ಮೆ ಪಡುತ್ತಾರೆ..

 

 

 

 

ಅದೆನೇ ಇರಲಿ ಕಡುಬಡತನದಲ್ಲಿ ಹುಟ್ಟಿ ಉತ್ತಮ ವಿದ್ಯಾಭ್ಯಾಸದ ಜೊತೆಗೆ ಮಿಮ್ರಿಕಿ ಕಲೆಯನ್ನ ಮಾಡುತ್ತ ರಾಜ್ಯದ್ಯಾಂತ ಫೆಮಸ್ ಆಗುತ್ತಿರುವ ಈ ಪ್ರತಿಭೆಗೆ ಮತ್ತಷ್ಟು ಪ್ರೋತ್ಸಾಹ ಹಾಗೂ ಸಹಾಯ ಬೇಕಾಗಿದೆ..