ಜೈಲುಹಕ್ಕಿಗಳಿಗೆ ಬಿಡುಗಡೆ ಭಾಗ್ಯ- ಸನ್ನಡತೆ ಆಧಾರದಲ್ಲಿ ಹೊರಬಂದ ಖೈದಿಗಳು!

 

ad

 

ಗೊತ್ತಿದ್ದೋ ಗೊತ್ತಿಲ್ಲದೇಯೋ ತಪ್ಪು ಮಾಡಿ ಜೈಲು ಸೇರೋ ಖೈದಿಗಳ ಪಾಲಿಗೆ ಬಿಡುಗಡೆ ಅನ್ನೋದು ಮರಿಚೀಕೆಯಾಗಿರುತ್ತೆ. ಆದರೇ ಪರಪ್ಪನ ಅಗ್ರಹಾರದಲ್ಲಿದ್ದ ಒಂದಷ್ಟು ಖೈದಿಗಳ ಪಾಲಿಗೆ ಮಾತ್ರ ಇಂತಹದೊಂದು ಸುಸಂದರ್ಭ ಒದಗಿಬಂದಿದೆ.
ಹೌದು ಸನ್ನಡತೆಯ ಆಧಾರದ ಮೇಲೆ ಬೆಂಗಳೂರಿನ ಪರಪ್ಪನ ಅಗ್ರಹಾರದ ಕೇಂದ್ರ ಕಾರಾಗೃಹದಲ್ಲಿ ಜೈಲು ವಾಸ ಅನುಭವಿಸಿದ್ದ 79 ಕೈದಿಗಳಿಗೆ ಬಿಡುಗಡೆ ಭಾಗ್ಯ ಸಿಕ್ಕಿದೆ. ಸನ್ನಡೆತೆ ಆಧಾರದ ಮೇಲೆ ರಾಜ್ಯದ ವಿವಿಧ ಬಂಧಿಖಾನೆಗಳ ಕೈದಿಗಳು ಗೃಹ ಇಲಾಖೆ ಬಿಡುಗಡೆ ಮಾಡಿದೆ. ಇನ್ನು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಕೈದಿಗಳಿಗೆ ಬಿಡುಗಡೆ ಪತ್ರ ವಿತರಿಸಿ ಇನ್ನು ಮುಂದೆ ಸಮಾಜದಲ್ಲಿ ಎಲ್ಲರಂತೆ ಸುಖವಾಗಿ ಜೀವನ ನಡೆಸಿ ಅಂತಾ ಶುಭ ಹಾರೈಸಿದ್ದಾರೆ.

ಸನ್ನಡತೆ ಆಧಾರದ ಮೇಲೆ ಬಿಡುಗಡೆಗೊಂಡ ಕೈದಿಗಳು ಪುರುಷರೇ ಆಗಿದ್ದು ಅಕ್ಟೋಬರ್​ 02ರ ಮಹಾತ್ಮ ಗಾಂಧಿಜೀಯವರ 150ನೇ ಜಯಂತಿ ವೇಳೆ ಮತ್ತಷ್ಟು ಖೈದಿಗಳನ್ನು ಬಿಡುಗಡೆ ಮಾಡಲಾಗುತ್ತದೆ.