ನೆಲಮಂಗಲದಲ್ಲಿ ರಸ್ತೆ ಅಪಘಾತ- ಗಾಯಾಳುವನ್ನು ರಸ್ತೆಯಲ್ಲೇ ನರಳೋಕೆ ಬಿಟ್ಟ ಜನರು!

 

ರಸ್ತೆ ಅಪಘಾತದ ಬಗ್ಗೆ ಅದೆಷ್ಟೇ ಅರಿವು ಮೂಡಿಸಿದ್ರು ಜನ ಮಾನವೀಯತೆ ತೋರುವಲ್ಲಿ ಮತ್ತೆ-ಮತ್ತೆ ವಿಫಲರಾಗುತ್ತಲೇ ಇದ್ದಾರೆ.ಬೆಂಗಳೂರು ಹೊರವಲಯ ನೆಲಮಂಗಲದ ಮಹಿಮಾಪುರ ಗೇಟ್ ಬಳಿ ಇಂತದ್ದೆ ಘಟನೆಯೊಂದು ನಡೆದಿದೆ. ಕೆ.ಎಸ್.ಆರ್.ಟಿ.ಸಿ ಬಸ್ ಪಾದಚಾರಿಗೆ ಡಿಕ್ಕಿ ಹೊಡೆದಿದ್ದು, ಪಾದಾಚಾರಿ ತೀವ್ರವಾಗಿ ಗಾಯಗೊಂಡಿದ್ದಾನೆ. ಆದರೇ ಗಾಯಾಳು 45 ನಿಮಿಷಗಳ ಕಾಲ ರಾಷ್ಟ್ರೀಯ ಹೆದ್ದಾರಿಯಲ್ಲೇ ನರಳಾಡುತ್ತಿದ್ದರೂ ಜನರು ಕರುಣೆ ತೋರಿಸಿಲ್ಲ. ಆಸ್ಪತ್ರೆಗೆ ದಾಖಲಿಸುವಂತೆ ಗಾಯಾಳು ಕೈ ಮುಗಿದು ಬೇಡಿಕೊಂಡ್ರು ಸ್ಥಳೀಯರಾಗ್ಲಿ, ವಾಹನ ಸವಾರರು ಮಾನವೀಯತೆ ಮರೆತಂತೆ ವರ್ತಿಸಿದ್ದಾರೆ.

ಟೋಲ್ ಸಿಬ್ಬಂದಿ ಕೂಡ ಗಾಯಾಳು ಯುವಕನಿಗೆ ಸ್ಪಂದಿಸ್ಲಿಲ್ಲ. ಸಾವು ಬದುಕಿನ ನಡುವೆ ಹೋರಾಡ್ತಿದ್ದ ಯುವಕನನ್ನು ಕೆಲ ಸಮಯದ ಬಳಿಕ ವಾಹನ ಸವಾರರು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ರು. ಅಪಘಾತದ ಬಳಿಕ ಕೆ.ಎಸ್.ಆರ್.ಟಿ.ಸಿ ಬಸ್ ಚಾಲಕ ಪರಾರಿಯಾಗಿದ್ದಾನೆ. ಘಟನೆ ಸಂಬಂಧ ನೆಲಮಂಗಲ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.