ಸಿ.ಎಂ ಕುಮಾರಸ್ವಾಮಿ ವಿರುದ್ಧ ಪರೋಕ್ಷವಾಗಿ ಕಿಡಿಕಾರಿದ ರಾಕ್‌ಲೈನ್ ವೆಂಕಟೇಶ್..!

ಮೈಸೂರು, ಮಾರ್ಚ್ 2 : ಅಂಬರೀಶ್ ಬಗ್ಗೆ ಮಂಡ್ಯಕ್ಕೆ ಅವರ ಕೊಡುಗೆಯೇನು ಎಂದು ಹಗುರವಾಗಿ ಮಾತನಾಡಿದ ಸಿಎಂ ಕುಮಾರಸ್ವಾಮಿ ವಿರುದ್ಧ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಕಿಡಿಕಾರಿದ್ದಾರೆ. ಸುಮಲತಾ ಅಂಬರೀಶ್ ರವರೊಡನೆ ಸುತ್ತೂರು ಶ್ರೀ ಶಿವರಾತ್ರಿ ದೇಶಿಕೇಂದ್ರ ಶ್ರೀಗಳನ್ನು ಭೇಟಿಯಾದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್..

ಅಂಬರೀಶ್ ಬದುಕಿದ್ದಾಗ ಒಂದು ರೀತಿ, ಆದರೆ ಈಗಿನ ಪರಿಸ್ಥಿತಿಯೇ ಬೇರೆ.. ಅವರು ಬದುಕಿದ್ದಾಗ ಅವ್ರ ಮುಂದೆ ಮಾತನಾಡಲು ಆಗದಿದ್ದವರು ಈಗ ಏನೇನೋ ಮಾತನಾಡುತ್ತಿದ್ದಾರೆ. ಬದುಕಿದ್ದಾಗ ಗೌರವ ಕೊಡುತ್ತಿದ್ದವರು ಈಗ ವ್ಯತಿರಿಕ್ತವಾಗಿ ಮಾತನಾಡುತ್ತಿದ್ದಾರೆ.ಮುಂದೆ ಮಂಡ್ಯದ ಜನ ಎಲ್ಲದಕ್ಕೂ ಉತ್ತರ ಕೊಡ್ತಾರೆ ಎಂದು ನಿರ್ಮಾಪಕ ರಾಕ್​ಲೈನ್​ ವೆಂಕಟೇಶ್​, ಸಿಎಂ ಕುಮಾರಸ್ವಾಮಿಗೆ ಪರೋಕ್ಷವಾಗಿ ಟಾಂಗ್​ ನೀಡಿದ್ದಾರೆ.

 

ಇನ್ನೊಬ್ಬರ ಬಗ್ಗೆ ಈಗೆ ವ್ಯತಿರಿಕ್ತವಾಗಿ ಹಗುರವಾಗಿ ಮಾತನಾಡುವುದು ಸರಿಯಲ್ಲ . ಅಂಬರೀಶ್ ಅವರ ಬಗ್ಗೆ ಕೆಟ್ಟದಾಗಿ ಮಾತನಾಡಿದರೇ ನೋವಾಗುತ್ತದೆ ಎಂದು ನೆಚ್ಚಿನ ಅಣ್ಣ ಅಂಬಿ ನೆನೆದು ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್ ಗದ್ಗದಿತರಾದರು. ಸುಮಲತಾ ಅಕ್ಕನ ಜೊತೆ ನಾವಿದ್ದೇವೆ ಮುಂದೆಯೂ ಇರ್ತೇವಿ ಎಂದು ಭರವಸೆಯನ್ನ ನೀಡುವುದರ ಮೂಲಕ ಆಥ್ಮಸ್ಥೈರ್ಯವನ್ನ ತುಂಬಿದರು