ಅವರು ಅರೆಸ್ಟ್ ಆಗಿದ್ದರಿಂದ ಗ್ರಾಮೀಣ ಭಾಗದ ಜನರು ರಿಲಾಕ್ಸ್. ಯಾಕೇ ಗೊತ್ತಾ ಹಾಗಾದ್ರೆ ಈ‌‌ ಸುದ್ದಿ ಓದಿ..

ಧಾರವಾಡ ಜಿಲ್ಲೆಯ ಗ್ರಾಮೀಣ ಭಾಗವನ್ನು ಟಾರ್ಗೆಟ್ ಮಾಡಿಕೊಂಡು ಮನೆಗಳ್ಳತನ ಮಾಡ್ತಾಯಿದ್ದ ಕಿಲಾಡಿ ಮನೆಗಳ್ಳರನ್ನು ಕಲಘಟಗಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬೀಗ ಹಾಕಿದ ಹಳ್ಳಿಯ ಮನೆಗಳ ಹಿಂಬಾಗಿಲಿನಿಂದ ಹೋಗಿ ಮನೆಯಲ್ಲಿನ ನಗದು ಹಾಗೂ ಚಿನ್ನಾಭರಣ ಕಳ್ಳತನ ಮಾಡ್ತಾಯಿದ್ದ ಖದೀಮರು.ಧಾರವಾಡ ಜಿಲ್ಲೆಯ ಕುಂದಗೋಳ, ಕಲಘಟಗಿ, ನವಲಗುಂದ ‌ಸೇರಿದಂತೆ ಧಾರವಾಡ ತಾಲೂಕಿನ ಬಹುತೇಕ ಗ್ರಾಮಗಳಲ್ಲಿ‌ ಕಳ್ಳತನ ಮಾಡಿ‌ ಬೇರೆ ಜಿಲ್ಲೆಗಳಿಗೆ ಲಗ್ಗೆ ಇಡ್ತಾಯಿದ್ರು. ಇವರ ಮೇಲೆ‌‌ ಜಿಲ್ಲೆಯ ಹಲವು ಪೊಲೀಸ್ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿವೆ..

ಬಳ್ಳಾರಿ ಜಿಲ್ಲೆಯ ಶಂಕರ ನಾಯ್ಕ ಮತ್ತು ಶಿವಾನಂದ ಎನ್ನುವ ಆರೋಪಿಯನ್ನು ಬಂಧಿಸಿದ ಪೊಲೀಸರು ಆರೋಪಿಗಳಿಂದ 20 ಲಕ್ಷ ಮೌಲ್ಯದ 650 ಗ್ರಾಂ ಚಿನ್ನಾಭರಣ ವಶ ಪಡೆಸಿಕೊಂಡಿದ್ದಾರೆ.

ಗ್ರಾಮೀಣ ಭಾಗದ ಜನರಲ್ಲಿ ಭಯದ ವಾತಾವರಣ ನಿರ್ಮಾಣ ಮಾಡಿದ ಅಂತರರಾಜ್ಯ ಕಳ್ಳರನ್ನು ಜೈಲಿಗೆ ಕಳಿಸಲಾಗಿದ್ದು, ಗ್ರಾಮೀಣ ಭಾಗದ ಜನರು ನಿಟ್ಟುಸಿರು ಬಿಡುವಂತಾಗಿದೆ..