ಈ ಬಾರಿ ಹುಟ್ಟು ಹಬ್ಬ ಆಚರಿಸಿಕೊಳ್ಳುವುದಿಲ್ಲ ಎಂದ ಸ್ಯಾಂಡಲ್‌ವುಡ್ “ಪವರ್ ಸ್ಟಾರ್”..

ಸ್ಯಾಂಡಲ್‌ವುಡ್ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಾಡಿದ್ದು ಮಾರ್ಚ್ 17ಕ್ಕೆ 44ನೇ ವರ್ಷಕ್ಕೆ ಕಾಲಿಡುತ್ತಿದ್ದಾರೆ. ಆದ್ರೆ ಪುನಿತ್ ರಾಜ್​ಕುಮಾರ್ ಈ ಬಾರಿ ಅಭಿಮಾನಿಗಳೊಂದಿಗೆ ಹುಟ್ಟುಹಬ್ಬವನ್ನ ಆಚರಿಸಿಕೊಳ್ಳುವುದಿಲ್ಲ ಅಂತ ಹೇಳಿದ್ದಾರೆ.

 

ನಾಳೆ ರಾತ್ರಿ ನಾನು ಮನೆಯಲ್ಲಿರುವುದಿಲ್ಲ. ಅಭಿಮಾನಿಗಳು ಮನೆ ಹತ್ತಿರ ಬರುವುದು ಬೇಡ. ಮತ್ತೆ 17ಕ್ಕೆ ವಾಪಸ್​ ಬರುತ್ತೇನೆ. ಅವತ್ತು ದಯಮಾಡಿ ಯಾರೂ ಕೇಕ್ , ಹಾರ, ಹೂಗುಚ್ಚ ಮತ್ತಿತ್ತರ ಗಿಫ್ಟ್ ತರಬೇಡಿ ಅಂತ ಮನವಿ ಮಾಡಿಕೊಂಡಿದ್ದಾರೆ.