ಕೊಡಗಿನ ಹಲವೆಡೆ ಶಾಲಾಕಾಲೇಜು ಪುನರಾರಂಭ- ಇಂದು ಮಾಜಿಸಿಎಂ ಸಿದ್ಧು ಭೇಟಿ!

 

ಮಹಾಮಳೆಗೆ ತತ್ತರಿಸಿ ಹೋಗಿದ್ದ ಕೊಡಗು ಜಿಲ್ಲೆಯಲ್ಲೀಗ ಮಳೆ ಪ್ರಮಾಣ ತಗ್ಗಿದ್ದು, ಜನ್ರು ಕೊಂಚ ನಿರಾಳರಾಗಿದ್ದಾರೆ. ಜಿಲ್ಲೆಯಲ್ಲಿ ಭಾಗಶ: ಶಾಲಾ ಕಾಲೇಜುಗಳು ಇಂದಿನಿಂದ ಆರಂಭಗೊಂಡಿದ್ದು, ಶಾಲಾ ಕಟ್ಟಡಗಳು ಸುರಕ್ಷಿತವಾಗಿರುವ ಕಡೆಗಳಲ್ಲಿ ಪಾಠ ಆರಂಭಿಸಲು ಸೂಚನೆ ನೀಡಲಾಗಿದೆ.

 

 

 ಇನ್ನೂ ಮಡಿಕೇರಿಯಲ್ಲಿ ಪ್ರಕೃತಿ ವಿಕೋಪ ಭಾದಿತದಿಂದ ಹೆಬ್ಬಟ್ಟಗೇರಿ, ಕಾಲೂರು, ಬೆಟ್ಟತ್ತೂರು ಸೇರಿದಂತೆ ಅನೇಕ ಗ್ರಾಮಗಳು ಹಾಗೂ ಶಾಲಾ-ಕಾಲೇಜುಗಳು, ಅಂಗನವಾಡಿಗಳಿಗೆ ರಜೆ ಘೋಷಿಲಾಗಿದೆ. ಇಲ್ಲಿ ಶಾಲಾ-ಕಾಲೇಜು,ಅಂಗನವಾಡಿ ಕಟ್ಟಡಗಳೇ ಹಾನಿಗೊಳಗಾಗಿದ್ದು, ಶಾಲಾ-ಕಾಲೇಜುಗಳನ್ನು ಸಂಪರ್ಕಿಸುವ ರಸ್ತೆಗಳು ಹಾನಿಗೊಳಗಾಗಿದೆ. ಹೀಗಾಗಿ ಅಂತ ಪರಿಸ್ಥಿತಿ ಇರುವ ಕಡೆಗಳಲ್ಲಿ ಶಾಲೆ-ಕಾಲೇಜುಗಳಿಗೆ ರಜೆ ಮುಂದುವರಿಸಲಾಗಿದೆ.

 

ಇನ್ನು ಮಳೆಯಿಂದ ಸಂತ್ರಸ್ಥ ಕೊಡಗಿನ ಪರಿಸ್ಥಿತಿ ಅವಲೋಕನಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ, ಆರೋಗ್ಯ ಸಚಿವ ಯು.ಟಿ ಖಾದರ್ ಹಾಗೂ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎನ್​ ಮಹೇಶ್​ ​​ ಭೇಟಿ ನೀಡಿಲಿದ್ದಾರೆ. ನಂತ್ರ ಖಾಸಗಿ ಹೋಟೆಲ್​ ಒಂದರಲ್ಲಿ ಸುದ್ದಿಗೋಷ್ಠಿ ನಡೆಸಲಿದ್ದಾರೆ. ಇನ್ನೂ ನಾಳೆ ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್​ ಕೂಡ ಕೊಡಗು ಜಿಲ್ಲೆಗೆ ಭೇಟಿ ನೀಡಲಿದ್ದಾರೆ.