ರಾಯಚೂರಿನಲ್ಲಿ ಹಿರಿಯ ನಟ ದೊಡ್ಡಣ್ಣ ಅಸ್ವಸ್ಥ- ಆ್ಯಂಬುಲೆನ್ಸ್​ ಮೂಲಕ ಬೆಂಗಳೂರಿಗೆ ರವಾನೆ!

ಸ್ಯಾಂಡಲ್‌ವುಡ್​​ನ ಹಿರಿಯ ನಟ ದೊಡ್ಡಣ್ಣ ಅಸ್ವಸ್ಥಗೊಂಡಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ರಾಯಚೂರಿನಿಂದ ಬೆಂಗಳೂರಿಗೆ ಕರೆತರಲಾಗ್ತಿದೆ. ರಾಯಚೂರಿನ ದೇವಸಗೂರಿನಲ್ಲಿರುವ ಸೂಗೂರೇಶ್ವರ ದೇವಸ್ಥಾನಕ್ಕೆ ನಟ ದೊಡ್ಡಣ್ಣ ಕುಟುಂಬಸ್ಥರ ಜೊತೆ ದರ್ಶನಕ್ಕೆ ತೆರಳಿದ್ದರು.
ಈ ವೇಳೆ ದೇವರ ದರ್ಶನ ಪಡೆಯಲು ಸರತಿ ಸಾಲಿನಲ್ಲಿ ನಿಂತಿದ್ದ ವೇಳೆ ದೊಡ್ಡಣ್ಣ ಕೊಂಚ ಆಯಾಸಗೊಂಡು ಅಸ್ವಸ್ಥರಾಗಿದ್ದರು. ತಕ್ಷಣ ಅವರನ್ನು ವಿಶ್ರಾಂತಿಗಾಗಿ ಕುಟುಂಬ ಸಮೇತ ವಸತಿ ಗೃಹಕ್ಕೆ ಕರೆತರಲಾಗಿತ್ತು. ಆದರೇ ವಸತಿ ಗೃಹದಲ್ಲಿದ್ದ ವೇಳೆ ಮತ್ತೆ ದೊಡ್ಡಣ್ಣ ಅವರಿಗೆ ಲೋ ಬಿಪಿ ಉಂಟಾಗಿದ್ದರಿಂದ ವಸತಿ ಗೃಹದ ಬಾತ್​ರೂಂನಲ್ಲಿ ಅವರು ಕುಸಿದು ಬಿದ್ದಿದ್ದರು.

ತಕ್ಷಣವೇ ಅವರನ್ನು ಚಿಕಿತ್ಸೆಗಾಗಿ ಆರ್​ಟಿಪಿಎಸ್​ ಆಸ್ಪತ್ರೆಗೆ ದಾಖಲಿಸಲಾಗಿತ್ತು. ವೈದ್ಯರಾದ ಡಾ.ರಮೇಶ್ ಜಗ್ಗಿ ಅವರಿಗೆ ಚಿಕಿತ್ಸೆ ನೀಡಿದ್ದಾರೆ. ಆದರೇ ಹೆಚ್ಚಿನ ಚಿಕಿತ್ಸೆ ಅಗತ್ಯವಿರೋದರಿಂದ ಅವರನ್ನು ತಕ್ಷಣ ಆ್ಯಂಬುಲೆನ್ಸ್​ನಲ್ಲಿ ಬೆಂಗಳೂರಿಗೆ ರವಾನಿಸಲಾಗಿದೆ. ಬೆಂಗಳೂರಿಗೆ ಆಗಮಿಸಿದ ಬಳಿಕ ಮತ್ತೆ ದೊಡ್ಡಣ್ಣ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದುಕೊಳ್ಳುವ ಸಾಧ್ಯತೆ ಇದೆ.