ಉ ಕ ಪ್ರತ್ಯೇಕ ರಾಜ್ಯ ಬೇಡಿಕೆಗೆ ಕಲಬುರಗಿಯ ಶ್ರೀ ಶರಣಬಸಪ್ಪ ಅಪ್ಪಾ ವಿರೋಧ

ಕಲಬುರಗಿ ಉತ್ತರ ಕರ್ನಾಟಕ ಭಾಗವನ್ನ ಕಡೆಗಣಿಸಲಾಗುತ್ತಿದೆಂದು ಆಕ್ರೋಶ ವ್ಯಕ್ತಪಡಿಸಿ ಪ್ರತ್ಯೇಕ ರಾಜ್ಯ ಬೇಡಿಕೆ ಇಟ್ಟಿರುವುದಕ್ಕೆ ಕಲಬುರಗಿಯ ಮಹಾದಾಸೋಹಿ ಶ್ರೀ‌ಶರಣಬಸವೇಶ್ವರ ಸಂಸ್ಥಾನದ ಪೀಠಾಧಿಪತಿ ಶ್ರೀ ಶರಣಬಸಪ್ಪ ಅಪ್ಪಾ ತೀವ್ರ ವಿರೋಧಪಕ್ತಪಡಿಸಿದ್ದಾರೆ‌. ಕಲಬುರಗಿಯಲ್ಲಿಂದು ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅಪ್ಪಾ, ಉತ್ತರ ಕರ್ನಾಟಕ ಭಾಗ ಅಭಿವೃದ್ದಿಯಿಂದ ಹಿಂದುಳಿಯಲು ಈ ಭಾಗದ ಶಾಸಕರುಗಳೇ ಕಾರಣ ಅಂತಾ ಅಸಮಾಧಾನ ವ್ಯಕ್ತಪಡಿಸಿದರು.

ಒಂದು ವೇಳೆ ಉತ್ತರ ಕರ್ನಾಟಕ ಅಭಿವೃದ್ದಿಯಾಗಿಲ್ಲ ಅಂದರೆ ಈ ಭಾಗದ ಶಾಸಕರುಗಳು ಒಗ್ಗಾಟ್ಟಾಗಿ ಸದನದಲ್ಲಿ ಸರ್ಕಾರದ ಮೇಲೆ ಒತ್ತಡ ಹೇರಿ ಅಭಿವೃದ್ದಿಯಾಗುವಂತೆ ನೋಡಿಕೊಳ್ಳಲಿ..ಅದು ಬಿಟ್ಟು ಅಖಂಡ‌ ಕರ್ನಾಟಕ ಭಾಗವನ್ನ ಒಡೆದು ಉತ್ತರ ಕರ್ನಾಟಕ ಭಾಗವನ್ನ ಪ್ರತ್ಯೇಕ ರಾಜ್ಯವನ್ನಾಗಿ ಮಾಡುವೆನ್ನುವುದು ಎಷ್ಟರ ಮಟ್ಟಿಗೆ ಸರಿ ಅಂತಾ ಪ್ರಶ್ನಿಸಿದರು. ಉತ್ತರ ಕರ್ನಾಟಕ ಭಾಗದಲ್ಲಿ ಜೆಡಿಎಸ್‌ಗೆ ಜನ ಬೆಂಬಲಿಸಿಲ್ಲ, ಅದಕ್ಕಾಗಿ ಈ ಭಾಗವನ್ನ ಕುಮಾರಸ್ವಾಮಿ ನಿರ್ಲಕ್ಷ ಮಾಡುತ್ತಿದ್ದಾರೆ ಎಂಬ ಆರೋಪ‌ ನಿಜವು ಇರಬಹುದು ಅಂತಾ ಶ್ರೀ ಶರಣಬಸಪ್ಪ ಅಪ್ಪಾ ಅಭಿಪ್ರಾಯ ಪಟ್ಟರು..